ಮತ್ತೇ ಮರುಕಳಿಸಿದ ನಿಂದನೆ ಮತ್ತು ಬಾಡಿ ಲೈನ್ ಬೌಲಿಂಗ್

Webdunia
ಸತೀಶ್ ಪಾಗಾದ್
ಅಂತೂ ಕೊನೆಗೂ ಇತಿಹಾಸ ಟ್ರೆಂಟ್ ಬ್ರಿಡ್ಜ್‌ನಲ್ಲಿ ಎರಡು ರೀತಿಯಲ್ಲಿ ಮರುಕಳಿಸಿತು. ಭಾರತ ಇಂಗ್ಲೆಂಡ್ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಮೊದಲ ಪಂದ್ಯವನ್ನು ಡ್ರಾಮಾಡಿಕೊಂಡರೆ ಮುಗಿತು. ಅದು ಇಂಗ್ಲೆಂಡ್ ಪಾಲಿಗೆ ಸರಣಿ ಸೋಲಿನ ಬುತ್ತಿ ಕಟ್ಟಿಟ್ಟಂತೆ..

ಇನ್ನೊಂದು ಟ್ರೆಂಟ್‍‌‌ಬ್ರಿಡ್ಜ್‌ನಲ್ಲಿ ಭಾರತ ಒಂದು ಬಾರಿ ಸೋತ ಇತಿಹಾಸವೇ ಇಲ್ಲ. ಐದು ಬಾರಿ ಇಂಗ್ಲೆಂಡ್ ವಿರುದ್ದ ಟೀಮ್ ಇಂಡಿಯಾ ಐದು ಬಾರಿಯೂ ಗೆದ್ದು ಬಿಟ್ಟಿದ್ದಾರೆ.ಅದು ಈ ಬಾರಿ ಎಂತಾ ಗೆಲುವು ಅಬ್ಬಬ್ಬಾ..

ಟೀಮ್ ಇಂಡಿಯಾದ ಬಲಿಷ್ಟ ಬ್ಯಾಟಿಂಗ್ ಪಡೆ, ಬ್ರಿಟಿಷರನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಅಟ್ಟಾಡಿಸಿ ಹೊಡೆದು ಬಿಟ್ಟಿತು. ಅದ್ಯಾರೊ ಅಂದಿದ್ದರಂತೆ ದಿನೇಶ ಕಾರ್ತಿಕು ಪ್ರೊಪೆಷನಲ್ ಓಪನರ್ ಅಲ್ಲ. ಅವನಿಗೆ ಬ್ಯಾಟಿಂಗ್ ಟೆಕ್ನಿಕ್ ಗೊತ್ತಿಲ್ಲ ಎಂದು. ಕಾರ್ತಿಕ್ ಆಟ ಟ್ರೆಂಟ್‌ಬ್ರಿಡ್ಜ್‌ನಲ್ಲಿ ಬೆರಳು ಮಡಚಬೇಕು ಹಂಗಿತ್ತು.

ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್‌ನಿಂದಾಗಿ ರನ್ ಬರ ಎದುರಿಸಿದ್ದವರಿಗೆ, ಎರಡನೆ ಟೆಸ್ಟ್‌ ಪಂದ್ಯದಲ್ಲಿ ಅರಿವಾಗಿತ್ತು. ಅದಕ್ಕೆ ಅಷ್ಟು ಚಂದವಾಗಿ ಆಡಿದರು. ಫೋರ್ಡ್ ಅಂತ ಚೆನ್ನೈಗೆ ಬಂದಿದ್ದನಲ್ಲ. ನೆನಪು ಉಂಟಾ ? ಕೋಚ್ ಹುದ್ದೆ ನಿರಾಕರಿಸುವ ಸಮಯದಲ್ಲಿ ಒಂದು ಮಾತು ಹೇಳಿದ್ದ. ಇಪ್ಪತ್ತು ದಿನದಲ್ಲಿ ದ. ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ದ ತಂಡ ಕಟ್ಟಲಿಕ್ಕೆ ಸಾಧ್ಯವಿಲ್ಲ. ಟೀಮ್ ಇಂಡಿಯಾ ಕೋಚ್ ಆಗಿ ನೇಮಕಗೊಂಡ ನಂತರ ತಂಡ ಸೋತು ಬಿಟ್ಟರೆ ನನ್ನ ಇಮೇಜು ಖರಾಬ್ ಆಯ್ತದೆ ಅದಕ್ಕೆ ಒಲ್ಲೆ ಎಂದು ಹೇಳಿದ್ದ. ಈಗೇನು ಹೇಳ್ತಾನೆ ?

ದ. ಆಫ್ರಿಕಾ ವಿರುದ್ದ ನಮ್ಮ ಹುಡುಗರು ಜ್ವರದಲ್ಲಿ ಆಡಿ ಸಿರಿಸ್‌ ಗೆದ್ದು ಬಂದರಲ್ಲ. ಅದು ಹೊಗಲಿ ಇಂಗ್ಲೆಂಡ್‌ನವರ ಪರಿಸ್ಥಿತಿ ಎನಾತು ? ಸೋಲು ಸಹಿಸಿಕೊಳ್ಳಲು ಆಗದೇ ಬಾಡಿ ಲೈನ್ ಬೌಲಿಂಗ್ ಮಾಡಿದ್ದು, ಮತ್ತು ಜಹೀರ್ ಖಾನ್‌ನ್ನು ವಿನಾಕಾರಣ ಕೆಣಕಿ ತಮ್ಮ ಗೋರಿ ತಾವೇ ತೋಡಿಕೊಂಡರು. ಅದೇನೊ ಅಂತಾರಲ್ಲ ಕಣಜಿರಗೆ ಹುಳಾನ ಕೆಣಕಬಾರದಂತೆ. ಕೆಣಕಿದ್ದು ಅಲ್ಲದೆ ಅಮ್ಯಾಕೆ ತಪ್ಪಾತು ಎಂದು ಮೈಕೆಲ್ ವಾನ್ ಹೇಳಿದ್ದು ಗ್ಯಾಪಕಕ್ಕೆ ಬತ್ತದೆ.

ನಮ್ಮವರು ಅಷ್ಟೆ ಅದರಲ್ಲೂ ಶ್ರೀಶಾಂತ್ ಎಗರಾಡಿದ್ದಕ್ಕೆ ರಂಜನ್ ಮದುಗಲೆ ಸರಿಯಾಗಿ ಇಡಬೇಕಾದ ಜಾಗದಲ್ಲಿ ಇಟ್ಟಿದ್ದಾನೆ. ಕುಣಿಯಲಾರದವಳು ನೆಲ ಡೊಂಕು ಎಂದು ಹಾರಾಡಿ ಅತ್ತಿದ್ದಳಂತೆ ಹಂಗಾಯ್ತು ಶ್ರೀಶಾಂತ್ ಪರಿಸ್ಥಿತಿ. ವಿಕೆಟ್ ಕೀಳೊಕೆ ಆಗದೇ ವಾನ್ ಮೇಲೆ ಎರಗಿದ್ದಕ್ಕೆ. ಪಂದ್ಯದ ಅರ್ಧ ದುಡ್ಡನ್ನು ಐಸಿಸಿಗೆ ತೆರಬೇಕಾಯಿತು.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

India vs Pak: ದೀಪ್ತಿ ಶರ್ಮಾ ಕೈಚಳಕಕ್ಕೆ ತತ್ತರಿಸಿದ ಪಾಕ್‌: ಟಿ20 ವಿಶ್ವಕಪ್‌ನಲ್ಲಿ ಭಾರತ ಶುಭಾರಂಭ

IND vs AFG: ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಟೀಂ ಇಂಡಿಯಾ, ಅಫ್ಘಾನಿಸ್ತಾನ ಪಂದ್ಯಕ್ಕೆ ಅಡ್ಡಿ

IND vs AFG: ಅಫ್ಘಾನಿಸ್ತಾನ ವಿರುದ್ಧ ಇಂದು ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್

ಮಗಳು ಸಾರಾ, ಸೊಸೆ ಸಾನಿಯಾ ಜತೆ ಸಚಿನ್ ತೆಂಡೂಲ್ಕರ್ ವಿಮಾನದಲ್ಲಿ ಹೇಗೆ ಕ್ರಿಕೆಟ್ ಆಡಿದ್ರೂ ನೋಡಿ, ಕ್ಯೂಟ್ Video

ಭಾರತೀಯ ಶೂಟಿಂಗ್ ದಿಗ್ಗಜ ಜಸ್ಪಾಲ್ ರಾಣಾ ಇನ್ನಿಲ್ಲ

Show comments