Webdunia - Bharat's app for daily news and videos

Install App

ಇಸ್ಲಾಂ ಧರ್ಮದ ವೈಶಿಷ್ಠ್ಯಗಳು

ಇಳಯರಾಜ
ಪ್ರವಾದಿ ಮುಹ್ಮದ್(570-632) ಕ್ರಿಸ್ತಶಕ 610ರಲ್ಲಿ ಈ ಧರ್ಮವನ್ನು ಹುಟ್ಟು ಹಾಕಿದರು. ಅವರು ಬೋಧಿಸಿರುವ ಪ್ರವಚನಗಳಾದ ಖುರಾನ್ಅನ್ನು ಮುಸ್ಲಿಮರ ಪವಿತ್ರಗ್ರಂಥವೆಂದು ಪರಿಗಣಿಸಲಾಗಿದೆ.

ಕೊರಾನ್‌ಅನ್ನು ಮುಹ್ಮದ್ ಅವರು ಬೋಧಿಸಿದ್ದರೂ, ಇಸ್ಲಾಂ ಧರ್ಮ ಪ್ರವಾದಿಯವರು ಭೂಮಿಗೆ ಬರುವ ಮುನ್ನವೆ, ಆರಂಭವಾಗಿತ್ತು ಎಂದು ಹೇಳಲಾಗಿದೆ. ಕೊರಾನ್ ಅನ್ನು ದೇವರು ಗೇಬ್ರಿಯಲ್ ಮೂಲಕ ಪ್ರವಾದಿಯವರಿಗೆ ಬೋಧಿಸಿದ್ದಾರೆ ಎಂದು ಕೊರಾನ್ ಹೇಳುತ್ತದೆ.

ಇಸ್ಲಾಂ ಧರ್ಮದ ಐದು ಆಧಾರ ಸ್ತಂಭಗಳು
ಓರ್ವ ಮುಸ್ಲಿಂ, ಈ ಐದು ಪ್ರಮುಖ ವಿಧಾನಗಳನ್ನು ಅನುಸರಿಸುವ ಮೂಲಕ ತನ್ನನ್ನು ತಾನು ಅಲ್ಲಾನಿಗೆ ಸಮರ್ಪಿಸಿಕೊಳ್ಳುತ್ತಾನೆ.

ಶಹದ್, ಸಲಾತ್, ಝಕತ್, ರಮದಾನ್(ಸವುಮ್) ಹಾಗೂ ಹಜ್ ಇವುಗಳು ಇಸ್ಲಾಂ ಧರ್ಮದ ಅನುಯಾಯಿಗಳು ಅನುಸರಿಸಬೇಕಿರುವ ಐದು ಅವಶ್ಯಕ ಅಂಶಗಳು.

ಶಹದ್ ಅಂದರೆ ಏಕದೇವರ ಪ್ರತಿಪಾದನೆ. ದೇವರು ಒಬ್ಬನೆ ಹಾಗೂ ಅವನೇ ಅಲ್ಲಾ ಮತ್ತು ಮುಹ್ಮದ್ ಅವರ ಪ್ರವಾದಿ ಎಂಬುದಾಗಿ ಇಸ್ಲಾಂ ಧರ್ಮ ಹೇಳುತ್ತದೆ.

ಸಲತ್ ಅಂದರೆ, ಪ್ರಾರ್ಥನೆಯ ದೈಹಿಕ ಕ್ರಿಯೆ. ದಿನಕ್ಕೆ ಐದು ಬಾರಿ ಮುಸ್ಲಿಮರು ಮೆಕ್ಕಾದತ್ತ ಮುಖಮಾಡಿ ಅಲ್ಲಾನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ನಸುಕಿನಲ್ಲಿ, ಮಧ್ಯಾಹ್ನ, ಅಪರಾಹ್ನ, ಸೂರ್ಯಾಸ್ತ ಹಾಗೂ ಮುಸ್ಸಂಜೆಯ ವೇಳೆಗೆ ಇಸ್ಲಾಂ ಧರ್ಮದ ಅನುಯಾಯಿಗಳು ನಮಾಜ್ ಮೂಲಕ ಪ್ರಾರ್ಥನೆ ಸಲ್ಲಿಸುತ್ತಾರೆ.

ಝಕತ್ ಅಂದರೆ ದಾನ. ಮುಸ್ಲಿಂ ಧರ್ಮದ ಪ್ರಕಾರ ತಾವೇನು ಹೊಂದಿದ್ದೇವೆಯೋ ಅದರ ಶೇ. ಎರಡೂವರೆ ಭಾಗವನ್ನು ಉಳ್ಳವರು ಇಲ್ಲದವರಿಗೆ ದಾನ ಮಾಡಬೇಕು.

ಇಸ್ಲಾಂ ಕ್ಯಾಲೆಂಡರಿನ ರಮದಾನ್ ಪವಿತ್ರ ತಿಂಗಳಿನಲ್ಲಿ ಆರೋಗ್ಯವಂತ ಮುಸ್ಲಿಮರು ತಿಂಗಳು ಪೂರ್ಣ ನಸುಕಿನಿಂದ ಸೂರ್ಯಾಸ್ತದ ತನಕ ಉಪವಾಸ ಆಚರಿಸುವುದನ್ನು ಸವುಮ್ ಎಂದು ಕರೆಯಲಾಗುತ್ತದೆ.

ಈ ವೇಳೆ ಊಟ, ತಿಂಡಿ, ಪಾನೀಯ, ಧೂಮಪಾನ ಹಾಗೂ ಲೈಂಗಿಕ ಚಟುವಟಿಕೆಗಳಿಂದ ದೂರ ಉಳಿಯಬೇಕು. ಸ್ವಯಂ ಶಿಸ್ತಿನ ಅಳವಡಿಕೆ ಹಾಗೂ ದೇವರ ಮೇಲಿನ ಅವಲಂಬನೆ ಹಾಗೂ ಹಸಿದವರ ಮೇಲಿನ ಅನುಕಂಪಕ ಪವಿತ್ರ ತಿಂಗಳಿನ ಉಪವಾಸದ ಮೂಲಮರ್ಮ ಎಂಬುದಾಗಿ ಧರ್ಮ ಹೇಳುತ್ತದೆ.

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ