Select Your Language

Notifications

webdunia
webdunia
webdunia
webdunia

ಮಾತೆ ಖತೀಜಾವಿನ ಮರಣ

ಮಾತೆ ಖತೀಜಾವಿನ ಮರಣ

ಇಳಯರಾಜ

ನಬಿ(ಸಲ್) ಅವರಿಗೆ ಪ್ರವಾದಿ ಪದವಿ ನೀಡಿದ ಹತ್ತನೆಯ ವರ್ಷದಲ್ಲಿ ಅಬೂತಾಲಿಬ್ ಮರಣವನ್ನಪ್ಪಿದ. ಈ ಮಹಾನ್ ದುಃಖ ಅನುಭವಿಸುತ್ತಿರುವಾಗಲೇ ರಮ್ಜಾನ್ ಮೂರನೇ ದಿನ ಮಾತೆ ಖತೀಜಾ(ರಲಿ) ಇಹಲೋಕವನ್ನು ತ್ಯಜಿಸಿದರು.

ಆಗ ಅವರಿಗೆ ಅರುವತ್ತೈದು ವರ್ಷ ವಯಸ್ಸಾಗಿತ್ತು. ಅವರ ದೇಹವನ್ನು ಹಜಾನ್ ಎಂಬ ಸ್ಥಳದಲ್ಲಿ ಸಂಸ್ಕಾರ ಮಾಡಲಾಯಿತು. ಅವರ ಸಮಾಧಿಯ ಬಳಿಯೇ ತು ಆ ಮಾಡಿದರು. ನಬಿ(ಸಲ್) ಅವರು ಆಕೆಯೊಂದಿಗೆ ಇಪ್ಪತ್ತೈದು ವರ್ಷಗಳು ಜೀವನ ನಡೆಸಿದರು.

ಮಾತೆಯ ನಿಧನದಿಂದ ಪ್ರವಾದಿ ತುಂಬಾ ದುಃಖಗೊಂಡರು. ಇದು ಮತ್ತಷ್ಟು ಹೆಚ್ಚಾದುದರಿಂದ ಮನೆಯಿಂದ ಹೊರಗೆ ಬರುವುದನ್ನೇ ನಿಲ್ಲಿಸಿಬಿಟ್ಟರು. ಈ ಕಾರಣದಿಂದ ಆ ವರ್ಷಕ್ಕೆ 'ಆಮುಲ್‌ಹುಜ್ನ್' ಎಂದರೆ ಕಳವಳದ ವರ್ಷ, ದುಃಖಕರವಾದ ವರ್ಷವೆಂದು ಹೆಸರು ನೀಡಲಾಯಿತು.

ಮಾತೆ ಖತೀಜಾ ಬದುಕಿದ್ದಾಗ ಆಕೆಯ ಬಗೆಗೆ ಖುರೇಷಿಗಳಲ್ಲಿ ಹೆದರಿಕೆಯಿತ್ತು. ಮರೆಯಲ್ಲಿಯೇ ಇದ್ದು ನಬಿ(ಸಲ್) ಅವರಿಗೆ ಕಿರುಕುಳ ನೀಡುತ್ತಿದ್ದರು. ಆಕೆಯ ಮರಣಾನಂತರ ಅವರಿಗೆ ಅಂತಹ ಭಯ ಹೊರಟುಹೋಯಿತು. ನಿರ್ಭಯವಾದರು.ನಬಿ(ಸಲ್) ಅವರಿಗೆ ಹಲವಾರು ತೊಂದರೆಗಳನ್ನು ಕೊಡಲು ಪ್ರಾರಂಭಿಸಿದರು.

ಉದಾಹರಣೆಗೆ, ಒಂದು ದಿನ ನಬಿ(ಸಲ್) ಅವರು ಖರೈಷಿಗಳು ವಾಸವಿದ್ದ ಸ್ಥಳದ ಸಮೀಪ ಹೋಗುತ್ತಿದ್ದರು. ಅವರ ಮೇಲೆ ಒಬ್ಬ ದುಷ್ಟನನ್ನು ದೌರ್ಜನ್ಯಕ್ಕಾಗಿ ಬಿಟ್ಟರು. ಅವನು ಪ್ರವಾದಿಯವರ ಮೇಲೆ ಮಣ್ಣು ಸುರಿದರು. ಅದೇ ಸ್ಥಿತಿಯಲ್ಲಿಯೇ ಅವರು ಬೇರೆ ದಾರಿ ಕಾಣದೆ ಮನೆಗೆ ಹಿಂತಿರುಗಿದರು.

ನಬಿಯವರನ್ನು ಇಂತಹ ಸ್ಥಿತಿಯಲ್ಲಿ ನೋಡಿದ ಫಾತಿಮಾ ನಾಚ್ಚಿಯಾರ್ ಓಡಿಬಂದು ತಲೆ ಮೇಲಿದ್ದ ಮಣ್ಣು, ದೂಳು ಎಲ್ಲವನ್ನು ಸ್ವಚ್ಛ ಮಾಡಿದರು. ಆಗ ""ಮಗಳೇ ಅಬುತಾಲಿಕ್ ಜೀವಿಸಿದ್ದ ಕಾಲದಲ್ಲಿ ಖುರೈಷಿಗಳು ನನಗೆ ಹಿಂಸೆ ಕೊಡಲು ಹಿಂದೆಮುಂದೆ ನೋಡುತ್ತಿದ್ದರು. ನನಗೆ ರಕ್ಷಣೆ ನೀಡಿದರು. ಅಲ್ಲಾಹ್ ನಿನ್ನ ತಂದೆಗೆ ಸಹಾಯ ಮಾಡುತ್ತಾನೆ. ""ಎಂದು ಹೇಳಿದರು.

ಖತೀಜಾ(ರಲಿ) ದಿವಂಗತರಾದಾಗ ಫಾತಿಮಾ(ರಲಿ) ಅವರಿಗೆ ಸುಮಾರು ಹದಿನೈದು ವರ್ಷ ವಯಸ್ಸಾಗಿರಬಹುದು. ಖತೀಜಾ(ರಲಿ) ಅವರ ನಿಧನಾನಂತರ ಕಾಫಿರರ ಕಿರುಕುಳ ತಾಳಲಾರದಷ್ಟು ಹೆಚ್ಚಾಗಿ ನಡೆಯಲು ಪ್ರಾರಂಭವಾಯಿತು. ಈ ಕಾರಣದಿಂದ ಮಕ್ಕಾವನ್ನು ಬಿಟ್ಟು ಕಾಯಿಫ ನಗರಗಳಿಗೆ ಮತ್ತು ಇತರ ಪ್ರದೇಶಗಳಿಗೆ ತೆರಳಬೇಕಾದ ಪ್ರಸಂಗ ಒದಗಿ ಬಂತು. ಆದರೇನು! ಹೋದೆಡೆಯಲ್ಲೆಲ್ಲಾ ತೊಂದರೆಗಳು ನೆರಳಿನಂತೆ ಹಿಂಬಾಲಿಸುತ್ತಲೇ ಇದ್ದವು.

ಮತ್ತೆ ಮಕ್ಕಾಗೆ ಬಂದುಬಿಟ್ಟರು.! ಹಲರತ್ ಖತೀಜಾ(ರಲಿ) ಗತಿಸಿದ ಅದೇ ವರ್ಷ ಷವ್ವಾಲ್ ತಿಂಗಳಿನಲ್ಲಿ ಹಲರತ್ ಅಬೂಬಕ್ಕರ್ ಸಿದ್ದಿಕ್(ರಲಿ) ಅವರ ಮಗಳು ಹಲರತ್ ಆಯಿಷಾ(ರಲಿ) ಅವರನ್ನು ಮದುವೆಯಾದರು. ಆಗ ಹಲರತ್ ಆಯಿಷಾ(ರಲಿ) ಅವರ ವಯಸ್ಸು ಆರು. ಅವರೊಂದಿಗೆ ಮನೆ ತುಂಬಿಕೊಳ್ಳಲಿಲ್ಲ. ಹಲರತ್ ಸವ್‌ದಾ(ರಲಿ) ಅವರನ್ನು ವಿವಾಹವಾಗಿ ಮನೆ ತುಂಬಿಸಿಕೊಂಡರು. ಸವ್‌ದಾ(ರಲಿ) ಒಬ್ಬ ವಿಧವೆಯಾಗಿದ್ದರು.

ಡಾ. ವಿ.ಗೋಪಾಲಕೃಷ್ಣ

Share this Story:

Follow Webdunia kannada