Select Your Language

Notifications

webdunia
webdunia
webdunia
webdunia

ಇಸ್ಲಾಂ ಧರ್ಮ- ಪ್ರವಾದಿಯ ಆವಿರ್ಭಾವ

ಇಸ್ಲಾಂ ಧರ್ಮ- ಪ್ರವಾದಿಯ ಆವಿರ್ಭಾವ

ಇಳಯರಾಜ

PTI
ವಿಶ್ವದ ಅತಿ ಮುಖ್ಯ ಧರ್ಮಗಳಲ್ಲಿ ಇಸ್ಲಾಂ ಧರ್ಮವೂ ಒಂದು.ಇಸ್ಲಾಂ ಪದಕ್ಕೆ ವಿಧೇಯನಾಗು,ಭಗವಂತನ ಇಚ್ಛೆಗೆ ಅನುಗುಣವಾಗಿ ಆತ್ಮ ಸಮರ್ಪಣೆ ಮಾಡು ಮುಂತಾಗಿ ಅರ್ಥವಿದೆ.

ಇಸ್ಲಾಂ ಧರ್ಮದ ಮುಖ್ಯ ಸಂದೇಶವೆಂದರೆ ಅಲ್ಲಾಹ್ ಒಬ್ಬನೇ ಎಂದರೆ ಭಗವಂತ ಒಬ್ಬನು ಮಾತ್ರ. ಅವನೇ ಈ ವಿಶ್ವದ ಸೃಷ್ಟಾರ; ಅವನೇ ರಕ್ಷಕನೂ ಆಗಿದ್ದಾನೆ. ಏಕ ದೈವತ್ವ ಇಸ್ಲಾಂ ಧರ್ಮದ ಮೂಲ ಮಂತ್ರ.

ಮಹಮದ್ ನಬಿ ಈ ಧರ್ಮದ ಮುಖ್ಯ ಪ್ರಬೋದಕ. ವಿವಿಧ ಪ್ರಬೋದಕರ ಸಂದೇಶವನ್ನು ಒಳಗೊಂಡಿರುವ ಪವಿತ್ರ ಗ್ರಂಥ ಖುರಾನ್. ಮಹಮದ್ ನಬಿ ಈ ಧರ್ಮದ ಸ್ಥಾಪಕನಲ್ಲ ಅವನು ಪ್ರಬೋದಕರಲ್ಲಿ ಕೊನೆಯವನು. ಇಸ್ಲಾಂ ಮತದ ಪೂರ್ಣ ರೂಪವನ್ನು ಹೊರಗೆಡವಿದವನು ಮಹಮದ್ ನಬಿ ಎಂದು ನಂಬಲಾಗಿದೆ.

ಮಹಮದ್ ನಬಿ ಚಿಕ್ಕ ವಯಸ್ಸಿನಲ್ಲಿಯೇ ಅನಾಥನಾದ. ಜೀಬ್ರಿಯೇಲ್ ಎಂಬ ಪ್ರವಾದಿಯೊಬ್ಬನು ದಿವ್ಯ ಸಂದೇಶ ನೀಡಿ 'ನೀನು ಭಗವಂತನ ಸಂದೇಶವಾಹಕನಾಗು' ಎಂದನು. ಅಂದು ಪ್ರಾರಂಭವಾದ ನಬಿಯ ಬೋಧನೆ ಸತತವಾಗಿ ಜನರ ಮನಸ್ಸನ್ನು ಆಕರ್ಷಿಸಿತು.

ಮಹಮದ್ ನಬಿಯ ಜನ್ಮ ಮಕ್ಕಾದಲ್ಲಿ. ತಂದೆಯ ನಿಧನಾನಂತರ ಜನಿಸಿದ ಆತನನ್ನು ದಾಸಿಯೊಬ್ಬಳು ಸಾಕಿದಳು.ಆರನೆಯ ವಯಸ್ಸಿನಲ್ಲಿ ತಾಯಿಯು, ಎಂಟನೆಯ ವಯಸ್ಸಿನಲ್ಲಿ ಅಜ್ಜನೂ ತೀರಿಕೊಂಡರು.ತನ್ನ 25ನೇ ವಯಸ್ಸಿನಲ್ಲಿ ಮದುವೆಯಾದ. ಮಕ್ಕಾದ ಸಮೀಪದಲ್ಲಿ ಒಂದು ಗುಹೆಯಲ್ಲಿ ಸದಾ ಧ್ಯಾನ ನಿರತನಾಗಿರುತ್ತಿದ್ದ. ಇಂತಹ ಸಂದರ್ಭದಲ್ಲಿ ಜೇಬ್ರಿಯೇಲ್ ಎಂಬ ಸಂದೇಶವಾಹಕ 'ನೀನು ಭಗವಂತನ ಸಂದೇಶವಾಹಕ' ಎಂದು ಆದೇಶ ನೀಡಿದ.

ಆತನ ವಿಚಾರಧಾರೆಗಳು ಮೆಕ್ಕಾದ ಅನೇಕ ಶ್ರೀಮಂತರಿಗೆ ಹಿಡಿಸಲಿಲ್ಲ. ಸೋದರ ಮಾವ ಮತ್ತು ಹೆಂಡತಿ ಖತೀಜ ಇವರ ಮರಣಾನಂತರ ಮತ್ತಷ್ಟು ವಿರೋಧವೇರ್ಪಟ್ಟು ರಹಸ್ಯವಾಗಿ ಮದೀನಾಕ್ಕೆ ತೆರಳಿದ. ಈ ಪಲಾಯನ ಘಟನೆ ನಡೆದದ್ದು ಕ್ರಿ.ಶ.622ರಲ್ಲಿ. ಈಘಟನೆಯ ಆಧಾರದಿಂದ ಹಿಜರಿ ಶಕೆ ಅಂದಿನಿಂದ ಪ್ರಾರಂಭವಾಯಿತು. ಕೊಲೆಯ ಸಂಚಿನಿಂದ ಮಹಮದ್ ನಬಿ ಪಾರಾಗಿದ್ದ ಸಂಕೇತವಾಗಿ ಜಗತ್ತಿನ ಮುಸ್ಲಿಮರೆಲ್ಲರೂ ಈ ಕಾಲಮಾನವನ್ನು ಪರಿಗಣಿಸಿದ್ದಾರೆ.

ದೇವದೂತನಾದ ಜೇಬ್ರಿಲ್ ದೇವರು ಆಗ್ಗಿಂದಾಗ್ಗೆ ಜನರಿಗೆ ಸಂದೇಶಗಳನ್ನು ಕಳುಹಿಸುತ್ತಿದ್ದು ಅವೆಲ್ಲವೂ ಮಾರ್ಗದರ್ಶಕವಾಗಿದ್ದುದರಿಂದ ಜನರೆಲ್ಲಾ ಸಂಪೂರ್ಣವಾಗಿ ನಂಬಿದ್ದರು. ಹೀಗೆ ಸಂದೇಶಗಳನ್ನು ಪ್ರಚಾರ ಮಾಡಿದವರಲ್ಲಿ ಮಹಮದ್ ನಬಿ ಕೊನೆಯ ಪ್ರವಾದಿ. ಇಸ್ಲಾಂ ಮತವನ್ನು ಸಂಪೂರ್ಣವಾಗಿ ಪ್ರಚಾರ ಮಾಡಿದನೆಂಬ ನಂಬಿಕೆಯಿಂದ ಆ ಧರ್ಮದಲ್ಲಿ ಮಹಮದ್ ನಬಿಗೆ ಸರ್ವಶ್ರೇಷ್ಠ ಸ್ಥಾನವನ್ನು ನೀಡಲಾಗಿದೆ.

ಖುರಾನ್ ಮುಸ್ಲಿಮರಿಗೆ ಪವಿತ್ರ ಗ್ರಂಥ. ಅದರಲ್ಲಿ ಹೇಳಿರುವುದೆಲ್ಲವೂ ದೈವವಾಣಿಯೆಂದು ಇಸ್ಲಾಂ ಧರ್ಮ ಹೇಳುತ್ತದೆ. ಅವೆಲ್ಲವೂ ಸಾಕ್ಷಾತ್ ದೇವರು ಹಜರತ್ ಮಹಮದ್‌ರ ಬಾಯಿಂದ ಹೇಳಿಸಲಾಗಿದೆ ಎಂಬ ನಂಬಿಕೆ. ಖುರಾನ್‌ನಲ್ಲಿ 'ಲಾ ಇಕರಾಹ್ ಫಿದ್ದೀನ' ಎಂದರೆ ಮತ ವಿಷಯದಲ್ಲಿ ಒತ್ತಾಯ ಮಾಡಬಾರದು.(ಅನ್ಯ ಮತದವರ ದ್ವೇಷ ಸಲ್ಲದು) ಎಂದು ಹೇಳಲಾಗಿದೆ. ಆದರೆ 'ಅಲ್ಲಾಹ' ನನ್ನು ನಿರಾಕಾರನೆಂದು ಅವರು ಹೇಳುವುದಿಲ್ಲ,ನಂಬುವುದೂ ಇಲ್ಲ.

'ಅಲ್ಲಾಹ' ಸರ್ವೋತ್ತಮ ದೇವರೆಂದು ನಂಬುವ ಇಸ್ಲಾಂ ಧರ್ಮ ಭಗವಂತನಿಗೆ ಗುಣವನ್ನು ಅನುಕರಿಸಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ.'ರಬ್ಜ್' ಎಂದಾಗ ಪಾಲಕ ಹಾಗೂ ಪೋಷಕ ಸರ್ವೇಶ್ವರನನ್ನು ಕುರಿತು,ಭಗವಂತನನ್ನು ಕರುಣಾಮಯಿ ಮತ್ತು ದಯಾಮಯಿ ಎಂದು ಕೋರಿಕೆ ಸಲ್ಲಿಸುವಾಗ 'ರಹಮಾನ್,ರಹೀಮ' ಎಂದು ಕರೆಯುತ್ತಾರೆ.

ಪರಮ ಪಾವನನೂ ಪವಿತ್ರನೂ ಆದ ಭಗವಂತನನ್ನು'ಖುದ್ದೂಸ್' ಎನ್ನುತ್ತಾರೆ. ಸೃಷ್ಟಿಕರ್ತನಾದ ಅಲ್ಲಾಹನನ್ನು 'ಖಾಲಿಸ್' ಎಂದು ಸಂಭೋದಿಸುತ್ತಾರೆ.ಜ್ಞಾನಿಯಾದ ಭಗವಂತನ ಹೆಸರನ್ನು 'ಆಲಿಮ್' ಎನ್ನುತ್ತಾರೆ.ಯಾವುದೇ ಹೆಸರಿನಿಂದ ಕರೆದರೂ ಸರ್ವಾಂತರ್ಯಾಮಿಯಾದ ಭಗವಂತನಿಗೆ ಅದು ಅನ್ವಯಿಸುತ್ತದೆ.

(ಾ||ವಿ ಗೋಪಾಲಕೃಷ್ಣ)

Share this Story:

Follow Webdunia kannada