Webdunia - Bharat's app for daily news and videos

Install App

ಅಯ್ಯಪ್ಪ ವಿಳಕ್ಕುವಿನಲ್ಲಿ ಭಕ್ತಿಯ ಪರಾಕಾಷ್ಠೆ

Webdunia
WDWD
ನಂಬಿದರೆ ನಂಬಿ ಬಿಟ್ಟರೆ ಬಿಡಿ ಸರಣಿಯಲ್ಲಿ ಈ ಬಾರಿ ನಿಮ್ಮನ್ನು ಕೇರಳದ ಪಾಲಕ್ಕಾಡ್ ಜಿಲ್ಲೆಯ ಸಣ್ಣ ಗ್ರಾಮವಾದ ಶೋರುನೂರುಗೆ ನಾವು ಕರೆದೊಯ್ಯುತ್ತೇವೆ. ಭಕ್ತಿಯ ಆವೇಶದಲ್ಲಿ ಮೈಸುಡುವ ಬೆಂಕಿಯಿಂದಲೂ ನಿರೋಧಕ ಶಕ್ತಿ ಬೆಳೆಸಿಕೊಂಡಿರುವ ಕೆಲವು ಜನರನ್ನು ನಾವಿಲ್ಲಿ ಕಾಣಬಹುದು. ಉರಿಯುವ ಬತ್ತಿಯನ್ನು ಮೈಮೇಲೆ ಸೋಕಿಸಿಕೊಂಡರೂ ಮೈಸುಡದ, ಯಾವು ನೋವನ್ನೂ ಉಂಟುಮಾಡದ ವಿಚಿತ್ರ ದೃಶ್ಯಗಳನ್ನು ನೀವು ವೀಕ್ಷಿಸಬಹುದು.

ಶಬರಿಮಲೆ ಯಾತ್ರೆಗೆ ತೆರಳುವ ಮುಂಚೆ ಕೆಲವು ಭಕ್ತರ ಸಮೂಹವು ಅಯ್ಯಪ್ಪ ವಿಳಕ್ಕು ಆಚರಣೆ ಮಾಡುತ್ತದೆ. ಇದನ್ನು ಮುಖ್ಯವಾಗಿ ಕೇರಳದ ಮಧ್ಯ ಮತ್ತು ಉತ್ತರ ಭಾಗಗಳಲ್ಲಿ ಆಚರಿಸಲಾಗುತ್ತದೆ. ಅಯ್ಯಪ್ಪನ್ ವಿಳಕ್ಕು ಆಚರಣೆ ಭಾರತದ ವಿವಿಧ ಸ್ಥಳಗಳಲ್ಲಿ ನಡೆಸಲಾಗುವುದು ಮತ್ತು ಅವುಗಳಲ್ಲಿ ಬಹಳಷ್ಟು ಪ್ರಸಿದ್ಧಿಪಡೆದಿವೆ.

WD
ಅಯ್ಯಪ್ಪ ವಿಳಕ್ಕುವನ್ನು ವ್ಯಕ್ತಿ, ಕುಟುಂಬ, ಸಂಸ್ಥೆ ಅಥವಾ ತಂಡವೊಂದು ಆಚರಿಸಬಹುದು. ಹಸಿಯಾದ ತೆಂಗಿನಗರಿಗಳಿಂದ ಮತ್ತು ಬಾಳೆಗಿಡದ ಕಾಂಡದಿಂದ ಶಬರಿಮಲೆ ದೇವಸ್ಥಾನದ ಪ್ರತಿರೂಪವನ್ನು ಸೃಷ್ಟಿಸಲಾಗುತ್ತದೆ. ಈ ಕೆಲಸವನ್ನು ಮಾಡಲು ಅವರಿಗೆ ತರಬೇತಿ ನೀಡಲಾಗುತ್ತದೆ. ಪಾಲಾ ಮರದ ಕೊಂಬೆಗಳು, ಸಾಂಪ್ರದಾಯಿಕ ತಾಲಪ್ಪೋಲಿ ಮತ್ತು ಚಂಡೆ ಬಡಿಯುವ ಮೆರವಣಿಗೆಗಳು ಸಂಜೆ ಅಯ್ಯಪ್ಪ ವಿಳಕ್ಕು ಆಚರಣೆಯ ಸ್ಥಳಕ್ಕೆ ಆಗಮಿಸುತ್ತವೆ.

ಭಗವಾನ್ ಅಯ್ಯಪ್ಪನ ಗೀತೆಗಳನ್ನು ಹಾಡಿ, ಪೂಜೆಗಳನ್ನು ಮಾಡಿದ ಬಳಿಕ ಭಗವಾನ್ ಅಯ್ಯಪ್ಪ ಮುಸ್ಲಿಂ ವ್ಯಾಪಾರಿ ಮತ್ತು ಸೇನಾನಿ ವಾವಾರ್ ಜತೆ ಹೋರಾಡಿದ ದಂತಕತೆಯ ಅಣಕವನ್ನು ಪ್ರದರ್ಶಿಸಲಾಗುತ್ತದೆ. ಗುರೂತಿ ಆಚರಣೆಯ ಬಳಿಕ ಅಯ್ಯಪ್ಪನ್ ವಿಳಕ್ ಅಂತ್ಯಗೊಳ್ಳುತ್ತದೆ. ಹಸಿಯಾದ ತೆಂಗಿನಗರಿ ಮತ್ತು ಬಾಳೆಕಾಂಡದಿಂದ ನಿರ್ಮಿಸಿದ ತಾತ್ಕಾಲಿಕ ಮಂದಿರದ ಸುತ್ತ ವಿಧಿವತ್ತಾದ ನೃತ್ಯ ಮಾಡಲು ಇಬ್ಬರು ವ್ರತಧಾರಿಗಳು ಇರುತ್ತಾರೆ. ನೃತ್ಯದ ಸಂದರ್ಭದಲ್ಲಿ ಸಮರಕಲೆಯನ್ನು ಅವರು ಪ್ರದರ್ಶಿಸುತ್ತಾರೆ.

WD
ರಾತ್ರಿ ಬಹುಹೊತ್ತಿನಲ್ಲಿ ತಮ್ಮ ದೇಹದ ಮೇಲ್ಭಾಗದಲ್ಲಿ ಉರಿಯುವ ದೊಂದಿಗಳನ್ನು ಮೈಮೇಲೆ ಸೋಕಿಸುವ ಆಚರಣೆಯನ್ನು ಅವರು ಕೈಗೊಳ್ಳುತ್ತಾರೆ. ಚಂಡೆಯ ಸದ್ದಿಗೆ ಸಮನಾಗಿ ಉರಿಯುವ ದೊಂದಿಗಳನ್ನು ಕೈಯಲ್ಲಿ ಹಿಡಿದು ದೇಹಕ್ಕೆ ಮಾಲೀಸು ಮಾಡುತ್ತಾರೆ. ಚಂಡೆಯ ಸದ್ದು ಆರಂಭದಲ್ಲಿ ನಿಧಾನವಾಗಿ, ಕ್ರಮೇಣ ತಾರಕಕ್ಕೇರಿ ಚಂಡೆಯ ಸದ್ದಿನ ವೇಗಕ್ಕೆ ಹೊಂದಿಕೆಯಾಗುವಂತೆ ದೇಹಕ್ಕೆ ಬೆಂಕಿಯ ಮಾಲೀಸು ಕ್ರಿಯೆಯನ್ನು ಆಚರಿಸುತ್ತಾರೆ. ಇದೊಂದು ಅದ್ಭುತ ವಿದ್ಯಮಾನವಾಗಿದ್ದು, ಕೆಲವು ಬಾರಿ ನಂಬಲಸಾಧ್ಯವೆನಿಸುತ್ತದೆ.

ಸುಟ್ಟಗಾಯದ ಗುರುತಿಲ್ಲ

ಒಂದು ಗಂಟೆಯ ಕಾಲ ಬೆಂಕಿಯಿಂದ ಮೈಯನ್ನು ಸೋಕಿಸಿ ಮಾಲೀಸು ಮಾಡಿದ ಬಳಿಕವೂ ಅವರ ದೇಹದಲ್ಲಿ ಯಾವುದೇ ಸುಟ್ಟಗಾಯದ ಗುರುತಾಗಲೀ ಅಥವಾ ನೋವಿನ ಲಕ್ಷಣವಾಗಲೀ ಗೋಚರಿಸುವುದಿಲ್ಲ. ಭಗವಾನ್ ಅಯ್ಯಪ್ಪನ ಅನುಗ್ರಹದಿಂದ ಸುಡುವ ಬೆಂಕಿ ಮೈಗೆ ಯಾವ ನೋವನ್ನೂ ಉಂಟುಮಾಡುವುದಿಲ್ಲ ಎಂದು ಭಕ್ತರು ನಂಬಿದ್ದಾರೆ. ಜತೆಗೆ "ಕಾನಾಲ್ ಆಟ್ಟಾಮ್" ಎಂದು ಸ್ಥಳೀಯ ಭಾಷೆಯಲ್ಲಿ ಹೆಸರಾದ ಕೆಂಡದ ಮೇಲೆ ನಡಿಗೆ ಕೂಡ ಅದ್ಭುತವೆನಿಸಿದೆ.

WD
ವ್ರತಧಾರಿ ಮತ್ತು ಅವನ ಸಹಚರರು ಅಯ್ಯಪ್ಪನ್ ವಿಳಕ್ ಮೈದಾನದಲ್ಲಿ ಸ್ಥಾಪಿಸಲಾದ ಕಲ್ಲಿದ್ದಲಿನ ಕೆಂಡದ ಮೇಲೆ ನಡೆಯುತ್ತಾರೆ, ಕುಣಿಯುತ್ತಾರೆ. ಸತತ ಬೆಂಕಿಯ ಮಾಲೀಸು ಅಥವಾ ಉರಿಯುವ ಇದ್ದಿಲಿನ ಕೆಂಡದ ಮೇಲೆ ಹಾರಿದರೂ ಬೆಂಕಿಯ ಸುಡುವಿಕೆಯಿಂದ ಪಾರಾಗಲು ಅವರು ತರಬೇತಿ ಪಡೆದಿರುವುದೇ ಕಾರಣ ಎಂದು ಕೆಲವು ಜನರು ಹೇಳುತ್ತಾರೆ. ಆದರೆ ಅಯ್ಯಪ್ಪನ ಮಂತ್ರಗಳನ್ನು ಪಠಣ ಮಾಡುವುದರಿಂದ ಅವರಿಗೆ ಹಾನಿಯಾಗುವುದಿಲ್ಲ ಎಂದು ಕೆಲವು ಭಕ್ತರು ನಂಬಿದ್ದಾರೆ. ನೀವೇನೆಂದು ಭಾವಿಸುತ್ತೀರಿ? ದಯವಿಟ್ಟು ನಮಗೆ ತಿಳಿಸಿ....

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಜ್ಯೋತಿಷ್ಯ ಪ್ರಕಾರ ಚಂದ್ರಗ್ರಹಣ ಸಮಯದಲ್ಲಿ ಹೋಳಿ ಆಡಬಹುದೇ

ಶಿವರಾತ್ರಿಗೆ ಶಿವನಿಗೆ ಪೂಜೆ ಮಾಡುವಾಗ ಹೇಳಬೇಕಾದ ಮಂತ್ರ ಯಾವುದು

ಸಂಕ್ರಾಂತಿ ದಿನ ಈ ಮೂರು ವಸ್ತು ದಾನ ಮಾಡಲು ಮರೆಯದಿರಿ

ಈದ್ ಮಿಲಾದ್ ಯಾಕೆ ಆಚರಿಸುತ್ತಾರೆ, ಏನಿದರ ಮಹತ್ವ

ಮಂಗಳ ಗೌರಿ ವ್ರತ ಮಾಡುವುದು ಹೇಗೆ

Show comments