ಇಂದು ಬೆಳ್ಳಿಗ್ಗೆ ಕನಕಪುರ ತಾಲೂಕಿನಲ್ಲಿ ಭೂಮಿ ಕಂಪಿಸಿದೆ. ರಾಮನಗರ ಜಿಲ್ಲೆಯ ಕನಕಪುರದ ತಾಲೂಕಿನಲ್ಲಿ ಮನೆಯ ಗೋಡೆಗಳು ಕೂಡ ಬಿರುಕು ಬಿಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಇಂದು ಬೆಳಿಗ್ಗೆ 7 ರಿಂದ 8 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ್ದು , ಜನರು ಬಹಳಷ್ಟು ಆತಂಕಕ್ಕೋಳಗಾಗಿದ್ದಾರೆ. ಭೂಕಂಪ ಆದ ನಂತರ ಜನರೆಲ್ಲ ಮನೆಯಿಂದ ಹೊರಗಡೆ ಬಂದರು ಮತ್ತು ಇವರ ಮುಖದಲ್ಲಿ ಭಯ ತುಂಬಿತ್ತು.
ಮನೆಗಳಿಗೆ ಬಿರುಕು ಬಿಟ್ಟ ಕಾರಣ ಕೆರಲಾಳುಸಂದ್ರ ಮತ್ತು ಹೆಗ್ಗನೂರಿನಲ್ಲಿನ ಜನರು ಆತಂಕಕ್ಕೀಡಾಗಿದ್ದಾರೆ ಎಂದು ಖಾಸಗಿ ಮಾಧ್ಯಮಗಳು ವರದಿ ಮಾಡಿವೆ.