Webdunia - Bharat's app for daily news and videos

Install App

ಕರ್ನಾಟಕದ 28 ಲೋಕಸಭಾ ಸ್ಥಾನಗಳಿಗೆ ಇಂದು ನಡೆಯುತಿದೆ ಮತದಾನ

Webdunia
ಗುರುವಾರ, 17 ಏಪ್ರಿಲ್ 2014 (09:20 IST)
ಇಂದು ಕರ್ನಾಟಕದಲ್ಲಿ 28 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಒಂದೇ ಹಂತದಲ್ಲಿ ಕೊನೆಗೊಳ್ಳಲಿದೆ.

6 ರಿಂದ 7 ರಿಂದ ಮತ ಚಲಾಯಿಸಬಹುದಾಗಿದ್ದು 54,261 ಮತದಾನದ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಚುನಾವಣಾ ನಿರ್ವಹಣೆಗೆ ಒಟ್ಟು 2,74,891 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ " ಎಂದು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಅನಿಲ್ ಕುಮಾರ್ ಝಾ ಉದ್ಗರಿಸಿದ್ದಾರೆ.
PR

ಒಟ್ಟು 4,62,11,844 ಮತದಾರರು, 28 ಕ್ಷೇತ್ರಗಳ , 195 ಸ್ವತಂತ್ರ ಅಭ್ಯರ್ಥಿಗಳು ಮತ್ತು 21 ಮಹಿಳೆಯರು ಸೇರಿದಂತೆ 434 ಅಭ್ಯರ್ಥಿಗಳ ಹಣೆಬರಹವನ್ನು ನಿರ್ಧರಿಸಲಿದ್ದಾರೆ.ದಲಿತರಿಗಾಗಿ (ಎಸ್ ಸಿ) ಐದು ಮತ್ತು ಬುಡಕಟ್ಟಿನವರಿಗೆ (ಎಸ್ಟಿಎಸ್) ಎರಡು ಸ್ಥಾನಗಳನ್ನು ಕಾಯ್ದಿರಿಸಲಾಗಿದೆ.

" ಮತದಾರರ ಗಾತ್ರದಲ್ಲಿ ಹೆಚ್ಚಳವಾಗಿದ್ದು, 1.5 ಮಿಲಿಯನ್ ಜನರು ಮೊದಲ ಬಾರಿ ಮತ ಚಲಾಯಿಸಲಿದ್ದಾರೆ. ಅಲ್ಲದೇ ಯುವ ಜನತೆಯ ಸಂಖ್ಯೆ ಹೆಚ್ಚಿದೆ. ಈ ದೃಷ್ಟಿಯಿಂದ ನಾವು ಈ ಬಾರಿ ಹೆಚ್ಚು ವಿದ್ಯುನ್ಮಾನ ಮತದಾನ ಯಂತ್ರಗಳನ್ನು(ಇ ವಿ ಎಂ ಗಳನ್ನು) ವಿದ್ಯುನ್ಮಾನ ಮತದಾನ ಯಂತ್ರಗಳನ್ನು( 75.353 ಮತದಾನ ಘಟಕಗಳು ಮತ್ತು 54.261 ನಿಯಂತ್ರಿಸುವ ಘಟಕಗಳು) ಬಳಸುತ್ತಿದ್ದೇವೆ " ಎಂದು ಝಾ ಹೇಳಿದ್ದಾರೆ.

16 ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸುತ್ತಿರುವ, 11 ಕ್ಷೇತ್ರಗಳಲ್ಲಿ ಎರಡು ಮತದಾನ ಘಟಕಗಳನ್ನು ಬಳಸಲಾಗುತ್ತಿದೆ.

PR
2.39 ದಶಲಕ್ಷ ಮತದಾರರನ್ನು ಹೊಂದಿರುವ ಬೆಂಗಳೂರು ಉತ್ತರ ಕ್ಷೇತ್ರ ರಾಜ್ಯದಲ್ಲಿ ಅತಿ ಹೆಚ್ಚು ಮತದಾರರನ್ನು ಹೊಂದಿದೆ. ಕರಾವಳಿ ಪ್ರದೇಶದ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಅತಿ ಕಡಿಮೆ ಸಂಖ್ಯೆಯ 1.39 ದಶಲಕ್ಷ ಮತದಾರರನ್ನು ಹೊಂದಿದೆ.

ಬೆಂಗಳೂರು ಸೆಂಟ್ರಲ್‌ನಲ್ಲಿ ಗರಿಷ್ಠ ಸಂಖ್ಯೆಯ (25) ಅಭ್ಯರ್ಥಿಗಳನ್ನು,ಗುಲ್ಬರ್ಗ ಕ್ಷೇತ್ರ ಕೇವಲ ಐದು(ಕನಿಷ್ಠ) ಸ್ಪರ್ಧಿಗಳನ್ನು ಹೊಂದಿದೆ.

ಪ್ರತಿಷ್ಠೆಯ ಕಣವಾಗಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಮತಗಟ್ಟೆಗಳಲ್ಲಿ ,ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ವೋಟರ್ ವೆರಿಫೀಯೇಬಲ್ ಪೇಪರ್ ಆಡಿಟ್ ಟ್ರಯಲ್ (VVPAT) ವ್ಯವಸ್ಥೆಯನ್ನು ಮೊದಲ ಬಾರಿಗೆ ಬಳಸಲಾಗುತ್ತಿದೆ. ಮತದಾರರು ಒಂದು ಸ್ಲಿಪ್ ಬಟನ್ ಒತ್ತುವುದರ ಮೂಲಕ ತಾವು ಯಾರಿಗೆ ಮತ ಚಲಾಯಿಸುತ್ತಿರುವ ಅಭ್ಯರ್ಥಿಯ ಚಿತ್ರ ನೋಡಲು ನೋಡಲು ಸಾಧ್ಯವಾಗುತ್ತದೆ.

ಶಾಂತಿಯುತ ಮತದಾನ ನಡೆಯುವಂತಾಗಲು, ಕಾನೂನು ಸುವ್ಯವಸ್ಥೆ ಕಾಪಾಡಲು, ಅಡ್ಡ ಮಾರ್ಗಗಳನ್ನು ತಡೆಯಲು ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.

" ರಾಜ್ಯಾದ್ಯಂತ 85,000 ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು 20,000 ಹೋಮ್ ಗಾರ್ಡ್ಸ್, 104 ಅರೆಸೇನಾ ಪಡೆಗಳು, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ (KDRP) 40 ತುಕಡಿಗಳು, 1,000 ನಾಗರಿಕ ರಕ್ಷಣಾ ಕಾವಲುಗಾರರನ್ನು ಬಳಕೆ ಮಾಡಲಾಗಿದೆ. 8.658 ಬಹಳ ಸೂಕ್ಷ್ಮ , 14.440 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದು ಹೆಚ್ಚುವರಿ ಡೈರೆಕ್ಟರ್ ಜನರಲ್ ಪೊಲೀಸ್ ಎಮ್ ಎನ್ ರೆಡ್ಡಿ " ಹೇಳಿದ್ದಾರೆ.

ಪ್ರತಿಷ್ಠೆಯ ಕಣಗಳಾಗಿರುವ ಬೆಂಗಳೂರು ದಕ್ಷಿಣ, ಉತ್ತರ ಮತ್ತು ಮಧ್ಯ ಕ್ಷೇತ್ರಗಳಲ್ಲಿ 12.236 ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು, 6.823 ಮತಗಟ್ಟೆಗಳಲ್ಲಿ 50 ಪ್ರತಿಶತ ಮತಗಟ್ಟೆಗಳನ್ನು ಮತ್ತು ಎಂದು ಘೋಷಿಸಲಾಗಿದೆ.

" ನಾವು ನಗರದಾದ್ಯಂತ 2.044 ಸೂಕ್ಷ್ಮ ಮತ್ತು 1.361 ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಿದ್ದೇವೆ. ಸುಮಾರು 400 ಸಂಚಾರಿ ತಂಡಗಳು ನಗರದಲ್ಲಿ ಮತದಾನ ಚಟುವಟಿಕೆಗಳನ್ನು ಗಮನಿಸುತ್ತಿರುತ್ತಾರೆ " ಎಂದು ಬೆಂಗಳೂರು ಪೊಲೀಸ್ ಕಮಿಷನರ್ ರಾಘವೇಂದ್ರ ಔರಾದ್‌ಕರ್ ಹೇಳಿದ್ದಾರೆ.

ಒಂಬತ್ತು ದಶಲಕ್ಷ ಜನಸಂಖ್ಯೆಯ ನಗರದಲ್ಲಿ 6.3 ಮಿಲಿಯನ್ ಮತದಾರರಿದ್ದಾರೆ.
PR

" ಅಂಗಡಿಗಳು, ಕಾರ್ಖಾನೆಗಳು,ಕಚೇರಿಗಳು, ಕಂಪನಿಗಳು ಸೇರಿದಂತೆ ಎಲ್ಲಾ ಸಂಸ್ಥೆಗಳಿಗೆ, ತಮ್ಮ ನೌಕರರನ್ನು ಮತ ಚಲಾಯಿಸಲು ಸಕ್ರಿಯಗೊಳಿಸಲು ಸಂಬಳ ಸಹಿತ ರಜೆಯನ್ನು ಘೋಷಿಸಲು ನಿರ್ದೇಶನ ನೀಡಿದ್ದೇವೆ " ಎಂದು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಝಾ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments