ಕರ್ನಾಟಕದ 28 ಲೋಕಸಭಾ ಸ್ಥಾನಗಳಿಗೆ ಇಂದು ನಡೆಯುತಿದೆ ಮತದಾನ
ಬೆಂಗಳೂರು , ಗುರುವಾರ, 17 ಏಪ್ರಿಲ್ 2014 (09:20 IST)
ಇಂದು ಕರ್ನಾಟಕದಲ್ಲಿ 28 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಒಂದೇ ಹಂತದಲ್ಲಿ ಕೊನೆಗೊಳ್ಳಲಿದೆ. 6
ರಿಂದ 7 ರಿಂದ ಮತ ಚಲಾಯಿಸಬಹುದಾಗಿದ್ದು 54,261 ಮತದಾನದ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಚುನಾವಣಾ ನಿರ್ವಹಣೆಗೆ ಒಟ್ಟು 2,74,891 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ " ಎಂದು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಅನಿಲ್ ಕುಮಾರ್ ಝಾ ಉದ್ಗರಿಸಿದ್ದಾರೆ.
ಒಟ್ಟು 4,62,11,844 ಮತದಾರರು, 28 ಕ್ಷೇತ್ರಗಳ , 195 ಸ್ವತಂತ್ರ ಅಭ್ಯರ್ಥಿಗಳು ಮತ್ತು 21 ಮಹಿಳೆಯರು ಸೇರಿದಂತೆ 434 ಅಭ್ಯರ್ಥಿಗಳ ಹಣೆಬರಹವನ್ನು ನಿರ್ಧರಿಸಲಿದ್ದಾರೆ.ದಲಿತರಿಗಾಗಿ (ಎಸ್ ಸಿ) ಐದು ಮತ್ತು ಬುಡಕಟ್ಟಿನವರಿಗೆ (ಎಸ್ಟಿಎಸ್) ಎರಡು ಸ್ಥಾನಗಳನ್ನು ಕಾಯ್ದಿರಿಸಲಾಗಿದೆ."
ಮತದಾರರ ಗಾತ್ರದಲ್ಲಿ ಹೆಚ್ಚಳವಾಗಿದ್ದು, 1.5 ಮಿಲಿಯನ್ ಜನರು ಮೊದಲ ಬಾರಿ ಮತ ಚಲಾಯಿಸಲಿದ್ದಾರೆ. ಅಲ್ಲದೇ ಯುವ ಜನತೆಯ ಸಂಖ್ಯೆ ಹೆಚ್ಚಿದೆ. ಈ ದೃಷ್ಟಿಯಿಂದ ನಾವು ಈ ಬಾರಿ ಹೆಚ್ಚು ವಿದ್ಯುನ್ಮಾನ ಮತದಾನ ಯಂತ್ರಗಳನ್ನು(ಇ ವಿ ಎಂ ಗಳನ್ನು) ವಿದ್ಯುನ್ಮಾನ ಮತದಾನ ಯಂತ್ರಗಳನ್ನು( 75.353 ಮತದಾನ ಘಟಕಗಳು ಮತ್ತು 54.261 ನಿಯಂತ್ರಿಸುವ ಘಟಕಗಳು) ಬಳಸುತ್ತಿದ್ದೇವೆ " ಎಂದು ಝಾ ಹೇಳಿದ್ದಾರೆ.16
ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸುತ್ತಿರುವ, 11 ಕ್ಷೇತ್ರಗಳಲ್ಲಿ ಎರಡು ಮತದಾನ ಘಟಕಗಳನ್ನು ಬಳಸಲಾಗುತ್ತಿದೆ.