Select Your Language

Notifications

webdunia
webdunia
webdunia
webdunia

ಮೊಬೈಲ್ ಮೂಲಕ ಮತದಾನದ ಚಿತ್ರ ತೆಗೆಯುವುದಕ್ಕೆ ನಿಷೇಧ

ಮೊಬೈಲ್ ಮೂಲಕ ಮತದಾನದ ಚಿತ್ರ ತೆಗೆಯುವುದಕ್ಕೆ ನಿಷೇಧ
, ಗುರುವಾರ, 17 ಏಪ್ರಿಲ್ 2014 (09:17 IST)
PR
PR
ಬೆಂಗಳೂರು: ಈ ಬಾರಿ ಮತಗಟ್ಟೆಗಳಿಗೆ ಮೊಬೈಲ್ ತರುವುದನ್ನು ಚುನಾವಣೆ ಆಯೋಗ ನಿಷೇಧಿಸಿದೆ. ಮೊಬೈಲ್ ಕ್ಯಾಮೆರಾದಲ್ಲಿ ಮತಹಾಕುವ ಚಿತ್ರವನ್ನು ಮತದಾರರು ತೆಗೆದರೆ ಕ್ರಮ ಕೈಗೊಳ್ಳುವುದಾಗಿ ಚುನಾವಣೆ ಆಯೋಗ ಎಚ್ಚರಿಸಿದೆ. ಈ ನಿಯಮ ಚುನಾವಣೆ ಸಿಬ್ಬಂದಿಗೂ ಅನ್ವಯವಾಗಲಿದೆ.ಆದರೆ ಚುನಾವಣೆ ಸಿಬ್ಬಂದಿಗಳು ಮಾತ್ರ ಮೊಬೈಲ್ ಫೋನ್‌ಗಳನ್ನು ಬಳಸಬಹುದಾಗಿದೆ. ಮತದಾನದ ಶೇಕಡಾವಾರು ವಿವರಗಳನ್ನು ಅಧಿಕಾರಿಗಳಿಗೆ ಮುಟ್ಟಿಸಲು ಅವರು ಮೊಬೈಲ್ ಫೋನ್ ಬಳಸುವುದಕ್ಕೆ ಅವಕಾಶ ನೀಡಲಾಗಿದೆ. ಆದರೆ ಮೊಬೈಲ್‌ನಿಂದ ಅವರು ಎಸ್‌ಎಂಎಸ್ ಮಾತ್ರ ಕಳಿಸುವುದಕ್ಕೆ ಸಾಧ್ಯವಾಗುತ್ತದೆ. ಆಯೋಗ ಮಾನ್ಯತೆ ನೀಡುವ ಛಾಯಾಗ್ರಾಹಕರಿಗೆ ಮಾತ್ರ ಮತದಾನದ ಪ್ರಕ್ರಿಯೆಯ ಚಿತ್ರಗಳನ್ನು ತೆಗೆಯುವ ಅವಕಾಶ ಹೊಂದಿರುತ್ತಾರೆ.

ಮತದಾನದ ಚಿತ್ರೀಕರಣ ಮಾಡುವ ಮುನ್ನ ಚುನಾವಣಾಧಿಕಾರಿ ಮತ್ತು ವೀಕ್ಷಕರ ಅನುಮತಿ ಪಡೆಯಬೇಕಾಗುತ್ತದೆ. ಈ ಬಾರಿ ಮೊಟ್ಟ ಮೊದಲ ಬಾರಿಗೆ ಮತದಾರರ ಎಡಗೈ ಹೆಬ್ಬೆರಳಿಗೆ ಅಳಿಸಲಾಗದ ಶಾಯಿ ಗುರುತನ್ನು ಹಚ್ಚಲಾಗುತ್ತದೆ. ಮತದಾರರಿಗೆ ಮತಗಟ್ಟೆಯ ವಿವರವನ್ನು ಎಸ್‌ಎಂಎಸ್ ಮೂಲಕ ತಿಳಿಸುವ ವ್ಯವಸ್ಥೆಗೆ ಚುನಾವಣೆ ಆಯೋಗ ಚಾಲನೆ ನೀಡಿದೆ. ಮತದಾರರ ಗುರುತಿನ ಚೀಟಿಯನ್ನು ಎಸ್‌ಎಂಎಸ್ ಮಾಡಿದ ಕೂಡಲೇ ಯಾವ ಮತಗಟ್ಟೆಯಲ್ಲಿ ಮತಚಲಾಯಿಸಬೇಕು ಎಂಬ ಮಾಹಿತಿಯು ಮೊಬೈಲ್‌‌ನಲ್ಲಿ ಬರುತ್ತದೆ.

Share this Story:

Follow Webdunia kannada