Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಪಕ್ಷ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ : ನಟಿ ರಮ್ಯಾ

ಕಾಂಗ್ರೆಸ್ ಪಕ್ಷ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ : ನಟಿ ರಮ್ಯಾ
ಮಂಡ್ಯ , ಗುರುವಾರ, 17 ಏಪ್ರಿಲ್ 2014 (08:55 IST)
PR
ಮಂಡ್ಯ ಲೋಕಸವಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಕಣಕ್ಕೆ ಇಳಿದ ನಟಿ ರಮ್ಯಾ ಕೂಡ ಇಂದು ಬೆಳಿಗ್ಗೆ ಮತದಾನ ಮಾಡಿದ್ದು, ರಾಜ್ಯದ 20 ಲೋಕಸಭೆ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಕ್ಷದ ಮುಖಂಡರು ಉತ್ತಮ ಕೆಲಸ ಮಾಡಿದ್ದಲ್ಲದೇ ನನ್ನ ಪರ ಎಲ್ಲ ವರ್ಗದ ಜನರು ವಿಶ್ವಾಸದಿಂದ ಕೆಲಸ ಮಾಡಿದ್ದಾರೆ ಎಂದು ರಮ್ಯ ತಿಳಿಸಿದ್ದಾರೆ.

ಮಾಧ್ಯಮದವರ ಜೊತೆಗೆ ಮಾತನಾಡುವ ಸಂದರ್ಭದಲ್ಲಿ , ಅಲ್ಲಿದ್ದ ಎಲ್ಲ ಜನರನ್ನು ನೀವು ಓಟು ಮಾಡಿದ್ದೀರಾ ಎಂದು ಕೇಳಿದ್ದಾರೆ. ಓಟುಮಾಡಿದವರಿಗೆ ಧನ್ಯವಾದ ತಿಳಿಸಿದ್ದಾರೆ. ಮತ್ತು ಉಳಿದವರನ್ನು ಓಟು ಮಾಡಿ ಎಂದು ಕಾಂಗ್ರೆಸ್ ಅಭ್ಯರ್ಥಿ ನಟಿ ರಮ್ಯ ಮನವಿ ಮಾಡಿದ್ದಾರೆ.

Share this Story:

Follow Webdunia kannada