Select Your Language

Notifications

webdunia
webdunia
webdunia
webdunia

ಬೊಲೆರೋಗೆ ಚಲಿಸುತ್ತಿದ್ದ ರೈಲು ಡಿಕ್ಕಿ ಹೊಡೆದು ಇಬ್ಬರ ಸಾವು

ಬೊಲೆರೋಗೆ ಚಲಿಸುತ್ತಿದ್ದ ರೈಲು ಡಿಕ್ಕಿ ಹೊಡೆದು ಇಬ್ಬರ ಸಾವು
, ಬುಧವಾರ, 16 ಏಪ್ರಿಲ್ 2014 (15:36 IST)
PR
PR
ಹುಬ್ಬಳ್ಳಿ: ಹುಬ್ಬಳ್ಳಿಯ ಸಾಯಿನಗರದ ಬಳಿ ಚಲಿಸುತ್ತಿದ್ದ ರೈಲಿಗೆ ಸಿಕ್ಕಿ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಬೊಲೆರೊ ವಾಹನದಲ್ಲಿ ಮಾನವರಹಿತ ಲೆವೆಲ್ ಕ್ರಾಸಿಂಗ್ ದಾಟುತ್ತಿದ್ದಾಗ ರೈಲು ಡಿಕ್ಕಿಹೊಡೆದು ದುರಂತ ಸಂಭವಿಸಿದೆ. ಲೆವೆಲ್ ಕ್ರಾಸಿಂಗ್‌ಗೆ ಗೇಟ್ ಕೂಡ ಇರಲಿಲ್ಲ. ಬೊಲೆರೋ ಸರ್ವೀಸಿಂಗ್‌ಗೆ ತೆಗೆದುಕೊಂಡು ಹೋಗುವಾಗ ಹಠಾತ್ತಾಗಿ ಬೊಲೆರೋ ವಾಹನ ಲೆವಲ್ ಕ್ರಾಸಿಂಗ್ ಬಳಿ ಅಚಾನಕ್ಕಾಗಿ ನಿಂತಿದ್ದರಿಂದ ಇಳಿದುಹೋಗಲು ಕೂಡ ಸಮಯ ಸಿಗಲಿಲ್ಲ.

ಧಾರವಾಡದಿಂದ ಹುಬ್ಬಳ್ಳಿಗೆ ಬರುತ್ತಿದ್ದ ಚಾಲುಕ್ಯ ಎಕ್ಸ್‌ಪ್ರೆಸ್ ರೈಲು ಬೊಲೆರೋ ವಾಹನಕ್ಕೆ ಗುದ್ದಿದ್ದರಿಂದ ಇಬ್ಬರು ಸಾವನ್ನಪ್ಪಿದ್ದಾರೆ. ತೀವ್ರವಾಗಿ ಗಾಯಗೊಂಡ ಇನ್ನೊಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

Share this Story:

Follow Webdunia kannada