Select Your Language

Notifications

webdunia
webdunia
webdunia
webdunia

ಸೈಟ್ ಹಗರಣ; ಶಾಸಕ ರವಿಗೆ ಕ್ಲೀನ್‌ಚಿಟ್,ಪತ್ನಿ ವಿರುದ್ಧ ಚಾರ್ಜ್‌ಶೀಟ್

ಸೈಟ್ ಹಗರಣ; ಶಾಸಕ ರವಿಗೆ ಕ್ಲೀನ್‌ಚಿಟ್,ಪತ್ನಿ ವಿರುದ್ಧ ಚಾರ್ಜ್‌ಶೀಟ್
ಬೆಂಗಳೂರು , ಮಂಗಳವಾರ, 3 ಏಪ್ರಿಲ್ 2012 (19:02 IST)
PR
ಕಾನೂನು ಬಾಹಿರವಾಗಿ ಸಿಎ ಸೈಟು ಪಡೆದ ಆರೋಪದಲ್ಲಿ ಬಿಜೆಪಿ ಶಾಸಕ ಸಿ.ಟಿ.ರವಿಗೆ ಕ್ಲೀನ್ ಚಿಟ್ ನೀಡಲಾಗಿದ್ದು, ಇನ್ನುಳಿದಂತೆ ಪತ್ನಿ ಪಲ್ಲವಿ ರವಿ ಹಾಗೂ ಸಂಬಂಧಿ ಸುದರ್ಶನ್, ತೇಜಸ್ವಿನಿ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ಮಂಗಳವಾರ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.

ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿರುವ ಲಕ್ಷ್ಮೀನಾರಾಯಣ ಅವರು, ಅಂದು ಹೌಸಿಂಗ್ ಬೋರ್ಡ್ ನಿರ್ದೇಶಕರಾಗಿದ್ದ ವೇಳೆ ಸಿ.ಟಿ.ರವಿ ಪತ್ನಿ ಹಾಗೂ ಸಂಬಂಧಿಗಳು ನಕಲಿ ದಾಖಲೆ ಸೃಷ್ಟಿಸಿ ಹೌಸಿಂಗ್ ಬೋರ್ಡ್‌ನಿಂದ ಸೈಟು ಪಡೆದುಕೊಂಡಿದ್ದ ಆರೋಪ ಈಗ ಸಾಬೀತಾಗಿದ್ದು, ಅವರ ವಿರುದ್ಧ ಇಂದು ಲೋಕಾಯುಕ್ತ ಪೊಲೀಸರು ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.

ಪ್ರಕರಣದಲ್ಲಿ ಸಿ.ಟಿ.ರವಿ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದ್ದು, ಉಳಿದ ನಾಲ್ವರ ವಿರುದ್ಧ ಕೇಸ್ ದಾಖಲಿಸಲಾಗಿದೆ. ದೇವಾಲಯದ ಟ್ರಸ್ಟ್ ಹೆಸರಿನಲ್ಲಿ ಆಸ್ತಿ ಕಬಳಿಸಲಾಗಿದೆ ಎಂದು ಆರೋಪಿಸಿ ದೇವಿಪ್ರಸಾದ್ ಎಂಬುವರು ಸಿ.ಟಿ.ರವಿ ಸೇರಿದಂತೆ ಇತರ ಐವರ ವಿರುದ್ಧ ಖಾಸಗಿ ದೂರು ನೀಡಿದ್ದರು.

Share this Story:

Follow Webdunia kannada