Webdunia - Bharat's app for daily news and videos

Install App

ಬಿಡದಿ ನಿತ್ಯಾನಂದ ಆಶ್ರಮದಲ್ಲಿ 20 ಲಕ್ಷ ರೂ. ಕಳವು

Webdunia
ಬುಧವಾರ, 28 ಡಿಸೆಂಬರ್ 2011 (18:33 IST)
PR
ಬಿಡದಿ ಸಮೀಪ ಇರುವ ನಿತ್ಯಾನಂದ ಧ್ಯಾನಪೀಠದಲ್ಲಿ ದುಷ್ಕರ್ಮಿಗಳು ದೇವಸ್ಥಾನದ ಗೋಡೆಯ ಕನ್ನ ಕೊರೆದು ಸುಮಾರು 20 ಲಕ್ಷ ರೂಪಾಯಿಯ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ಆಶ್ರಮದ ಆಲದ ಮರದ ಸಮೀಪವಿರುವ ಆನಂದೇಶ್ವರ ದೇವಸ್ಥಾನದ ಒಳಗಿದ್ದ ಮೂಲ ವಿಗ್ರಹದ ಮುಖವಾಡ ಹಾಗೂ ಎರಡು ಚಿನ್ನದ ಹಾರಗಳೂ, ಹುಂಡಿ ಸೇರಿದಂತೆ ಸುಮಾರು 20 ಲಕ್ಷ ಬೆಲೆಬಾಳುವ ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದಾರೆಂದು ಬಿಡದಿ ಪೊಲೀಸ್ ಠಾಣೆಗೆ ಆಶ್ರಮದವರು ದೂರು ನೀಡಿದ್ದಾರೆ.

ಸ್ಥಳಕ್ಕೆ ಬಿಡದಿ ಪೊಲೀಸ್ ಪಿಎಸ್ಐ ವಿಜಯ್ ಕುಮಾರ್ ಮತ್ತು ಸಿಬ್ಬಂದಿ, ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ.

ಕಳ್ಳರು ಮಂಗಳವಾರ ರಾತ್ರಿ ದೇವಸ್ಥಾನದ ಗೋಡೆಯನ್ನು ಕೊರೆದು ಕಳವು ಮಾಡಿ ಪರಾರಿಯಾಗಿದ್ದಾರೆಂದು ಸ್ಥಳಕ್ಕೆ ಭೇಟಿ ನೀಡಿರುವ ಡಿವೈಎಸ್ಪಿ ಎಂ.ಜಿ.ರಾಮಕೃಷ್ಣಪ್ಪ ತಿಳಿಸಿದ್ದಾರೆ. ಪ್ರಕರಣ ಬಿಡದಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ