Select Your Language

Notifications

webdunia
webdunia
webdunia
webdunia

ಕುಮಾರಸ್ವಾಮಿ ಮತ್ತೊಂದು ಸ್ಕೆಚ್! ಕಾದು ನೋಡಬೇಕೆಂತೆ...

ಕುಮಾರಸ್ವಾಮಿ ಮತ್ತೊಂದು ಸ್ಕೆಚ್! ಕಾದು ನೋಡಬೇಕೆಂತೆ...
ಕಾಪು , ಸೋಮವಾರ, 21 ನವೆಂಬರ್ 2011 (10:30 IST)
ರಾಜಕೀಯ ಯಾರೂ ಮಿತ್ರರಲ್ಲ, ಯಾರೂ ಶತ್ರುಗಳಲ್ಲ. ಬಳ್ಳಾರಿ ಉಪ ಚುನಾವಣೆ ನಂತರದ ರಾಜಕೀಯ ಬೆಳವಣಿಗೆಗಳನ್ನು ಈಗಲೇ ಹೇಳುವುದು ಸಮಂಜಸ ಅಲ್ಲ ಎಂದಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಬಳ್ಳಾರಿ ಚುನಾವಣೆ ನಂತರ ಶ್ರೀರಾಮುಲು ಜೆಡಿಎಸ್ ಸೇರುವ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ.

ಬಳ್ಳಾರಿ ಗಣಿಧಣಿ, ಶ್ರೀರಾಮುಲು ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸಂಬಂಧ ರಾಜ್ಯರಾಜಕಾರಣದಲ್ಲಿ ಹಾವು-ಮುಂಗುಸಿಯಂತಿತ್ತು. ಆದರೆ ಇದೀಗ ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದವರೇ ಮತ್ತೆ ಒಂದಾಗಲು ಹೊರಟಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಭಾನುವಾರ ಉಡುಪಿ ಜಿಲ್ಲೆ ಕಾಪುವಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಶ್ರೀರಾಮುಲು ಅವರೊಂದಿಗೆ ನಾನು ಇದುವರೆಗೂ ಯಾವುದೇ ಮಾತನಾಡಿಲ್ಲ. ಅವರು ಕೂಡ ಸಾರ್ವಜನಿಕವಾಗಿ ತಮ್ಮ ಮುಂದಿನ ನಡೆಯ ಬಗ್ಗೆ ಮಾತನಾಡಿಲ್ಲ. ಬಳ್ಳಾರಿ ಉಪ ಚುನಾವಣೆ ಮತ್ತು ರಾಜ್ಯ ರಾಜಕೀಯದಲ್ಲಿ ನಡೆಯಲಿರುವ ಕೆಲವು ಬೆಳವಣಿಗೆಗಳು ಗಮನಾರ್ಹವಾಗಲಿದೆ. ರಾಜ್ಯ ಬಿಜೆಪಿ ಸರ್ಕಾರ ಸ್ವಪಕ್ಷೀಯರಿಂದಲೇ ಹಿಟ್ ವಿಕೆಟ್ ಆಗಲಿದೆ. ಅದನ್ನು ಯಾರೂ ತಡೆಯುವುದಕ್ಕೆ ಆಗುವುದಿಲ್ಲ ಎಂದು ಚಾಣಕ್ಯ ಮಾತನ್ನಾಡಿದ್ದಾರೆ.

ಅಲ್ಲದೇ ಬಳ್ಳಾರಿ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸಲಿಕ್ಕಾಗದಷ್ಟು ದಯನೀಯ ಸ್ಥಿತಿಗೆ ತಲುಪಿದೆ ಎಂಬ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಟೀಕೆಗೆ ಉತ್ತರಿಸಿದ ಅವರು, ದಯನೀಯ ಸ್ಥಿತಿ ನಮ್ಮದಲ್ಲ, ಕೊನೆಯ ಕ್ಷಣದವರೆಗೂ ಬಿಜೆಪಿಯಿಂದಲೇ ಸ್ಪರ್ಧಿಸುವಂತೆ ಶ್ರೀರಾಮುಲು ಅವರನ್ನು ಅಂಗಲಾಚಿದ ಬಿಜೆಪಿ ಸ್ಥಿತಿ ದಯನೀಯವಾಗಿದೆ ಎಂದು ತಿರುಗೇಟು ನೀಡಿದರು.

Share this Story:

Follow Webdunia kannada