Webdunia - Bharat's app for daily news and videos

Install App

ಅದೃಷ್ಟ ದಿನ: ಕೊಡಗಿನ ಅಯ್ಯಮ್ಮಗೆ 105ನೇ ಹುಟ್ಟುಹಬ್ಬ!

Webdunia
ಶನಿವಾರ, 12 ನವೆಂಬರ್ 2011 (16:04 IST)
PR
ನೂರು ವರ್ಷಕ್ಕೊಮ್ಮೆ ಮಾತ್ರ ಬರುವ 11-11-11 ದಿನಾಂಕಕ್ಕೆ ಅದ್ಯಾಕೋ ಗೊತ್ತಿಲ್ಲ ಜನ ಮಾತ್ರ ಎಲ್ಲಿಲ್ಲದ ಮಹತ್ವವನ್ನು ನೀಡಿದ್ದಾರೆ. ಮತ್ತೊಂದೆಡೆ ಸಂಖ್ಯಾ ತಜ್ಞರು ಕೂಡ ಈ ದಿನಾಂಕವನ್ನು ಮಹತ್ವಪೂರ್ಣ ಎಂಬಂತೆ ಬಿಂಬಿಸಿದ್ದರು.

ಆದರೆ ಇದೇ ಸಂದರ್ಭ ಶತಾಯುಷಿಯಾದ ಕೊಡಗಿನ ಪೊನ್ನಂಪೇಟೆಯ ಮರಡ ಡಿ.ಅಯ್ಯಮ್ಮ ಅವರು ತಮ್ಮ 105ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು ಎಂದರೆ ಅಚ್ಚರಿಯಾಗಬಹುದು. ಪೊನ್ನಂಪೇಟೆಯ ಕುಂದಾ ರಸ್ತೆಯ ಅಯ್ಯಪ್ಪ ದೇವಸ್ಥಾನ ಮುಂದಿರುವ ಪುತ್ರ ನಾಚಪ್ಪ(ನಂಜಪ್ಪ)ರವರ ಮನೆಯಲ್ಲಿ ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿತ್ತು.

1907 ರ ನವೆಂಬರ್ 11ರಂದು ಜನಿಸಿದ ಅಯ್ಯಮ್ಮರವರು ಮೂಲತಃ ಹರಿಹರ ಗ್ರಾಮದವರು, ಇದೀಗ ಪುತ್ರ ನಾಚಪ್ಪನವರ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇವರು ಅವಿದ್ಯಾವಂತರಾದರೂ ಬಲ್ಯಮಂಡೂರುವಿನಲ್ಲಿ ಅಂಗಡಿ ನಡೆಸುತ್ತಾ ಜೀವನ ಸಾಗಿಸಿ, ತಮ್ಮ ಏಕೈಕ ಪುತ್ರನಾದ ನಾಚಪ್ಪರವರನ್ನು ಶಿಕ್ಷಕರಾಗಿ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ನನ್ನ ದೈಹಿಕ ಕ್ಷಮತೆಗೆ ಸಸ್ಯಹಾರಿ ಸೇವನೆಯೇ ಕಾರಣವಾಗಿದ್ದು, ಎಲ್ಲೊ ಒಂದೊಂದು ಬಾರಿ ಮೊಟ್ಟೆ ತಿನ್ನುತ್ತೇನೆ ಅಷ್ಟೆ ಎನ್ನುವ ಅವರು ಮಕ್ಕಳು ಸಮಾಜದಲ್ಲಿ ಉತ್ತಮವಾಗಿ ಬಾಳಲು 'ವಿದ್ಯಾಭ್ಯಾಸ ಮುಖ್ಯ'ವಾಗಿದ್ದು ತಿನ್ನುವುದು ಮಿತಿಯಲ್ಲಿದ್ದರೆ ಉತ್ತಮ ಎಂಬುವುದು ಇವರ ಕಿವಿಮಾತು.

ಫೋಟೋ-ವರದ ಿ: ಬಿ.ಎಂ.ಲವಕುಮಾರ್, ಕಗ್ಗೌಡ್ಲು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments