Select Your Language

Notifications

webdunia
webdunia
webdunia
webdunia

ರಾಜ್ಯೋತ್ಸವ ಪ್ರಶಸ್ತಿಗಾಗಿ 1,500 ಪುಟಗಳ ಅರ್ಜಿ ಕಳಿಸಿದ ಸಾಧಕ!

ರಾಜ್ಯೋತ್ಸವ ಪ್ರಶಸ್ತಿಗಾಗಿ 1,500 ಪುಟಗಳ ಅರ್ಜಿ ಕಳಿಸಿದ ಸಾಧಕ!
ಬೆಂಗಳೂರು , ಸೋಮವಾರ, 31 ಅಕ್ಟೋಬರ್ 2011 (12:06 IST)
ಪ್ರಶಸ್ತಿಗಾಗಿ ಲಾಬಿ, ಅರ್ಹರಿಗೆ-ಅನರ್ಹರಿಗೆ ಪ್ರಶಸ್ತಿ ಎಂಬೆಲ್ಲಾ ಆರೋಪ ಪ್ರತ್ಯಾರೋಪಗಳ ನಡುವೆ ಪ್ರಸಕ್ತ ಸಾಲಿನಲ್ಲಿ 50 ಮಂದಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗಿದೆ. ಈ ಬಾರಿಯ ಪ್ರಶಸ್ತಿಗಾಗಿ ಸರ್ಕಾರಕ್ಕೆ ಬಂದ ಅರ್ಜಿಗಳ ಸಂಖ್ಯೆ ಬರೋಬ್ಬರಿ 4,500!

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಈ ಸಲ ಸಾಧಕರು ಪ್ರಶಸ್ತಿಗೆ ಕಳುಹಿಸಿದ ಅರ್ಜಿಗಳು, ಶಿಫಾರಸು ಪತ್ರಗಳು, ಸಾಧನೆ ವಿವರಗಳು, ಬೇರೆ, ಬೇರೆ ಪ್ರಶಸ್ತಿ ಪತ್ರಗಳು, ಫೋಟೋ ಹೀಗೆ ಎಲ್ಲವನ್ನೂ ಸೇರಿಸಿದರೆ ಒಂದು ಲೋಡ್‌ನಷ್ಟು ಇದೆಯಂತೆ...ಅಬ್ಬಾ ಇದೇನಪ್ಪಾ ಪ್ರಶಸ್ತಿಗಾಗಿ ಲಾಬಿ ಅಂತ ಹುಬ್ಬೇರಿಸ್ಬೇಡಿ!

ಈ ವಿವರನ್ನು ಸ್ವತಃ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಭಾನುವಾರ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯನ್ನು ಘೋಷಿಸುವ ಸಂದರ್ಭದಲ್ಲಿ ತಿಳಿಸಿದ್ದರು.

ಅದರಲ್ಲಿಯೂ ಸಾಧಕರೊಬ್ಬರು ಪ್ರಶಸ್ತಿಗಾಗಿ ಸುಮಾರು 1,500 ಪುಟಗಳಷ್ಟು ಬೃಹತ್ ಕಡತ ಒಳಗೊಂಡ ಅರ್ಜಿ ಕಳುಹಿಸಿದ್ದರಂತೆ! ಅದರಲ್ಲಿ ಪತ್ರಿಕೆಗಳಲ್ಲಿ ಬಂದ ಅವರ ಹೇಳಿಕೆ, ಫೋಟೋ, ಪತ್ರ ವ್ಯವಹಾರ ಸೇರಿದಂತೆ ಇಡೀ ಜೀವಮಾನದ ಜಾತಕವೆಲ್ಲ ಇತ್ತಂತೆ. ಆದರೆ ಆ ಪ್ರಶಸ್ತಿಯ ಆಕಾಂಕ್ಷಿ ಯಾರೆಂಬುದನ್ನೂ ಮಾತ್ರ ಸಚಿವರು ಬಹಿರಂಗಪಡಿಸಿಲ್ಲ.

ಕಳೆದ ವರ್ಷದಂತೆ ಈ ವರ್ಷವೂ ರಾಜ್ಯೋತ್ಸವ ಪ್ರಶಸ್ತಿ ಪಡೆಯುವುದಕ್ಕೆ ಸಚಿವರು, ಶಾಸಕರು, ಮಠಾಧೀಶರ ಮೂಲಕ ಪ್ರಶಸ್ತಿ ಆಕಾಂಕ್ಷಿಗಳು ಭಾರೀ ಲಾಬಿ ನಡೆಸಿದ್ದರು. ಕೊನೆಗೂ 2011ನೇ ಸಾಲಿಗೆ ಕೇವಲ 50 ಮಂದಿಗೆ ಪ್ರಶಸ್ತಿ ನೀಡಲು ಸರ್ಕಾರ ತೀರ್ಮಾನಿಸಿತ್ತು. ಕಳೆದ ವರ್ಷ 162 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

Share this Story:

Follow Webdunia kannada