ದಾಖಲಾಗಿರುವ ದೂರಿನ ಪ್ರಕಾರ ಯುವತಿಯನ್ನು ಎಳೆದೊಯ್ದ ಯುವಕರು ಮನೆಯೊಂದರಲ್ಲಿ ಆಕೆಯನ್ನು ಕೂಡಿ ಹಾಕಿ ಬಲಾತ್ಕಾರ ನಡೆಸಿದ್ದಾರೆ ಮತ್ತು ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಉಗ್ರ ಪರಿಣಾಮವನ್ನು ಎದುರಿಸ ಬೇಕಾಗುತ್ತದೆ ಎಂದು ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ.
ಆರೋಪಿಗಳಲ್ಲಿ ಒಬ್ಬನಾಗಿರುವ ಮುಸ್ತಾಕಿಮ್ ಕೋರ್ಟಿಗೆ ಶರಣಾಗಿದ್ದು ಆತನನ್ನು ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗಿದೆ.
ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ದಾಖಲಿಸಲಾಗಿದ್ದು, ವೈದ್ಯಕೀಯ ತಪಾಸಣೆಯ ನಂತರ ಪೀಡಿತ ಯುವತಿಯನ್ನು ಹೇಳಿಕೆಗಾಗಿ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗುವುದು ಎಂದು ಪೋಲಿಸರು ತಿಳಿಸಿದ್ದಾರೆ.
ಘಟನೆಯನ್ನು ವಿರೋಧಿಸಿ ಹಾಗೂ ಯುವತಿಗೆ ನ್ಯಾಯವನ್ನು ಕೋರಿ ಮಹಿಳಾ ಸಂಘಟನೆಗಳು ಜಿಲ್ಲಾ ಆಸ್ಪತ್ರೆಯ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿವೆ.