Select Your Language

Notifications

webdunia
webdunia
webdunia
webdunia

ಅರವಿಂದ್ ಕೇಜ್ರಿವಾಲ್ ಕುಟುಂಬಕ್ಕೆ ಪ್ರವೇಶ ನಿರಾಕರಿಸಿದ ವಾರಣಾಸಿ ದೇವಾಲಯದ ಅಡಳಿತ ಮಂಡಳಿ

ಅರವಿಂದ್ ಕೇಜ್ರಿವಾಲ್ ಕುಟುಂಬಕ್ಕೆ ಪ್ರವೇಶ ನಿರಾಕರಿಸಿದ ವಾರಣಾಸಿ ದೇವಾಲಯದ ಅಡಳಿತ ಮಂಡಳಿ
ವಾರಣಾಸಿ , ಶನಿವಾರ, 19 ಏಪ್ರಿಲ್ 2014 (16:31 IST)
ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಮತ್ತು ಅವರ ಪೋಷಕರು ಪವಿತ್ರ ನಗರ ವಾರಣಾಸಿಯ ಸಂಕಟ್ ಮೋಚನ್ ದೇವಸ್ಥಾನಕ್ಕೆ ಭೇಟಿ ನೀಡಿದಾಗ, ಆಡಳಿತ ಮಂಡಳಿಯಿಂದ ಹೊರ ಕಳುಹಿಸಲ್ಪಟ್ಟಿದ್ದಾರೆ ಎಂದು ವರದಿಯಾಗಿದೆ.
PTI

ದೇವಾಲಯದ ಆವರಣದಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳಿಗೆ ಆಡಳಿತ ಮಂಡಳಿಯವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಕೇಜ್ರಿವಾಲ್ ಮತ್ತು ಅವರ ತಾಯಿ ಗೀತಾ ದೇವಿ ಮತ್ತು ತಂದೆ ಗೋವಿಂದ್ ಕೇಜ್ರಿವಾಲ್‌ರವರನ್ನು ವಾರಣಾಸಿಯ ಪ್ರಖ್ಯಾತ ದೇವಸ್ಥಾನ ಸಂಕಟ್ ಮೋಚನ್‌ನ ಮುಖ್ಯ ಅರ್ಚಕರಾದ ಬಿಸಂಬರ್ ಮಿಶ್ರಾ ಅತಿಥಿಗಳಾಗಿ ಆಹ್ವಾನಿಸಿದ್ದರು.

ಈ ಘಟನೆ ಅರವಿಂದ್ ಕೇಜ್ರಿವಾಲ್ ಮತ್ತು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನಡುವಿನ ಕುತೂಹಲಕಾರಿ ಕದನಕ್ಕೆ ಪ್ರತಿಕೂಲ ಪ್ರತಿಕ್ರಿಯೆ ಎನ್ನುವಂತೆ ತೋರುತ್ತಿದೆ.

ಮಾಜಿ ದೆಹಲಿ ಮುಖ್ಯಮಂತ್ರಿಗೆ ನಿನ್ನೆ "ವೇಗದ ಚೇತರಿಕೆ" ಯಾಗಲಿ ಮತ್ತು ದೇವರು "ಶಾಂತ ಮನಸ್ಸು" ನೀಡಲಿ ಎಂಬ ಪ್ರಾರ್ಥನೆಯುಳ್ಳ ಪೋಸ್ಟರ್‌ಗಳ ಸಮರವನ್ನು ವಿಪಕ್ಷಗಳು ಮುಂದುವರಿಸಿವೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada