Select Your Language

Notifications

webdunia
webdunia
webdunia
webdunia

ಮಾವೋ ದಾಳಿಯಿಂದ ಚುನಾವಣೆ ಸಿಬ್ಬಂದಿಯನ್ನು ಬಚಾವ್‌ ಮಾಡಿದ ವ್ಯಕ್ತಿಯನ್ನು ಗೌರವಿಸಿದ ಸರಕಾರ

ಮಾವೋ ದಾಳಿಯಿಂದ ಚುನಾವಣೆ ಸಿಬ್ಬಂದಿಯನ್ನು ಬಚಾವ್‌ ಮಾಡಿದ ವ್ಯಕ್ತಿಯನ್ನು ಗೌರವಿಸಿದ ಸರಕಾರ
ಜಾರ್ಖಂಡ್‌ , ಗುರುವಾರ, 17 ಏಪ್ರಿಲ್ 2014 (18:18 IST)
2005 ರ ಚುನಾವಣೆ ಸಂದರ್ಭದಲ್ಲಿ ನಡೆದ ನಕ್ಸಲ್ ದಾಳಿಯಿಂದ 50 ಕರ್ತವ್ಯ ನಿರತ ಸಿಬ್ಬಂದಿಗಳ ಜೀವಗಳನ್ನು ಉಳಿಸಿದ 'ಪ್ರೇಮದಾನ್ ಕೆರ್‌ಕಟ್ಟಾ' ಎಂಬ ಹೆಸರಿನ ವ್ಯಕ್ತಿಗೆ 9 ವರ್ಷಗಳಾದರೂ ಶೌರ್ಯ ಪ್ರಶಸ್ತಿ ನೀಡಿ ಪುರಸ್ಕರಿಸಿಲ್ಲ ಎಂದು ವರದಿಯಾಗಿದೆ.
PTI

ತುಂಬ ದೀನ ಪರಿಸ್ಥಿತಿಯಲ್ಲಿರುವ ಅವರು ಊರುಗೋಲಿನ ಸಹಾಯದೊಂದಿಗೆ ಓಡಾಡುತ್ತ ವಿಮೆ ಹಣ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರದನ್ನು ಪಡೆಯಲು ವಿಫಲವಾಗಿದ್ದಾರೆ.

ಜಾರ್ಖಂಡ್‌ನಲ್ಲಿ ನಡೆದ 2005ರ ಅಸೆಂಬ್ಲಿ ಚುನಾವಣೆ ಸಮಯದಲ್ಲಿ, ಬಸ್ ಚಾಲಕ ಪ್ರೇಮದಾನ್ ಕೆರ್‌ಕಟ್ಟಾ ಮತಗಟ್ಟೆಯಿಂದ ಸಿಬ್ಬಂದಿಗಳನ್ನು ಕರೆದುಕೊಂಡು ಹಿಂತಿರುಗುತ್ತಿದ್ದರು. ಅವರು ಕೊಲೈಬಿರಾ ಘಾಟ್‪ನ್ನು ದಾಟುತ್ತಿದ್ದಾಗ ಅವರನ್ನು ಗುರಿಯಾಗಿಸಿದ ನಕ್ಸಲರ ಗುಂಪು ಬಸ್ ಮೇಲೆ ಯದ್ವಾತದ್ವಾ ಗುಂಡು ಹಾರಿಸ ತೊಡಗಿತು.

ಪ್ರೇಮದಾನ್ ಕಾಲಿಗೆ ಒಂದು ಗುಂಡು ತಗುಲಿ ಅವರು ಗಂಭೀರವಾಗಿ ಗಾಯಗೊಂಡರು. ಆದಾಗ್ಯೂ, ಬಸ್ ನಿಲ್ಲಿಸದೇ ವೇಗವನ್ನು ತೀವೃಗೊಳಿಸಿದ ಅವರು ಒಂದು ಕಾಲಿನಿಂದ ರಕ್ತ ಸುರಿಯುತ್ತಿದ್ದರೂ, ಇನ್ನೊಂದು ಕಾಲಿನಿಂದ ವೇಗವರ್ಧಕ ಮತ್ತು ಬ್ರೇಕ್ಸ್‌ನ್ನು ನಿರ್ವಹಿಸಿದರು. 5 ಕಿಲೋಮೀಟರ್ ಬಸ್ ಓಡಿಸಿ ಎಲ್ಲರನ್ನೂ ಅಪಾಯದಿಂದ ಪಾರು ಮಾಡಿಸಿದರು ಎಂದು ದಿನಪತ್ರಿಕೆಯೊಂದರಲ್ಲಿ ವರದಿಯಾಗಿದೆ.

ತನ್ನ ನೋವನ್ನು ಲೆಕ್ಕಿಸದೇ 50 ಜನರ ಪ್ರಾಣವನ್ನು ಉಳಿಸಿದ ಆತನ ಶೌರ್ಯವನ್ನು 9 ವರ್ಷಗಳಾದರೂ ಗುರುತಿಸಿಲ್ಲ. ಅವನಿಗೆ ನೀಡುತ್ತೇವೆ ಎಂದಿದ್ದ 5 ಲಕ್ಷ ರೂ ಜೀವವಿಮೆಯನ್ನು ಕೂಡ ಆತ ಪಡೆದಿಲ್ಲ. ಅದಕ್ಕಾಗಿ ಆತ ಪದೇ ಪದೇ ಸರಕಾರಿ ಕಛೇರಿಗೆ ಅಲೆದಿದ್ದಾನೆ.

ಈಗ ಪ್ರೇಮದಾನ್ ತನ್ನ ಬದುಕಿನ ನಿರ್ವಹಣೆಗಾಗಿ ಮತ್ತು ಮಕ್ಕಳನ್ನು ಓದಿಸುವುದಕ್ಕಾಗಿ ಫಾರ್ಮ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾನೆ.

"ಸರ್ಕಾರ ನನಗೆ ಮಾಡಿದ್ದ ಭರವಸೆಗಳನ್ನು ಪೂರೈಸದಿದ್ದರೂ ಕೂಡ, ಅವರ ನಿರುತ್ಸಾಹ ನನ್ನನ್ನು ದೇಶದ ಸೇವೆ ಮಾಡಲು ತಡೆಯಲು ಸಾಧ್ಯವಿಲ್ಲ" ಎಂದು ಅವರು ಹೇಳಿದ್ದಾರೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada