Webdunia - Bharat's app for daily news and videos

Install App

ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕನನ್ನು ಬಂಧಿಸಿದ ಮುಂಬೈ ಪೋಲಿಸ್

Webdunia
ಗುರುವಾರ, 17 ಏಪ್ರಿಲ್ 2014 (18:10 IST)
ಕಳೆದ ವರ್ಷ ಏಪ್ರಿಲ್ ನಿಂದ ನಗರದ ಪಶ್ಚಿಮದ ಉಪನಗರದಲ್ಲಿ ಕನಿಷ್ಠ 25 ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎನ್ನಲಾದ 32 ವರ್ಷದ ಸರಣಿ ಲೈಂಗಿಕ ಶೋಷಕನನ್ನು ಮುಂಬೈ ಉಪನಗರ ಖಾರ್‌ಲ್ಲಿ ಇಂದು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
PTI

ಒಕ್ಕಣ್ಣಿನ, ಆರೋಪಿ ಅಯಾಜ್ ಮೊಹಮ್ಮದ್ ಅಲಿ ಅನ್ಸಾರಿ (32), ವಿರುದ್ಧ ಜುಹು, ಸಾಂತಾಕ್ರೂಜ್, ಡಿ ನಾಗರ್, ಅಂಬೋಲಿ, ವೆರ್ಸೋವಾ, ಸೈಯನ್ನ, ವಕೋಲಾ, ಗುರಿ ಮಾರ್ಗ್ ಮತ್ತು ಅಂತೊಪ್ ಹಿಲ್ ಪ್ರದೇಶಗಳಲ್ಲಿ 13 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಯನ್ನು ಉಪನಗರದ ಖಾರ್‪ನಲ್ಲಿರುವ ಸೆಕ್ರೆಡ್ ಹಾರ್ಟ್ ಸ್ಕೂಲ್ ಬಳಿ ಬಂಧಿಸಲಾಯಿತು ಎಂದು ಮುಂಬೈ ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ ಹೇಳಿದ್ದಾರೆ.

" ವಿವಿಧ ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ 13 ಪ್ರಕರಣಗಳು ದಾಖಲಾಗಿದ್ದು , 24 ಜನ ಅಪ್ರಾಪ್ತರ ಮೇಲೆ ದಾಳಿ ಮಾಡಿದ್ದನ್ನು ಆತ ಒಪ್ಪಿಕೊಂಡಿದ್ದಾನೆ".

" ಕಳೆದ ವರ್ಷ ಏಪ್ರಿಲ್‌ನಿಂದ 7 ರಿಂದ 16 ವರ್ಷಗಳ ಅಪ್ರಾಪ್ತರನ್ನು ಗುರಿಯಾಗಿಸಿಕೊಂಡು ಆತ ಕೃತ್ಯವೆಸಗುತ್ತಿದ್ದ. ಕಳೆದ ಏಪ್ರಿಲ್ 7 ರಂದು ಉಪನಗರ ಸಿಯೋನ್‌ನಲ್ಲರುವ ತನ್ನ ಶಾಲೆಯಿಂದ ಮನೆಗೆ ಹೋಗುತ್ತಿದ್ದ 13 ವರ್ಷದ ಹುಡುಗಿ ಆತನ ಕೊನೆಯ ಬಲಿಪಶು" ಎಂದು ಮಾರಿಯಾ ತಿಳಿಸಿದ್ದಾರೆ.

ಮೊಬೈಲ್ ಫೋನ್ ಮತ್ತು ಚಿನ್ನದ ಚೈನ್‌ಗಳನ್ನು ಸಹ ಕದಿಯುತ್ತಿದ್ದ ಆರೋಪಿಯನ್ನು ಬೇಟೆಯಾಡಲು ಏಪ್ರಿಲ್ 9 ರಂದು, ನಗರದಾದ್ಯಂತ ಆಯಾ ಪೊಲೀಸ್ ನಿಲ್ದಾಣಗಳಲ್ಲಿ ತಂಡಗಳನ್ನು ರಚಿಸಲಾಗಿತ್ತು.

ಆತನಿಂದ ದಾಳಿಗೊಳಗಾದವರನ್ನು ಭೇಟಿ ಮಾಡಿ ಅವರ ಹೇಳಿಕೆಯ ಮೇರೆಗೆ ಆತನ ಭಾವಚಿತ್ರವನ್ನು ರಚಿಸಲಾಗಿತ್ತು.

ನನಗೆ ನಿಮ್ಮ ಅಪ್ಪನ ಪರಿಚಯವಿದೆ ಎಂದು ಹೇಳಿ ಪುಟ್ಟ ಬಾಲಕಿಯರನ್ನು ನಂಬಿಸಿ, ಅವರನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಆತ ದೌರ್ಜನ್ಯವೆಸಗುತ್ತಿದ್ದ ಎಂದು ಪೋಲಿಸ್ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ