Select Your Language

Notifications

webdunia
webdunia
webdunia
webdunia

ಸಂಕಷ್ಟದಲ್ಲಿದೆ ಟಿಡಿಪಿ-ಬಿಜೆಪಿ ಮೈತ್ರಿ; ಇಂದು ಮೋದಿ ಜತೆ ಚಂದ್ರಬಾಬು ನಾಯ್ಡು ಮಾತುಕತೆ

ಸಂಕಷ್ಟದಲ್ಲಿದೆ ಟಿಡಿಪಿ-ಬಿಜೆಪಿ ಮೈತ್ರಿ; ಇಂದು ಮೋದಿ ಜತೆ ಚಂದ್ರಬಾಬು ನಾಯ್ಡು ಮಾತುಕತೆ
ನವದೆಹಲಿ , ಗುರುವಾರ, 17 ಏಪ್ರಿಲ್ 2014 (15:28 IST)
ಬಿಜೆಪಿ ಮತ್ತು ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷಗಳ ನಡುವಿನ 11 ವರ್ಷಗಳ ಮೈತ್ರಿ ಸಂಕಷ್ಟದಲ್ಲಿದ್ದು, ಇಂದು ನಾಯ್ಡು ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಮಾತನಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
PTI

ತಮ್ಮ ನಡುವೆ ಆಗಿರುವ ಒಪ್ಪಂದಕ್ಕೆ ಅನುಗುಣವಾಗಿ ಬಿಜೆಪಿ 14 ಕ್ಷೇತ್ರಗಳಲ್ಲಿ ಕಣಕ್ಕಿಳಿಸಿರುವ ಅಭ್ಯರ್ಥಿಗಳಲ್ಲಿ ಕೆಲವರನ್ನು ಬದಲಾಯಿಸುವಂತೆ ಟಿಡಿಪಿ ಹೇಳಿತ್ತು.

'ಸಾರ್ವತ್ರಿಕ ಚುನಾವಣೆಯಲ್ಲಿ ಜೊತೆಗೆ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ಕಣಕ್ಕಿಳಿಸಿರುವ ಅಭ್ಯರ್ಥಿಗಳಲ್ಲಿ ಹಲವರು ದುರ್ಬಲ ಅಭ್ಯರ್ಥಿಗಳಾಗಿದ್ದು, ಅದು ನಾಯ್ಡು ಪಕ್ಷದ ಲೋಕಸಭಾ ಅಭ್ಯರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು' ಎಂದು ಅವರ ಪಕ್ಷ ವಾದಿಸುತ್ತಿದೆ.

'ಆದರೆ ಈಗಾಗಲೇ ಸೀಟುಗಳನ್ನು ಹಂಚಲಾಗಿದ್ದು ಈ ವಿಷಯದಲ್ಲಿ ಮಧ್ಯಪ್ರವೇಶಿಸಿಸದಂತೆ' ರಾಜ್ಯ ಬಿಜೆಪಿ ತನ್ನ ಮಿತ್ರ ಪಕ್ಷಕ್ಕೆ ಹೇಳಿತ್ತು.

'ಬಿಜೆಪಿಗೆ ಶನಿವಾರದವರೆಗೆ ಸಮಯ ನೀಡುತ್ತೇವೆ. ಆಗಲೂ ಅವರು ನಾವು ಸೂಚಿಸಿದ ಅಭ್ಯರ್ಥಿಗಳನ್ನು ಕಣದಿಂದ ಹಿಂದಕ್ಕೆ ಕರೆದುಕೊಳ್ಳದಿದ್ದರೆ ನಾವು ಆ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ' ಎಂದು ಟಿಡಿಪಿಯ ಮೂಲಗಳು ತಿಳಿಸಿವೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada