Select Your Language

Notifications

webdunia
webdunia
webdunia
webdunia

ಮಾವೋ ದಾಳಿಯ ಭೀತಿಯ ಮಧ್ಯೆ ಬಿಹಾರದಲ್ಲಿಂದು ಎರಡನೇ ಹಂತದ ಮತದಾನ

ಮಾವೋ ದಾಳಿಯ ಭೀತಿಯ ಮಧ್ಯೆ ಬಿಹಾರದಲ್ಲಿಂದು ಎರಡನೇ ಹಂತದ ಮತದಾನ
ಪಾಟ್ಣಾ , ಗುರುವಾರ, 17 ಏಪ್ರಿಲ್ 2014 (12:28 IST)
ಬಿಹಾರದಲ್ಲಿ ಇಂದು ಎರಡನೇ ಹಂತದ ಚುನಾವಣೆ ನಡೆಯುತ್ತಿದ್ದು, ಏಳು ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಮಾವೋವಾದಿಗಳ ದಾಳಿಯ ಶಂಕೆ ಇರುವುದರಿಂದ ಹೆಚ್ಚಿನ ಮತಗಟ್ಟೆಗಳಲ್ಲಿ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ.
PTI

11,85,07,86 ಮತದಾರರಿದ್ದು 11.846 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಂದು ಮತದಾರರು ಪಾಟ್ಣಾ ಸಾಹಿಬ್, ಪಾಟಲಿಪುತ್ರ, ನಳಂದಾ, ಜೇಹಾನಾಬಾದ್, ಮುಂಗರ್, ಅರಾ ಮತ್ತು ನಡೆದ ಬುಕ್ಸಾರ್ ಲೋಕಸಭಾ ಕ್ಷೇತ್ರಗಳಲ್ಲಿ 117 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸುತ್ತಾರೆ.

ಅಭ್ಯರ್ಥಿಗಳ ನಡುವೆ ಪ್ರಮುಖರಾದವರೆಂದರೆ ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ, ಮಾಜಿ ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್, ಲಾಲು ಪ್ರಸಾದ್ ಅವರ ಹಿರಿಯ ಮಗಳು ಮೀಸಾ ಭಾರತಿ ಮತ್ತು ಆಕೆಯ ಇಬ್ಬರು ಚಿಕ್ಕಪ್ಪ ರಾಮಕೃಪಾಲ್ ಯಾದವ್ ಮತ್ತು ರಂಜನ್ ಯಾದವ್.

ಇಂದಿನ ಚುನಾವಣೆಗಾಗಿ ಸ್ಟಾರ್ ಬಿಜೆಪಿ ಅಭ್ಯರ್ಥಿಗಳಿಂದ ಭಾರೀ ಪ್ರಚಾರವನ್ನು ಕೈಗೊಳ್ಳಲಾಗಿತ್ತು. ಇಂದಿನ ಚುನಾವಣೆ ಕೂಡಿತ್ತು. ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಏಪ್ರಿಲ್ 10 ರಂದು ಪಾಟಲಿಪುತ್ರ, ಜೇಹಾನಾಬಾದ್, ಅರಾ ಮತ್ತು ಬಿಕ್ರಮ್ ನಲ್ಲಿ ಸಮಾವೇಶಗಳನ್ನು ನಡೆಸಿದ್ದರು.

ಅಂತೆಯೇ, ಬಿಜೆಪಿ ಹಿರಿಯ ಎಲ್.ಕೆ. ಅಡ್ವಾಣಿ ಏಪ್ರಿಲ್ 14 ರಂದು ಬಂಕ ಮತ್ತು ಕಟಿಹಾರ್‌ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ್ದರು.

ಸಿನಿಮಾ ಸ್ಟಾರ್ ಶತ್ರುಘ್ನ ಸಿನ್ಹಾ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಪುನರಾಯ್ಕೆಯನ್ನು ಬಯಸಿದ್ದಾರೆ. ಅವರ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ಸಿನಿಂದ ಭೋಜಪುರಿ ನಟ ಕುನಾಲ್ ಸಿಂಗ್ ಕಣದಲ್ಲಿದ್ದಾರೆ.

ಒಟ್ಟು 42.600 ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಎ.ಕೆ. ಸಿನ್ಹಾ ತಿಳಿಸಿದ್ದಾರೆ.

ಚುನಾವಣೆ ಮೊದಲ ಹಂತದಂತೆ , ಇಂದು ಸಹ ಎರಡು ಹೆಲಿಕಾಪ್ಟರ್‌ಗಳನ್ನು ಚುನಾವಣಾ ಸೇವೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ.

ಮಾವೋವಾದಿಗಳ ದಾಳಿಯ ಭೀತಿ ಇರುವ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ 4 ಗಂಟೆಗಳವರೆಗೆ, ಉಳಿದೆಡೆ 6 ಘಂಟೆಯವರೆಗೆ ಮತದಾನ ನಡೆಯಲಿದೆ.

ಮತದಾನ ಸಮಯವನ್ನು ಮೊಟಕುಗೊಳಿಸಲಾಗಿರುವ ನಕ್ಸಲ್ ಪೀಡಿತ ವಿಧಾನಸಭಾ ಕ್ಷೇತ್ರಗಳೆಂದರೆ ಮುಂಗರ್, ಜೇಹಾನಾಬಾದ್, ಲಖಿಸಾರಿ, ಪಾಟಲಿಪುತ್ರ, ಮತ್ತು ಗ್ರಾಮೀಣ ಪಾಟ್ಣಾ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada