Select Your Language

Notifications

webdunia
webdunia
webdunia
webdunia

2014 ಲೋಕಸಭಾ ಚುನಾವಣೆಯ ಅತಿ ದೊಡ್ಡ ಕದನ: ಇಂದು 12 ರಾಜ್ಯಗಳ 121 ಸ್ಥಾನಗಳಿಗೆ ಮತದಾನ

2014 ಲೋಕಸಭಾ ಚುನಾವಣೆಯ ಅತಿ ದೊಡ್ಡ ಕದನ: ಇಂದು 12 ರಾಜ್ಯಗಳ 121 ಸ್ಥಾನಗಳಿಗೆ ಮತದಾನ
ನವದೆಹಲಿ , ಗುರುವಾರ, 17 ಏಪ್ರಿಲ್ 2014 (10:04 IST)
ಭಾರತದ ಒಂಬತ್ತು ಹಂತದ ರಾಷ್ಟ್ರೀಯ ಚುನಾವಣೆಯ ಐದನೇ ಹಂತದ ದೊಡ್ಡ ಸುತ್ತಿನ ಮತದಾನ ಇಂದು ನಡೆಯುತ್ತಿದ್ದು 12 ರಾಜ್ಯಗಳ, 121 ಕ್ಷೇತ್ರಗಳಲ್ಲಿ ಮತದಾನ ಪ್ರಾರಂಭವಾಗಿದೆ.
PTI

ನಂದನ್ ನಿಲೇಕಣಿ, ಮೇನಕಾ ಗಾಂಧಿ, ಮಾಜಿ ಪ್ರಧಾನಿ ಎಚ್ ಡಿ ದೇವೆಗೌಡ, ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ಸುಪ್ರಿಯಾ ಸುಳೆ ಮತ್ತು ಲಾಲುಪ್ರಸಾದ್ ಹಿರಿಯ ಮಗಳು ಮಿಸಾ ಭಾರ್ತಿ ಚುನಾವಣೆಯ ಐದನೇ ಹಂತದಲ್ಲಿ ಕಣದಲ್ಲಿರುವ 1,769 ಅಭ್ಯರ್ಥಿಗಳ ಸಾಲಲ್ಲಿರುವ ಪ್ರಮುಖರಾಗಿದ್ದಾರೆ.

ಒಟ್ಟು ಸ್ಥಾನಗಳಲ್ಲಿ ಕಾಂಗ್ರೆಸ್‌ನ 36, ಅದರ ಮುಖ್ಯ ಎದುರಾಳಿ ಬಿಜೆಪಿಯಿಂದ 40 ಅಭ್ಯರ್ಥಿಗಳಿದ್ದಾರೆ.

ಕರ್ನಾಟಕದ 28 ಸ್ಥಾನಗಳನ್ನು ಒಳಗೊಂಡಂತೆ, ರಾಜಸ್ಥಾನ (20), ಮಹಾರಾಷ್ಟ್ರ (19), ಉತ್ತರ ಪ್ರದೇಶ (11), ಒರಿಸ್ಸಾ (11), ಮಧ್ಯಪ್ರದೇಶ (10), ಬಿಹಾರ (7), ಜಾರ್ಖಂಡ್ (6), ಪಶ್ಚಿಮ ಬಂಗಾಳ (4), ಛತ್ತೀಸ್‌ಗಡ್ (3), ಜಮ್ಮು ಮತ್ತು ಕಾಶ್ಮೀರ ಮತ್ತು ಮಣಿಪುರ ದಲ್ಲಿ ಕ್ರಮವಾಗಿ 1 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.

28 ಕ್ಷೇತ್ರಗಳ ಕರ್ನಾಟಕದಲ್ಲಿ ಬಿಜೆಪಿಯ 18, ಕಾಂಗ್ರೆಸ್ಸಿನ 8 ಮತ್ತು ಜನತಾ ದಳ (ಸೆಕ್ಯುಲರ್) ಮತ್ತು ಜೆಡಿಎಸ್ ನಿಂದ ಓರ್ವ ಹಾಲಿ ಸಂಸದರಿದ್ದಾರೆ

ಇಲ್ಲಿಯವರೆಗೆ, ನಾಲ್ಕು ಹಂತಗಳಲ್ಲಿ, 111 ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದ್ದು ಕಳೆದ ಏಪ್ರಿಲ್ 10ರಂದು ನಡೆದ ಗಣನೀಯ ಸುತ್ತಿನಲ್ಲಿ 91 ಸ್ಥಾನಗಳಿಗೆ ಮತದಾನ ನಡೆದಿತ್ತು.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada