Webdunia - Bharat's app for daily news and videos

Install App

ಮೋದಿಯ ಭಯದಿಂದ ಮುಸಲ್ಮಾನರು ಬಿಜೆಪಿಯಿಂದ ದೂರವಿದ್ದಾರೆ

Webdunia
ಬುಧವಾರ, 16 ಏಪ್ರಿಲ್ 2014 (12:26 IST)
" ಬಿಜೆಪಿಯ ಪ್ರಧಾನಮಂತ್ರಿ ಸ್ಥಾನದ ಅಭ್ಯರ್ಥಿ ನರೇಂದ್ರ ಮೋದಿ ಬಗ್ಗೆ ಮುಸಲ್ಮಾನರಲ್ಲಿ ಒಳಗೊಳಗೆ ಸಂಶಯವಿದ್ದು, ಆ ಕಾರಣಕ್ಕೆ ನಮ್ಮ ಸಮುದಾಯ ಬಿಜೆಪಿಯಿಂದ ದೂರವಿದೆ" ಎಂದು ಶಿಯಾ ಪಂಥಾವಲಂಬಿಗಳ ಧರ್ಮಗುರು ಕಲ್ಬೆ ಜ್ವಾದ್ ಹೇಳಿದ್ದಾರೆ.
PTI

" ವಾಜಪೇಯಿಯನ್ನು ಮೆಚ್ಚುತ್ತಿದ್ದ ಮುಸಲ್ಮಾನರು ಮೋದಿಗಿಂತ ರಾಜನಾಥ್ ಸಿಂಗ್‌ರನ್ನು ಹೆಚ್ಚು ಸ್ವೀಕರಿಸುತ್ತಾರೆ. ಮೋದಿ ಬಗ್ಗೆ ಅವರಿಗಿರುವ ಭಯ ಇನ್ನೂ ಕಡಿಮೆಯಾಗಿಲ್ಲ. ಆದ್ದರಿಂದ ಅವರು ಬಿಜೆಪಿಯನ್ನು ಬೆಂಬಲಿಸುತ್ತಿಲ್ಲ" ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಮಂಗಳವಾರ ತಮ್ಮ ಪಕ್ಷಕ್ಕೆ ಬೆಂಬಲ ನೀಡಿ ಎಂದು ಕೇಳಿಕೊಳ್ಳಲು ಶಿಯಾ ಧರ್ಮಗುರು ಕಲ್ಬೆ ಜ್ವಾದ್‌ ಮತ್ತು ಸುನ್ನಿ ಧರ್ಮಗುರು ಫಿರಂಗಿ ಮಹ್ಲಿರವರನ್ನು ಭೇಟಿಯಾಗಿದ್ದರು. ಭೇಟಿಯ ನಂತರ ಈ ಇಬ್ಬರು ಮುಸ್ಲಿಂ ಧಾರ್ಮಿಕ ನಾಯಕರು ರಾಜನಾಥ್‌ರವರನ್ನು ಅತಿಯಾಗಿ ಪ್ರಶಂಸೆ ಮಾಡಿದ್ದರು.

ರಾಜನಾಥ್ ಮುಸ್ಲಿಂ ಧಾರ್ಮಿಕ ಮುಖಂಡರನ್ನು ಭೇಟಿಯಾದ ನಂತರ ಬಿಜೆಪಿ ಮೇಲೆ ಸಹ ಧರ್ಮ ರಾಜಕೀಯ ಮಾಡುತ್ತಿದೆ ಎಂಬ ಆರೋಪಗಳು ಹುಟ್ಟ ತೊಡಗಿವೆ. ಅಲ್ಲದೆ ಮೊದಲಿನಿಂದಲೂ ಬಿಜೆಪಿ ಹಿಂದೂ ಮತಗಳನ್ನು ಧ್ರುವೀಕರಣ ಮಾಡಲು ಪ್ರಯತ್ನಿಸುತ್ತದೆ ಎಂಬ ಆರೋಪಗಳಿವೆ.

ಕೆಲದಿನಗಳ ಮೊದಲು ಸೋನಿಯಾ ಗಾಂಧಿ ಕೂಡ ಮುಸಲ್ಮಾನ್ ನಾಯಕ ಇಮಾಮ್ ಬುಖಾರಿ ಮತ್ತು ಹಲವರನ್ನು ಭೇಟಿಯಾಗಿದ್ದರು. ಅದರ ನಂತರ ಬುಖಾರಿ ತಮ್ಮ ಸಮುದಾಯದವರ ಹತ್ತಿರ ಮುಸಲ್ಮಾನರಿಗೆ ಮತ ನೀಡುವಂತೆ ಮನವಿ ಮಾಡಿದ್ದರು.

ಸಿಂಗ್ ಭೇಟಿಯ ಬಗ್ಗೆ ಟೀಕೆ ಮಾಡಿರುವ ಸಮಾಜವಾದಿ ನಾಯಕ ರಾಜೇಂದ್ರ ಪಾಟೀಲ್ "ಮತಕ್ಕಾಗಿ ಬಿಜೆಪಿ ಏನು ಬೇಕಾದರೂ ಮಾಡುತ್ತಾರೆ" ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments