Webdunia - Bharat's app for daily news and videos

Install App

ನರೇಂದ್ರ ಮೋದಿ ಪ್ರಧಾನಿಯಾಗುತ್ತಾರೆ ಎನ್ನುವುದು ಕಲ್ಪನೆ: ಮಮತಾ ಬ್ಯಾನರ್ಜಿ

Webdunia
ಮಂಗಳವಾರ, 15 ಏಪ್ರಿಲ್ 2014 (20:02 IST)
' ನರೇಂದ್ರ ಮೋದಿ ಪ್ರಧಾನಿಯಾಗುತ್ತಾರೆ ಎನ್ನುವುದು ಕಲ್ಪನೆ' ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
PTI

ಲೋಕಸಭಾ ಚುನಾವಣೆಯ ನಂತರ ಫೆಡರಲ್ ಫ್ರಂಟ್ ಸರ್ಕಾರ ರೂಪುಗೊಳ್ಳುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಕೋಲ್ಕತಾದಲ್ಲಿ ನಡೆದ ಸಂದರ್ಶನವೊಂದರಲ್ಲಿ ಮೋದಿ ಪ್ರಧಾನಿಯಾದರೆ ನೀವು ಉತ್ತಮ ಹಣಕಾಸು ಸೌಲಭ್ಯವನ್ನು ನಿರೀಕ್ಷಿಸುತ್ತೀರಾ ಎಂದು ಮಮತಾರವರನ್ನು ಕೇಳಿದಾಗ "ಮೋದಿ ಪ್ರಧಾನಿಯಾಗುತ್ತಾರೆ ಎನ್ನುವುದು ಕಲ್ಪನೆ . ಆದ್ದರಿಂದ, ನಾನು ಈ ಕಾಲ್ಪನಿಕ ಪ್ರಶ್ನೆಗೆ ಉತ್ತರ ನೀಡಲು ಬಯಸುವುದಿಲ್ಲ" ಎಂದು ಅವರು ತಿಳಿಸಿದರು.

" ಬಂಗಾಳಕ್ಕೆ ಭಿಕ್ಷಾಪಾತ್ರೆಯನ್ನು ಹಿಡಿದುಕೊಂಡು ಹೋಗುವ ಅಗತ್ಯವಿಲ್ಲ. ಎಡ ಪಂಥದವರ ಮೂರು ದಶಕಗಳ ಆಡಳಿತದಿಂದ ಉಂಟಾಗಿರುವ ಬಂಗಾಳದ ಹೊರೆಯನ್ನು ಪುನರ್ ರಚನೆ ಮಾಡುತ್ತೇವೆ ಎಂದು 2011ರ ಚುನಾವಣೆಗೆ ಮೊದಲು ಪ್ರಧಾನಿ ವಾಗ್ದಾನ ಮಾಡಿದ್ದರು".

" ನಾನು ಮತ್ತು ನನ್ನ ಹಣಕಾಸು ಸಚಿವರು ಅನೇಕ ಸಭೆಗಳನ್ನು ನಡೆಸಿದೆವು. ಆದರೆ ಅವರು ಏನನ್ನೂ ಮಾಡಲಿಲ್ಲ. ಅವರು ತಮ್ಮ ಭರವಸೆಯನ್ನು ಉಳಿಸಿಕೊಳ್ಳಲಿಲ್ಲ" ಎಂದು ಮಮತಾ ಹೇಳಿದ್ದಾರೆ.

ಪಶ್ಚಿಮ ಬಂಗಾಳವನ್ನು ಗುಜರಾತ್ ಜತೆ ಹೋಲಿಕೆ ಮಾಡಿದ ಮುಖ್ಯಮಂತ್ರಿ ಮಮತಾ, "ಗುಜರಾತ್ ಜತೆ,ಬಂಗಾಳವನ್ನು ಹೋಲಿಕೆ ಮಾಡುವುದು ಶ್ರೀಮಂತ, ಸವಲತ್ತು ಪಡದ ಮಗುವನ್ನು ಮತ್ತು ಪೋಷಣೆಯಿಲ್ಲದ ಮಗುವಿನ ಜತೆ ಹೋಲಿಸಿದ ಹಾಗೆ" ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments