Select Your Language

Notifications

webdunia
webdunia
webdunia
webdunia

ರಾಜಧಾನಿಯಲ್ಲಿ ಶಂಕಿತ ಐಎಸ್‌ಐ ಏಜೆಂಟ್‌ನ ಬಂಧನ

ರಾಜಧಾನಿಯಲ್ಲಿ ಶಂಕಿತ ಐಎಸ್‌ಐ ಏಜೆಂಟ್‌ನ ಬಂಧನ
ನವದೆಹಲಿ , ಮಂಗಳವಾರ, 21 ಫೆಬ್ರವರಿ 2012 (13:39 IST)
ಅನಧಿಕೃತವಾಗಿ ಸೇನಾದಾಖಲೆಗಳನ್ನು ಹೊಂದಿದ ಶಂಕಿತ ಐಎಸ್‌ಐ ಏಜೆಂಟ್‌ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗುಪ್ತಚರ ಮಾಹಿತಿಯ ಮೇರೆಗೆ ಫೆಬ್ರವರಿ 13 ರಂದು ನವದೆಹಲಿ ರೈಲ್ವೆ ನಿಲ್ದಾಣದ ಬಳಿ ಕೋಲ್ಕತಾ ಮೂಲದ ಕಮ್ರಾನ್ ಅಕ್ಬರ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಅಕ್ಬರ್ ಬಳಿ ಸೇನಾ ನೆಲೆಗಳ ಬಗ್ಗೆ ಮಾಹಿತಿಯಿರುವ ದಾಖಲೆ ಸೇರಿದಂತೆ ಇತರ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದ ಕರಾಚಿ ಮೂಲದವನಾದ ಅಕ್ಬರ್, ಭಾರತೀಯ ಮಹಿಳೆಯನ್ನು ಮದುವೆಯಾಗಿದ್ದಲ್ಲದೇ ಭಾರತದ ಪಾಸ್‌ಪೋರ್ಟ್ ಕೂಡಾ ಹೊಂದಿದ್ದನು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada