Select Your Language

Notifications

webdunia
webdunia
webdunia
webdunia

ಗುಜರಾತ್: ಬಿಜೆಪಿ ಶಾಸಕ ಸೇರಿ 17ಮಂದಿಯಿಂದ ರೇಪ್

ಗುಜರಾತ್: ಬಿಜೆಪಿ ಶಾಸಕ ಸೇರಿ 17ಮಂದಿಯಿಂದ ರೇಪ್
ಗುಜರಾತ್ , ಭಾನುವಾರ, 11 ಡಿಸೆಂಬರ್ 2011 (09:59 IST)
ಗುಜರಾತ್ ಅಮ್ರೇಲಿ ಗ್ರಾಮ ಪಂಚಾಯ್ತಿಯ ಸದಸ್ಯೆಯೊಬ್ಬಳ ಮೇಲೆ ಸುಮಾರು ಆರು ತಿಂಗಳ ಹಿಂದೆ ಬಿಜೆಪಿ ಶಾಸಕ ಹಾಗೂ ಇತರ 17 ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಬಗ್ಗೆ ದೂರು ದಾಖಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಧಾರಿ ಗ್ರಾಮ ಪಂಚಾಯ್ತಿಯಲ್ಲಿ ಸದಸ್ಯೆಯಾಗಿರುವ ತನ್ನ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವುದಾಗಿ ಆರೋಪಿಸಿ ಆಕೆಯ ಪತಿ ಎರಡು ದೂರುಗಳನ್ನು ಪೊಲೀಸ್ ಠಾಣೆಗೆ ಸಲ್ಲಿಸಿರುವುದಾಗಿ ವಿವರಿಸಿದ್ದಾರೆ.

ಅತ್ಯಾಚಾರಕ್ಕೊಳಗಾಗಿರುವ ಪತ್ನಿಯ ಗಂಡ ಎರಡು ದೂರು ಸಲ್ಲಿಸಿದ್ದು, ಅದರಲ್ಲಿ ಧಾರಿ ಬಿಜೆಪಿ ಶಾಸಕ ಮನ್‌ಶುಖಾ ಭುವಾ ಹಾಗೂ ಇತರ 18 ಮಂದಿ ಸೇರಿಕೊಂಡು ಆರು ತಿಂಗಳ ಹಿಂದೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿರುವುದಾಗಿ ಆಪಾದಿಸಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಎಚ್.ಆರ್.ಮುಲಿಯಾನಾ ಪಿಟಿಐಗೆ ತಿಳಿಸಿದ್ದಾರೆ.

ದೂರಿನಲ್ಲಿ ಕೇವಲ ಆರು ಮಂದಿಯನ್ನು ಹೆಸರಿಸಲಾಗಿದೆ, ಉಳಿದ 12 ಮಂದಿ ಅಪರಿಚಿತರು ಎಂದು ದೂರಿನಲ್ಲಿ ಹೇಳಲಾಗಿದೆ. ಆದರೆ ಈ ಘಟನೆ ಆರು ತಿಂಗಳ ಹಿಂದೆ ನಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಆ ಬಗ್ಗೆಯೂ ನಾವು ಪರಿಶೀಲನೆ ನಡೆಸಬೇಕಾಗಿದೆ ಎಂದು ಹೇಳಿದ್ದಾರೆ.

ಅತ್ಯಾಚಾರಕ್ಕೊಳಗಾಗಿದ್ದೇನೆ ಎಂದು ಹೇಳಲಾಗಿರುವ ಮಹಿಳೆಯನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಿದ್ದು, ಮುಂದಿನ ತನಿಖೆಗೆ ಹೆಚ್ಚಿನ ಸಹಕಾರಿಯಾಗಲಿದೆ. ಏತನ್ಮಧ್ಯೆ ತಮ್ಮ ವಿರುದ್ಧದ ಗ್ಯಾಂಗ್ ರೇಪ್ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಶಾಸಕ ಮನ್‌ಶುಖಾ ಪೊಲೀಸ್ ಅಧಿಕಾರಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ಮತ್ತು ಬ್ಲ್ಯಾಕ್ ಮೇಲ್ ತಂತ್ರ ಎಂದು ಅವರು ಆರೋಪಿಸಿದ್ದಾರೆ.

ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಈ ಬಗ್ಗೆ ಪೊಲೀಸರಿಗೆ ಮುಕ್ತ ಅವಕಾಶ ನೀಡಲಾಗಿದೆ. ಯಾರೂ ತಪ್ಪಿತಸ್ಥರೆಂದು ಕಂಡುಬರುತ್ತದೋ ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

Share this Story:

Follow Webdunia kannada