Select Your Language

Notifications

webdunia
webdunia
webdunia
webdunia

ವಿಪಕ್ಷಗಳಿಂದ ಮಾಯಾ ವಿರುದ್ಧ ಅವಿಶ್ವಾಸ ಗೊತ್ತುವಳಿ

ವಿಪಕ್ಷಗಳಿಂದ ಮಾಯಾ ವಿರುದ್ಧ ಅವಿಶ್ವಾಸ ಗೊತ್ತುವಳಿ
ಲಕ್ನೋ , ಸೋಮವಾರ, 21 ನವೆಂಬರ್ 2011 (12:31 IST)
PTI
ಉತ್ತರಪ್ರದೇಶದ ವಿಧಾನಸಭೆ ಅಧಿವೇಶನದಲ್ಲಿ ಮಾಯಾವತಿ ಸರಕಾರದ ವಿರುದ್ಧ ವಿಪಕ್ಷಗಳು ಅವಿಶ್ವಾಸ ಗೊತ್ತುವಳಿ ನೋಟಿಸ್ ಮಂಡಿಸಿದ್ದರಿಂದ ಸದನದಲ್ಲಿ ಭರಿ ಕೋಲಾಹಲ ಉಂಟಾಗಿದ್ದರಿಂದ ಸದನವನ್ನು ಮಧ್ಯಾಹ್ನದವರೆಗೆ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ಉತ್ತರಪ್ರದೇಶವನ್ನು ವಿಭಜಿಸಿ ನಾಲ್ಕು ಪ್ರತ್ಯೇಕ ರಾಜ್ಯಗಳನ್ನಾಗಿ ವಿಭಜಿಸಬೇಕು ಎನ್ನುವ ಸರಕಾರದ ನಿಲುವನ್ನು ವಿರೋಧಪಕ್ಷಗಳು ತೀವ್ರವಾಗಿ ಖಂಡಿಸಿ, ಆಕ್ರೋಶ ವ್ಯಕ್ತಪಡಿಸಿವೆ.

ಭಾರತೀಯ ಜನತಾ ಪಕ್ಷ ಮತ್ತು ಸಮಾಜವಾದಿ ಪಕ್ಷದ ಸದಸ್ಯರಿಂದ ಸದನದಲ್ಲಿ ಉಂಟಾದ ಕೋಲಾಹಲದ ಪರಿಸ್ಥಿತಿಯನ್ನು ನಿಭಾಯಿಸಲು ಬಿಎಸ್‌ಪಿ ಪಕ್ಷದ ಮೂವರ ಶಾಸಕರ ಅಮಾನತು ಆದೇಶವನ್ನು ರದ್ದುಗೊಳಿಸಿದ್ದಾರೆ.

ವಿರೋಧಪಕ್ಷದ ನಾಯಕ ಶಿವಪಾಲ್ ಯಾದವ್ ನೇತೃತ್ವದ ನಿಯೋಗ ರಾಜ್ಯಪಾಲ ಬಿ.ಎಲ್.ಜೋಷಿಯವರನ್ನು ಭೇಟಿ ಮಾಡಿ, ವಿಧಾನಸಭೆ ಅಧಿವೇಶನವನ್ನು ಕೇವಲ ಎರಡು ದಿನಗಳಿಗೆ ಸೀಮಿತಗೊಳಿಸದೆ ಮತ್ತಷ್ಟು ದಿನಗಳ ಕಾಲ ನಡೆಸುವಂತೆ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದೆ.

ಬಹುಜನ ಸಮಾಜ ಪಕ್ಷದ ಕನಿಷ್ಠ 40 ಶಾಸಕರು ಪಕ್ಷವನ್ನು ತೊರೆದಿದ್ದಾರೆ.ಆದ್ದರಿಂದ ಮುಖ್ಯಮಂತ್ರಿ ಮಾಯಾವತಿ ನೇತೃತ್ವದ ಸರಕಾರ ಬಹುಮತ ಕಳೆದುಕೊಂಡಿದೆ. ಕೂಡಲೇ ರಾಜ್ಯಪಾಲರು ಸರಕಾರವನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಅವಿಶ್ವಾಸ ಗೊತ್ತುವಳಿ ಸೂಚನೆ ಮತ್ತು ಉತ್ತರಪ್ರದೇಶ ವಿಭಜನೆ ಕುರಿತಂತೆ ಮಸೂದೆ ಮಂಡಿಸುವ ಸಂದರ್ಭದಲ್ಲಿ ಎಲ್ಲಾ ಶಾಸಕರು ಸದನದಲ್ಲಿ ಹಾಜರಿರುವಂತೆ ಮುಖ್ಯಮಂತ್ರಿ ಮಾಯಾವತಿ ತಮ್ಮ ಪಕ್ಷದ ಶಾಸಕರಿಗೆ ಕಟ್ಟು ನಿಟ್ಟಿನ ಆದೇಶ ನೀಡಿದ್ದಾರೆ.

ಉತ್ತರಪ್ರದೇಶದ ವಿಧಾನಸಭೆಯಲ್ಲಿ 221 (ಬಿಎಸ್‌ಪಿ) ಎಸ್‌ಪಿ(88), ಬಿಜೆಪಿ(48), ಕಾಂಗ್ರೆಸ್ (20), ಆರ್‌ಎಲ್‌ಡಿ(10) ಮತ್ತು ಇತರರು (10) ಶಾಸಕರಿದ್ದಾರೆ.

Share this Story:

Follow Webdunia kannada