Webdunia - Bharat's app for daily news and videos

Install App

ಟೆಲಿಕಾಂ ಹಗರಣ:ಮಾಜಿ ಸಚಿವ ಸುಖ್‌ರಾಮ್‌ಗೆ 5 ವರ್ಷ ಶಿಕ್ಷೆ

Webdunia
ಶನಿವಾರ, 19 ನವೆಂಬರ್ 2011 (16:30 IST)
PTI
1996 ರಲ್ಲಿ ನಡೆದ ಟೆಲಿಕಾಂ ಇಲಾಖೆಯಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಸುಖ್‌ರಾಮ್ ಅವರನ್ನು ದೋಷಿ ಎಂದು ನ್ಯಾಯಾಲಯ ಘೋಷಿಸಿ ಐದು ವರ್ಷ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ನವದೆಹಲಿಯಲ್ಲಿನ ವಿಶೇಷ ನ್ಯಾಯಾಲಯ 15 ವರ್ಷಗಳ ನಂತರ ಸುದೀರ್ಘ ವಿಚಾರಣೆ ಬಳಿಕ ಶನಿವಾರದಂದು ಶಿಕ್ಷೆಯ ಪ್ರಮಾಣವನ್ನು ಘೋಷಿಸಿದೆ.

ಟೆಲಿಕಾಂ ಇಲಾಖೆಗೆ ಕೇಬಲ್‌ಗಳನ್ನು ಪೂರೈಸಲು ಖಾಸಗಿ ಕಂಪೆನಿಗೆ ನಿಯಮ ಉಲ್ಲಂಘಿಸಿ ಸುಖ್‌ರಾಮ್ ಗುತ್ತಿಗೆ ನೀಡಿದ್ದರು. ಅದನ್ನು 30 ಕೋಟಿ ರೂಪಾಯಿ ವೆಚ್ಚದಲ್ಲಿ ಪೂರೈಸಬೇಕೇಬ ಒಪ್ಪಂದವಾಗಿತ್ತು.ಕಾನೂನು ಬದ್ಧವಾಗಿ ಪಡೆಯುವ ಮೊತ್ತದ ಜೊತೆಗೆ ಕಂಪೆನಿಗೆ ಗುತ್ತಿಗೆ ನೀಡಲು 3 ಲಕ್ಷ ರೂಪಾಯಿ ಲಂಚ ಪಡೆದಿದ್ದರು ಎನ್ನುವ ಆರೋಪವನ್ನು ಸುಖ್‌ರಾಮ್ ಮೇಲೆ ಹೊರಿಸಲಾಗಿತ್ತುಯ

ವಿಚಾರಣೆ ವೇಳೆ ಸುಖ್‌ರಾಮ್ ಪರ ವಕೀಲರು ಮಂಡಿಸಿದ ವಾದ ತಿರಸ್ಕರಿಸಿ ಅವರ ಕ್ರಮದಿಂದ ಕೇಂದ್ರ ಸರಕಾರದ ಬೊಕ್ಕಸಕ್ಕೆ ಹಾನಿಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಸುಖ್‌ರಾಮ್ ವಿರುದ್ಧದ ತೀರ್ಪಿನಿಂದ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಆತಂಕ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಶಿಕ್ಷೆಯ ಭೀತಿ ಕಾಡಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments