Select Your Language

Notifications

webdunia
webdunia
webdunia
webdunia

ಆಸ್ಪತ್ರೆ ನಿರ್ಲಕ್ಷ್ಯ: ಮೃತ ಮಹಿಳೆಯ ಪತಿಗೆ 1.73 ಕೋಟಿ ಪರಿಹಾರ

ಆಸ್ಪತ್ರೆ ನಿರ್ಲಕ್ಷ್ಯ: ಮೃತ ಮಹಿಳೆಯ ಪತಿಗೆ 1.73 ಕೋಟಿ ಪರಿಹಾರ
ನವದೆಹಲಿ , ಶನಿವಾರ, 22 ಅಕ್ಟೋಬರ್ 2011 (17:20 IST)
WD
ವೈದ್ಯಕೀಯ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿ ಮೃತ ಮಹಿಳೆಯ ಪತಿಗೆ 1.73 ಕೋಟಿ ರೂಪಾಯಿ ದಾಖಲೆ ಮೊತ್ತದ ಪರಿಹಾರ ನೀಡುವಂತೆ ಆಸ್ಪತ್ರೆಗೆ ಗ್ರಾಹಕ ನ್ಯಾಯಾಲಯವೊಂದು ಆದೇಶಿಸಿದೆ.

ಭಾರತೀಯ ಸಂಜಾತ ಅಮೆರಿಕ ನಿವಾಸಿ ವೈದ್ಯರೊಬ್ಬರು 1998ರಲ್ಲಿ ಕೋಲ್ಕತಾದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ತಮ್ಮ ಪತ್ನಿಯನ್ನು ಚಿಕಿತ್ಸೆಗೆ ದಾಖಲಿಸಿದ್ದರು. ಆದರೆ ವೈದ್ಯರ ನಿರ್ಲಕ್ಷ್ಯದಿಂದ ಆಕೆ ಸಾವನ್ನಪ್ಪಿದ್ದರು.

ರಾಷ್ಟ್ರೀಯ ಗ್ರಾಹಕರ ವಿವಾದ ಪರಿಹಾರ ಆಯೋಗ (ಎನ್‌ಸಿಡಿಆರ್‌ಸಿ)ವು ಈ ಕುರಿತು ತೀರ್ಪು ನೀಡಿ, ಈ ಪರಿಹಾರದ ಮೊತ್ತವನ್ನು ಕೋಲ್ಕತಾದ ಮೂವರು ವೈದ್ಯರು ಹಾಗೂ ಅಡ್ವಾನ್ಸ್‌ಡ್ ಮೆಡಿಕೇರ್ ಮತ್ತು ರಿಸರ್ಚ್ ಇನ್‌ಸ್ಟಿಟ್ಯೂಟ್ (ಎಎಂಆರ್ಐ) ಗೆ ವ್ಯವಸ್ಥೆ ಮಾಡುವಂತೆ ಆದೇಶಿಸಿದೆ.

ಅಮೆರಿಕಾ ವೈದ್ಯ ಕುನಾಲ್ ಸಹಾ ಅವರು ನೀಡಿದ ದೂರಿನನ್ವಯ, ಬೇಸಿಗೆ ರಜಾಕ್ಕಾಗಿ ಆಗಮಿಸಿದ್ದ ಮಕ್ಕಳ ಮನೋಶಾಸ್ತ್ರಜ್ಞೆಯಾಗಿದ್ದ ಪತ್ನಿ ಅನುರಾಧಾರ ಸಾವಿಗೆ ವೈದ್ಯಕೀಯ ನಿರ್ಲಕ್ಷ್ಯವೇ ಕಾರಣ ಎಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟು, ಈ ಪ್ರಕರಣವನ್ನು ಗ್ರಾಹಕ ನ್ಯಾಯಪೀಠಕ್ಕೆ ಒಪ್ಪಿಸಿತ್ತು.

ಏಡ್ಸ್/ಹೆಚ್ಐವಿ ಸಂಶೋಧಕರಾಗಿ ಕೆಲಸ ಮಾಡುತ್ತಿದ್ದ ಸಹಾ ಅವರಿಗೆ ನೀಡಬೇಕಾದ ಪರಿಹಾರದ ಮೊತ್ತವನ್ನು ನಿರ್ಧರಿಸುವಂತೆ ಸುಪ್ರೀಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ, ಎನ್‌ಸಿ‌ಡಿಆರ್‌ಸಿ ಪೀಠದ ನ್ಯಾಯಮೂರ್ತಿ ಆರ್.ಸಿ.ಜೈನ್ ಈ ಮೊತ್ತವನ್ನು ನಿರ್ಧರಿಸಿದ್ದರು.

ಇದಕ್ಕೆ ಮೊದಲು ಮೇ 2009ರಲ್ಲಿ, ಹೈದರಾಬಾದಿನ ನಿಜಾಮ್ ವೈದ್ಯಕೀಯ ವಿಜ್ಞಾನ ಕಾಲೇಜಿನ ನಿರ್ಲಕ್ಷ್ಯಕ್ಕಾಗಿ ರೋಗಿಗೆ 1 ಕೋಟಿ ರೂಪಾಯಿ ನೀಡುವಂತೆ ಆದೇಶಿಸಿದ್ದು ಇದುವರೆಗಿನ ಗರಿಷ್ಠ ಮೊತ್ತದ ಪರಿಹಾರವಾಗಿತ್ತು. ವೀಲ್ ಚೇರ್‌ನಲ್ಲಿದ್ದ ಇನ್ಫೋಸಿಸ್ ಎಂಜಿನಿಯರ್ ಪ್ರಶಾಂತ್ ಎಸ್.ಧನಾಕಾ ಅವರ ಚಿಕಿತ್ಸೆಯ ಸಂದರ್ಭ ನಿರ್ಲಕ್ಷ್ಯದಿಂದಾಗಿ ಅವರ ಬೆನ್ನುಹುರಿಗೆ ಹಾನಿಯಾಗಿತ್ತು. ಆದರೆ ಜೂನ್ ತಿಂಗಳಲ್ಲಿ ಅವರು ಕೊನೆಯುಸಿರೆಳೆದಿದ್ದರು.

ಸಹಾ ಅವರ ಪತ್ನಿಯ ಮರಣಕ್ಕೆ 1,72,87,500 ರೂಪಾಯಿ ಪರಿಹಾರ ಘೋಷಿಸಿರುವ ಗ್ರಾಹಕ ನ್ಯಾಯಾಲಯವು, ಇದೇ ವೇಳೆ, ಮೂವರು ವೈದ್ಯರು ಹಾಗೂ ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆಂಬ ಕಾರಣಕ್ಕೆ ಅಮೆರಿಕ ವೈದ್ಯ ಡಾ.ಸಹಾ ಅವರಿಗೂ ಪರಿಹಾರದ ಮೊತ್ತದ ಶೇ.10ರಷ್ಟು ದಂಡವನ್ನು ವಿಧಿಸಿದ್ದಾರೆ.

Share this Story:

Follow Webdunia kannada