ಭೂಮಿಯಷ್ಟೇ ಗಾತ್ರದ ಗೃಹವೊಂದು ಪತ್ತೆಯಾಗಿದ್ದು, ಆ ಗ್ರಹದಲ್ಲಿ ನೀರು, ಗಾಳಿ, ಬೆಳಕು ಎಲ್ಲವೂ ಇದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ. ಭೂಮಿಯಲ್ಲಿ ಜನಸಂಖ್ಯೆ ಪ್ರಮಾಣ ಹೆಚ್ಚುತ್ತಿದ್ದು, ಬೇರೆ ಗ್ರಹಗಳಲ್ಲಿ ಜೀವಿಗಳ ಕುರುಹನ್ನು ಪತ್ತೆಹಚ್ಚಲು ವಿಜ್ಞಾನಿಗಳು ಶೋಧ ನಡೆಸಿದ್ದು, ಈ ಗ್ರಹ ಪತ್ತೆಯಾಗಿರುವುದು ಭರವಸೆಯ ಬೆಳಕನ್ನು ಮೂಡಿಸಿದೆ. ಇದಕ್ಕೆ ಅರ್ಥ್ 2.0 ಎಂದು ವಿಜ್ಞಾನಿಗಳು ನಾಮಕರಣ ಮಾಡಿದ್ದಾರೆ. ಸೌರಮಂಡಲದಿಂದ ಹೊರವಾತಾವರಣದಲ್ಲಿ ಈ ಗ್ರಹವಿದ್ದು, ಕೆಪ್ಲರ್ ಟೆಲಿಸ್ಕೋಪ್ ಮೂಲಕ ಈ ಗ್ರಹವನ್ನು ಪತ್ತೆಹಚ್ಚಲಾಗಿದೆ. ಇಲ್ಲಿ ಸುಮಾರು ವರ್ಷಗಳ ಹಿಂದೆ ಅನ್ಯಜೀವಿಗಳಾದ ಏಲಿಯನ್ಸ್‌ಗಳು ವಾಸ ಮಾಡಿದ್ದವೆಂದು ಹೇಳಲಾಗುತ್ತಿದೆ.
ಅಲ್ಲಿ ದ್ರವರೂಪದ ವಸ್ತುಗಳಿರುವ ಬಗ್ಗೆ ಸುಳಿವು ಸಿಕ್ಕಿದ್ದು ನೀರೇ ಇರಬಹುದು ಎಂದು ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ. ಕೆಪ್ಲರ್-186ಎಫ್ ಎಂದು ಕೂಡ ಕರೆಯಲಾಗುವ ಈ ಗ್ರಹ ಭೂಮಿಯ ರೀತಿ ತನ್ನದೇ ವಾತಾವರಣ ಮತ್ತು ದ್ರವ ಮತ್ತು ಜೀವಜಂತುಗಳು ಅಸ್ತಿತ್ವದಲ್ಲಿರುವ ಗಟ್ಟಿ ಮೇಲ್ಮೈಯನ್ನು ಹೊಂದಿರಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.