Select Your Language

Notifications

webdunia
webdunia
webdunia
webdunia

ಬ್ರಿಟನ್‌ನ ಅತೀ ಕಿರಿಯ ತಂದೆ-ತಾಯಿ: ಬಾಲಕಿಗೆ 12, ಬಾಲಕನಿಗೆ 13 ವರ್ಷ

ಬ್ರಿಟನ್‌ನ ಅತೀ ಕಿರಿಯ ತಂದೆ-ತಾಯಿ: ಬಾಲಕಿಗೆ 12, ಬಾಲಕನಿಗೆ 13 ವರ್ಷ
, ಬುಧವಾರ, 16 ಏಪ್ರಿಲ್ 2014 (20:10 IST)
PR
PR
ಲಂಡನ್: ಈ ಬಾಲಕಿಗೆ ಕೇವಲ 12 ವರ್ಷ ವಯಸ್ಸು. ಅವಳ ಸ್ನೇಹಿತನಿಗೆ ಬರೀ 13 ವರ್ಷಗಳು. ಇಬ್ಬರದೂ ಇನ್ನೂ ಆಟವಾಡಿಕೊಂಡಿರಬೇಕಿದ್ದ ಎಳೆಯ ಪ್ರಾಯ. ಆದರೆ ಆಟವಾಡುವ ವಯಸ್ಸಿನಲ್ಲಿ ಈ ಎಳೆಯ ಪ್ರೇಮಿಗಳು ಮಗುವೊಂದರ ಜನನಕ್ಕೆ ಕಾರಣವಾಗಿರುವ ಆಘಾತಕಾರಿ ಸಂಗತಿ ವರದಿಯಾಗಿದೆ. .ಬಾಲಕಿ ಬಾಲಕನನ್ನು ಮೊದಲ ಬಾರಿಗೆ ಸಂಧಿಸಿದಾಗ ಕೇವಲ 10 ವರ್ಷಗಳಾಗಿತ್ತು. ಬಾಲಕಿ ಗರ್ಭಿಣಿಯಾದಾಗ ಇನ್ನೂ ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದಳು. ವಾರಾಂತ್ಯದಲ್ಲಿ ಅವರು ತಮ್ಮ ಪುತ್ರಿಯ ಜನ್ಮದಿನ ಆಚರಿಸಿ ಜೀವಮಾನ ಪರ್ಯಂತ ಕುಟುಂಬವಾಗಿ ಬಾಳುವುದಾಗಿ ಶಪಥ ತೊಟ್ಟರು.

ಮಗುವಿನ ತೂಕ 7 ಪೌಂಡ್‌ಗಳಾಗಿವೆ. ಮಗುವಿಗೆ ಜನ್ಮನೀಡಿದ ತಾಯಿ ಬ್ರಿಟನ್ ಮುಂಚಿನ ತಾಯಿಗಿಂತ ಐದು ತಿಂಗಳು ಕಿರಿಯಳಾಗಿದ್ದಳು. ಈಗ ಬಾಲಕಿಯ ತಾಯಿ ಕೂಡ 27ನೇ ವಯಸ್ಸಿನಲ್ಲಿ ಬ್ರಿಟನ್‌ನ ಅತೀ ಕಿರಿಯ ಅಜ್ಜಿ ಆಗಿದ್ದಾಳೆ.

Share this Story:

Follow Webdunia kannada