Webdunia - Bharat's app for daily news and videos

Install App

$ 1.25 ಮಿಲಿಯನ್‌ ಹಣವನ್ನು ಗೆದ್ದ ಲಾಟರಿ ಟಿಕೆಟ್‌ನ್ನು ಕಸದ ಬುಟ್ಟಿಗೆ ಎಸೆದ ಭೂಪ

Webdunia
ಸೋಮವಾರ, 14 ಏಪ್ರಿಲ್ 2014 (16:03 IST)
ಅಮೇರಿಕಾದಲ್ಲೊಬ್ಬ ತಾನು ಖರೀದಿಸಿದ್ದ ಲಾಟರಿ ಟಿಕೇಟನ್ನು ಕಸದ ಬುಟ್ಟಿಯಲ್ಲಿ ಎಸೆಯುವುದರ ಮೂಲಕ 1.25 ಮಿಲಿಯನ್ ಡಾಲರ್ ಹಣದ ಒಡೆಯನಾಗುವ ಅವಕಾಶವನ್ನು ಕಳೆದುಕೊಂಡಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಪರದಾಡುತ್ತಿದ್ದಾನೆ.
PTI

ಆತ ಒಂದು ವರ್ಷದ ಹಿಂದೆ ನ್ಯೂಯಾರ್ಕ್‌ನ ದಕ್ಷಿಣ ಕ್ವೀನ್ ಸ್ಟ್ರೀಟ್‌ಲ್ಲಿ 25 ನಂ ಉಳ್ಳ 25 ಟಿಕೆಟ್ ಖರೀದಿಸಿದ್ದ, ಆದರೆ ಆತ ಟಿಕೇಟನ್ನು ಎಸೆದಿದ್ದರಿಂದ ಬಹುಮಾನದ ಮೊತ್ತವನ್ನು ಪಡೆಯಲು ವಿಫಲನಾಗಿದ್ದಾನೆ ಎಂದು ವರದಿಯಾಗಿದೆ.

" ಆತ ತುಂಬ ಅಸಮಾಧಾನಗೊಂಡಿದ್ದಾನೆ" ಎಂದು ಆತ ಟಿಕೇಟ್ ಖರೀದಿಸಿದ್ದ ಅಂಗಡಿಯಲ್ಲಿ ಕೆಲಸ ಮಾಡುವ ವೆಂಡಿ ಹಿಂಟನ್ ನ್ಯೂಯಾರ್ಕ್ ಡೈಲಿಗೆ ಹೇಳಿದ್ದಾಳೆ.

" ನನ್ನ ಅಂಗಡಿಯಲ್ಲಿ ಯಾವಾಗಲೂ ಟಿಕೇಟ್ ಖರೀದಿಸುತ್ತಿದ್ದ ಗ್ರಾಹಕನಿಗೆ ತಾನು ಕಳೆದ ವರ್ಷ ಮಾರ್ಚಲ್ಲಿ 25 ಟಿಕೆಟ್ ಮಾರಾಟ ಮಾಡಿದ್ದೆ.ಆತ ಪ್ರತಿದಿನ ಒಂದೇ ನಂ ನ ಟಿಕೆಟ್‌ಗಳನ್ನು ಖರೀದಿಸುತ್ತಿದ್ದ. ಕೆಲವು ವೇಳೆ 20. ಒಮ್ಮೊಮ್ಮೆ 25. ಹೀಗೆ ದಿನಕ್ಕೆ ಆತ ಸುಮಾರು 100 ಯುಎಸ್‌ಡಿ ಮೊತ್ತವನ್ನು ಟಿಕೇಟಿಗೆ ಮೀಸಲಾಗಿಡುತ್ತಿದ್ದ".

" ಅಂದು ಟಿಕೆಟ್ ಡ್ರಾ ಆದ ಮೇಲೆ ಆತ ಸಂಖ್ಯೆಗಳನ್ನು ಪರಿಶೀಲಿಸಿದ್ದ, ಆದರೆ ಅವುಗಳನ್ನು ಸರಿಯಾಗಿ ಗಮನಿಸಲಿರಲಿಲ್ಲ ಎನಿಸುತ್ತದೆ. ಹಾಗಾಗಿ ಆತ ಅದನ್ನು ಕಸದ ಬುಟ್ಟಿಗೆ ಎಸೆದ" ಎಂದು ಆಕೆ ಹೇಳಿದ್ದಾಳೆ.

ಯುಎಸ್ಡಿ 50,000 ಪ್ರತಿ ಮೌಲ್ಯವುಳ್ಳ 25 ಟಿಕೇಟುಗಳ ಒಟ್ಟು ಬಹುಮಾನಿತ ಮೊತ್ತ ಡಾಲರ್ 1.25 ದಶಲಕ್ಷ.

" ಆತನೊಬ್ಬ ಹುಚ್ಚ, ದಿನಕ್ಕೆ ಯುಎಸ್ಡಿ 400 ಹಣದ ಆಟವನ್ನು ಆಡುತ್ತಿದ್ದ ಆತ ಮಿಲಿಯನ್ ಡಾಲರ್‌ನ್ನು ಎಸೆದಿದ್ದಾನೆ" ಹಿಂಟನ್ ಎಂದು ಪ್ರತಿಕ್ರಿಯಿಸಿದ್ದಾಳೆ.

ಆತ ಟಿಕೇಟ್‌ನ್ನು ಎಸೆದಿದ್ದರಿಂದ 1.25 ಮಿಲಿಯನ್ ಡಾಲರ್ ಮೊತ್ತ ರಾಜ್ಯದ ಲಾಟರಿ ಫಂಡ್‌ಗೆ ಸೇರ್ಪಡೆಯಾಗಿದೆ.

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments