Webdunia - Bharat's app for daily news and videos

Install App

ಹಿಲರಿ ಭಾಷಣ ಮಾಡುವಾಗ ಅವರತ್ತ ಬೂಟು ಎಸೆದ ಮಹಿಳೆ

Webdunia
ಶುಕ್ರವಾರ, 11 ಏಪ್ರಿಲ್ 2014 (14:12 IST)
PR
PR
ಲಾಸ್ ವೆಗಾಸ್: ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲೇರಿ ಕ್ಲಿಂಟನ್ ಗುರುವಾರ ಲಾಸ್ ವೆಗಾಸ್ ಹೊಟೆಲ್‌ನಲ್ಲಿ ಭಾಷಣ ಮಾಡುತ್ತಿದ್ದಾಗ ಹಿಲೇರಿ ಕ್ಲಿಂಟನ್ ಕಡೆಗೆ ಮಹಿಳೆಯೊಬ್ಬರು ಬೂಟನ್ನು ಎಸೆದ ಘಟನೆ ನಡೆದಿದೆ. ಆದರೆ ಕ್ಲಿಂಟನ್ ಆ ಬೂಟಿನ ಎಸೆತದಿಂದ ತಪ್ಪಿಸಿಕೊಂಡು, ತನ್ನ ಭಾಷಣವನ್ನು ಮುಂದುವರಿಸಿದರು ಎಂದು ಅಮೆರಿಕದ ಗುಪ್ತ ಸೇವೆಯ ವಕ್ತಾರ ತಿಳಿಸಿದರು.ಕ್ಲಿಂಟನ್ ಭಾಷಣಕ್ಕೆ ಪ್ರತಿಭಟನೆಕಾರ್ತಿ ಟಿಕೆಟ್ ಪಡೆದ ಅತಿಥಿಯಲ್ಲವೆಂದು ಗುಪ್ತ ಸೇವೆಯ ವಕ್ತಾರ ಜಾರ್ಜ್ ಒಗಿಲಿವಿ ತಿಳಿಸಿದ್ದು, ಘಟನೆಗೆ ಮುನ್ನ, ಗುಪ್ತ ಸೇವೆ ಏಜಂಟರು ಮತ್ತು ಹೊಟೆಲ್ ಭದ್ರತಾ ಕಾವಲುಗಾರರು ಅವಳನ್ನು ಪತ್ತೆಹಚ್ಚಿದ್ದರು.

ಏಜಂಟರು ಮತ್ತು ಹೊಟೆಲ್ ಸೆಕ್ಯೂರಿಟಿ ಅವಳನ್ನು ಸಮೀಪಿಸುತ್ತಿದ್ದಂತೆ ಸೀಕ್ರೇಟ್ ಸರ್ವೀಸ್ ಮತ್ತು ಹೊಟೆಲ್ ಸೆಕ್ಯೂರಿಟಿ ಅವಳನ್ನು ವಶಕ್ಕೆ ತೆಗೆದುಕೊಂಡಿದ್ದರು.ಕೆಟಿಎನ್‌ವಿ-ಟಿವಿ ಪ್ರಸಾರ ಮಾಡಿದ ವಿಡಿಯೋಚಿತ್ರದಲ್ಲಿ 66 ವರ್ಷ ವಯಸ್ಸಿನ ಕ್ಲಿಂಟನ್ ವೇದಿಕೆಯಲ್ಲಿ ನಿಂತಿದ್ದಾಗ ಅವರ ಕಡೆ ಎಸೆದ ವಸ್ತುವಿನಿಂದ ತಪ್ಪಿಸಿಕೊಂಡಿದ್ದು ಕಂಡುಬಂತು.ಹಿಲೇರಿ ಕ್ಲಿಂಟನ್ ಈ ಘಟನೆ ಬಗ್ಗೆ ಜೋಕ್ ಮಾಡಿ ಲೋಹ ಪುನರ್‌ಬಳಕೆ ಸಮ್ಮೇಳನಕ್ಕೆ ಭಾಗವಹಿಸಿದ ಸುಮಾರು 1000 ಜನರಿಗೆ ತಮ್ಮ ಭಾಷಣವನ್ನು ಮುಂದುವರಿಸಿದರು.

ಯಾರಾದರೂ ನನ್ನ ಕಡೆ ಏನಾದರೂ ಎಸೆದರಾ ಎಂದು ಕ್ಲಿಂಟನ್ ಕೇಳಿದರು. ನಂತರ ನನಗೆ ಗಟ್ಟಿ ತ್ಯಾಜ್ಯ ವ್ಯವಸ್ಥಾಪನೆ ಇಷ್ಟೊಂದು ವಿವಾದಾತ್ಮಕವಾಗಿರುತ್ತದೆ ಎಂದು ನನಗೆ ಗೊತ್ತಿರಲಿಲ್ಲ ಎಂದು ಕ್ಲಿಂಟನ್ ಹೇಳಿದರು.

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments