Select Your Language

Notifications

webdunia
webdunia
webdunia
webdunia

ಮೆಕ್ಸಿಕೊದಲ್ಲಿ ಪ್ರಬಲ ಭೂಕಂಪ; ಒಬಾಮಾ ಪುತ್ರಿ ಸುರಕ್ಷಿತ

ಮೆಕ್ಸಿಕೊದಲ್ಲಿ ಪ್ರಬಲ ಭೂಕಂಪ; ಒಬಾಮಾ ಪುತ್ರಿ ಸುರಕ್ಷಿತ
ಮೆಕ್ಸಿಕೊ ನಗರ , ಬುಧವಾರ, 21 ಮಾರ್ಚ್ 2012 (17:30 IST)
PR
ಲ್ಯಾಟಿನ್ ಅಮೆರಿಕದ ಬಹು ದೊಡ್ಡ ದೇಶ ಮೆಕ್ಸಿಕೊದಲ್ಲಿ 7.4 ರಷ್ಟು ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಸದ್ಯ ಇಲ್ಲಿದ್ದ ಅಮೆರಿಕ ಅಧ್ಯಕ್ಷ ಒಬಾಮ ಪುತ್ರಿ ಮಾಲಿಯಾ ಒಬಾಮ ಅವರು ಸುರಕ್ಷಿತವಾಗಿದ್ದಾರೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.

ಭೂಕಂಪದ ನಂತರವೂ ಹಲವು ಬಾರಿ ಪಶ್ಚಾತ್ ಕಂಪನಗಳು ಮೆಕ್ಸಿಕೊ ನಗರವನ್ನು ನಡುಗಿಸಿವೆ. ಶಾಲಾ ಕಟ್ಟಡಗಳೂ ಸೇರಿದಂತೆ ಹಲವು ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದರೆ, ಸೇತುವೆಗಳು ಕುಸಿದು ಬಿದ್ದಿವೆ. ಸಾವಿರಾರು ಮನೆಗಳಿಗೆ ಹಾನಿಯಾಗಿದೆ. ಟೆಲಿಫೋನ್ ಸೇರಿದಂತೆ ಸಂಪರ್ಕ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.

ಆಸ್ಪತ್ರೆಗಳಲ್ಲೂ ಬಿರುಕು ಕಾಣಿಸಕೊಂಡಿದ್ದು, ಹೆರಿಗೆಗಾಗಿ ಬಂದಿರುವ ಹೆಂಗಸರನ್ನೂ ಸೇರಿದಂತೆ ಎಲ್ಲಾ ರೋಗಿಗಳನ್ನು ಸಮೀಪದ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿದೆ. 1985ರ ನಂತರದ ಬಹುದೊಡ್ಡ ಭೂಕಂಪ ಇದೆಂದು ತಜ್ಞರು ವಿಶ್ಲೇಷಿಸಿದ್ದಾರೆ.

Share this Story:

Follow Webdunia kannada