Webdunia - Bharat's app for daily news and videos

Install App

ಅನೈತಿಕ ಸಂಬಂಧ - ಜೈಲಿಗೋದ ಪ್ರಿಯತಮೆ, ಪ್ರಿಯಕರ

Webdunia
ಮಂಗಳವಾರ, 13 ಮಾರ್ಚ್ 2012 (09:43 IST)
ದುಬೈನಲ್ಲಿ ಮದುವೆಯಾಗದೇ ಲೈಂಗಿಕ ಸಂಪರ್ಕವನ್ನು ಹೊಂದಿದ್ದರು ಎನ್ನುವ ಆರೋಪದ ಮೇಲೆ ಬಂಧಿತನಾಗಿದ್ದ ಪಾಕಿಸ್ತಾನ ಮೂಲದ 23 ವರ್ಷದ ಯುವಕ ಮತ್ತು ಫಿಲಿಫೈನ್ಸ್‌ ಮೂಲದ 27 ವರ್ಷದ ಯುವತಿಗೆ ಎರಡು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಇವರಿಬ್ಬರೂ ಸಾಮಾಜಿಕ ಜಾಲತಾಣವಾಗಿರುವ ಫೇಸ್‌ಬುಕ್‌ನ ಮೂಲಕ ಪರಿಚಿತರಾಗಿದ್ದರು ನಂತರ ಪ್ರೇಮಿಗಳಾಗಿ ಮಾರ್ಪಟ್ಟಿದ್ದರು. ಇವರೀರ್ವರ ನಡುವೆ ಲೈಂಗಿಕ ಸಂಪರ್ಕವೇರ್ಪಟ್ಟಿದ್ದು ಬೆಳಕಿಗೆ ಬರುತ್ತಿದ್ದಂತೆ ಇರ್ವರನ್ನು ಎರಡು ತಿಂಗಳ ಸೆರೆವಾಸಕ್ಕೆ ಗುರಿಮಾಡಲಾಗಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

ಕಳೆದೆರಡು ತಿಂಗಳಿನಿಂದ ನಾವಿಬ್ಬರೂ ಪರಿಚಿತರಾಗಿದ್ದೆವು, ಆಕೆ ತನ್ನ ದೂರವಾಣಿ ಸಂಖ್ಯೆಯನ್ನು ಒದಗಿಸಿದ್ದಳು, ಆಕೆ ವಾಸವಿರುವ ಗೃಹದ ಪ್ರಾಯೋಜಕಳು ತಮ್ಮಿಬ್ಬರ ಮಿಲನಕ್ಕೆ ಸಹಾಯ ಮಾಡಿದ್ದಳು ಎಂದು ಬಂಧಿತ ಆಪರಾಧಿ ತಿಳಿಸಿರುವ.

ಈ ಪ್ರೇಮಿಗಳಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಅನು ಮಾಡಿಕೊಟ್ಟ ಫಿಲಿಫೈನ್ ಮೂಲದ ಮಹಿಳೆಗೆ 2,000 ದಿರಹಮ್ ದಂಡವನ್ನು ವಿಧಿಸಲಾಗಿದೆ.

English summary

A Pakistani man and a woman from the Philippines have been sentenced to two months in prison in Dubai for having sex out of wedlock at the home of the woman's sponsor.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ