Select Your Language

Notifications

webdunia
webdunia
webdunia
webdunia

ಪಾಕಿಸ್ತಾನ್: ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ 15 ಜನ ಸ್ಫೋಟಕ್ಕೆ ಬಲಿ

ಪಾಕಿಸ್ತಾನ್: ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ 15 ಜನ ಸ್ಫೋಟಕ್ಕೆ ಬಲಿ
ಪೇಶಾವರ್: , ಸೋಮವಾರ, 12 ಮಾರ್ಚ್ 2012 (15:46 IST)
ಪಾಕಿಸ್ತಾನದ ಈಶಾನ್ಯ ಭಾಗದಲ್ಲಿ ತಾಲಿಬಾನ್ ವಿರೋಧಿ ರಾಜಕಾರಣಿಯೊಬ್ಬ ಭಾಗವಹಿಸಿದ್ದ ಅಂತ್ಯಕ್ರಿಯೆ ಕಾರ್ಯದಲ್ಲಿ ಅತ್ಮಹತ್ಯಾ ಬಾಂಬರ್ ಒಬ್ಬನ ದಾಳಿಗೆ ತುತ್ತಾಗಿ 15 ಜನ ಮೃತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ಪೇಶಾವರ್ ನಗರದ ಹೊರಭಾಗದಲ್ಲಿ ಆಯೋಜಿತವಾಗಿದ್ದ ಅಂತ್ಯಕ್ರಿಯೆಯಲ್ಲಿ ರಾಜಕಾರಣಿ ಖುಷ್ ದಿಲ್ ಖಾನ್ ಭಾಗವಹಿಸಿದ್ದರು. ಆದರೆ ಬಾಂಬ್ ವಿಸ್ಫೋಟದಿಂದ ಬಚಾವಾಗಿರುವರೆಂದು ಪೊಲೀಸ್ ಮೂಲಗಳು ತಿಳಿಸಿವೆ.

ಪೇಶಾವರ್ ನಗರದ ಸುತ್ತಮುತ್ತ ಇಸ್ಲಾಮಿ ಉಗ್ರರ ಪಾಕಿಸ್ತಾನಿ ಭದ್ರತಾ ಪಡೆಗಳೊಂದಿದೆ ಸದಾ ಹೋರಾಟ ಮಾಡುತ್ತಲೇ ತಮ್ಮ ಉಗ್ರ ಪ್ರತಾಪ ಮೆರೆಯುತ್ತಿರುವರು. ಪೇಶಾವರ್ ನಗರವು ಅಫ್ಘಾನಿಸ್ತಾನ್‌ನ ಗಡಿಭಾಗದಲ್ಲಿದೆ. ಕಳೆದ ಕೆಲವು ವರ್ಷಗಳಲ್ಲಿ ಸಾವಿರಾರು ಅಮಾಯಕ ಜನರು ತಾಲಿಬಾನ ಉಗ್ರರಿಗೆ ಬಲಿಯಾಗಿದ್ದಾರೆ.

ಪೇಶಾವರ್ ಸಮೀಪದ ಬಡಾಬೆರ್ ಗ್ರಾಮದಲ್ಲಿ, ಅಂತ್ಯಕ್ರಿಯೆ ನಡೆಯುತ್ತಿದ್ದ ಆವರಣದೊಳಕ್ಕೆ ಪ್ರವಶಿಸಿದ ಆತ್ಮಹತ್ಯಾ ಬಾಂಬರ್ ಈ ದಾಳಿಯನ್ನು ಮಾಡಿರುವ ಎಂದು ಪೊಲೀಸ್ ಅಧಿಕಾರಿ ಅಬಿದ್ ರೆಹಮಾನ್ ತಿಳಿಸಿದರು.

ಪೇಶಾವರದ ಡೆಪ್ಯೂಟಿ ಕಮಿಷನರ್ ಆಗಿರುವ ಸಿರಾಜ್ ಅಹ್ಮದ್ ಈ ಉಗ್ರನ ಕುಕೃತ್ಯದಿಂದಾಗಿ 15 ಜನ ಮಡಿದಿರುವರು ಮತ್ತು 37 ಜನಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದರು.

English summary

PESHAWAR: A suicide bomber attacked a funeral attended by an anti-Taliban politician in northwest Pakistan on Sunday , killing at least 15 mourners , officials said. The politician , Khush Dil Khan, escaped unhurt in the blast on the outskirts of Peshawar, the main city in the northwest.

Share this Story:

Follow Webdunia kannada