Select Your Language

Notifications

webdunia
webdunia
webdunia
webdunia

ಸುನಾಮಿಗೆ ಒಂದು ವರ್ಷ : ಜಪಾನ್‌ನೆಲ್ಲೆಡೆ ಮೌನಾಚರಣೆ

ಸುನಾಮಿಗೆ ಒಂದು ವರ್ಷ : ಜಪಾನ್‌ನೆಲ್ಲೆಡೆ ಮೌನಾಚರಣೆ
ಟೋಕಿಯೊ , ಭಾನುವಾರ, 11 ಮಾರ್ಚ್ 2012 (13:24 IST)
PTI
ಜಪಾನ್‌ನಲ್ಲಿ ಸಹಸ್ರಾರು ಜನರನ್ನು ಬಲಿ ತೆಗೆದುಕೊಂಡ ಪ್ರಳಯಕಾರಿ ಭೂಕಂಪ ಹಾಗೂ ಸುನಾಮಿ ಸಂಭವಿಸಿ ಮಾರ್ಚ್ 11ಕ್ಕೆ ಒಂದು ವರ್ಷವಾಗಲಿದೆ.

ಈ ಹಿನ್ನೆಲೆಯಲ್ಲಿ, ರಾಜಧಾನಿ ಟೋಕಿಯೊ ಸೇರಿದಂತೆ ರಾಷ್ಟ್ರದ ಎಲ್ಲಾ ಭಾಗಗಳಲ್ಲಿ ಮ.2.46ಕ್ಕೆ (2011ರ ಮಾರ್ಚ್ 11ರಂದು ಭೂಕಂಪ ಸಂಭವಿಸಿದ ಸಮಯ) ಮೌನಾಚರಣೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಇದೇ ಸಂದರ್ಭದಲ್ಲಿ, ಭವಿಷ್ಯದಲ್ಲಿ ಎದುರಾಗಬಹುದಾದ ಯಾವುದೇ ರೀತಿಯ ಪ್ರಕೃತಿ ವಿಕೋಪವನ್ನು ಎದುರಿಸಲು ಸರ್ಕಾರ ಮಾಡಿಕೊಂಡಿರುವ ಸಿದ್ಧತೆಯನ್ನು ಖಾತ್ರಿಗೊಳಿಸಿಕೊಳ್ಳುವ ಸಲುವಾಗಿ ಹಲವೆಡೆ ಅಣಕು ಕಾರ್ಯಾಚರಣೆಗಳನ್ನು ಏರ್ಪಡಿಸಲಾಗಿದೆ.

ಸರ್ಕಾರವು ಮಧ್ಯ ಟೋಕಿಯೊದ ರಾಷ್ಟ್ರೀಯ ರಂಗಮಂದಿರದಲ್ಲಿ ಆಯೋಜಿಸಿರುವ ಸಂಸ್ಮರಣಾ ಕಾರ್ಯಕ್ರಮದಲ್ಲಿ, ಹೃದಯ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಚಕ್ರವರ್ತಿ ಅಖಿತೊ, ಪ್ರಧಾನಿ ಯೊಶಿಹಿಕೊ ನೋಡಾ ಹಾಗೂ ಮೃತರಾದವರ ಬಂಧುಗಳು ಪಾಲ್ಗೊಳ್ಳಲಿದ್ದಾರೆ.

ಶನಿವಾರವೂ ಜಪಾನ್‌ನಲ್ಲಿ ಹಲವಾರು ಕಾರ್ಯಕ್ರಮಗಳು ನಡೆದಿದ್ದು, ಮೃತರಾದವರ ಹೆಸರಲ್ಲಿ 16 ಸಾವಿರ ಮೇಣದಬತ್ತಿಗಳನ್ನು ಒಸಾಕಾ ಪ್ರಾರ್ಥನಾ ಮಂದಿರದಲ್ಲಿ ಹಚ್ಚಿ ಮೃತರ ಆತ್ಮಕ್ಕೆ ಶಾಂತಿಕೋರಲಾಗಿದೆ.

ಭೂಕಂಪ ಹಾಗೂ ನಂತರದ ಸುನಾಮಿಯಿಂದಾಗಿ ಸುಮಾರು 16,000 ಜನ ಸಾವಿಗೀಡಾಗುವ ಜತೆಗೆ 3.3 ಲಕ್ಷ ಮನೆಗಳು, ಇನ್ನಿತರ ಕಟ್ಟಡಗಳು ನಾಶವಾಗಿದ್ದವು. ಪುನರ್‌ನಿರ್ಮಾಣ ಕಾರ್ಯ ಮಂದಗತಿಯಲ್ಲಿ ನಡೆಯುತ್ತಿದ್ದು ಈಗಲೂ ಫುಕುಷಿಮಾ ಸ್ಥಾವರದ ಸುತ್ತಮುತ್ತಲ 1.60 ಲಕ್ಷ ಸಂತ್ರಸ್ತರಿಗೆ ವಿಕಿರಣದ ಭಯದಿಂದಾಗಿ ಮನೆಗಳಿಗೆ ವಾಪಸಾಗಲು ಸಾಧ್ಯವಾಗಿಲ್ಲ.

Share this Story:

Follow Webdunia kannada