Select Your Language

Notifications

webdunia
webdunia
webdunia
webdunia

ಜೈಲಲ್ಲಿ ಆಕಸ್ಮಿಕ ಬೆಂಕಿ; 300ಕ್ಕೂ ಹೆಚ್ಚು ಕೈದಿಗಳ ಸಾವು

ಜೈಲಲ್ಲಿ ಆಕಸ್ಮಿಕ ಬೆಂಕಿ; 300ಕ್ಕೂ ಹೆಚ್ಚು ಕೈದಿಗಳ ಸಾವು
ತೆಗುಸಿಗಲ್ಪಾ (ಹೊಂಡುರಾಸ್) , ಗುರುವಾರ, 16 ಫೆಬ್ರವರಿ 2012 (01:40 IST)
ಜೈಲಿನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿಯಿಂದ ಸೆರೆವಾಸ ಅನುಭವಿಸುತ್ತಿದ್ದ ಖೈದಿಗಳಲ್ಲಿ ಸುಮಾರು 300ಕ್ಕಿಂತಲೂ ಹೆಚ್ಚು ಮಂದಿ ಸುಟ್ಟು ಕರಕಲಾಗಿದ್ದರೆ, 475 ಮಂದಿ ಜೈಲಿನಿಂದ ಪರಾರಿಯಾಗಿರುವ ಘಟನೆ ಹೊಂಡುರಾಸ್ ರಾಷ್ಟ್ರದ ಕೊಮಾಯುಗುವಾ ನಗರದ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.

ಘಟನೆಯಲ್ಲಿ 21 ಮಂದಿ ಖೈದಿಗಳು ತೀವ್ರ ಗಾಯದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೈಲಿನಲ್ಲಿ ಒಮ್ಮೆಲೆ ಕಂಡುಬಂದ ಬೆಂಕಿ ಅವಘಡಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣವೇ ಅಥವಾ ಖೈದಿಗಳು ತಪ್ಪಿಸುವ ನೆಪದಲ್ಲಿ ಈ ರೀತಿಯ ಯೋಜನೆ ಹಾಕಿದ್ದರೆ ಎಂಬ ಕುರಿತು ಇನ್ನೂ ವಿವರಗಳು ಲಭ್ಯವಾಗಿಲ್ಲ ಎಂದು ಕಾರಾಗೃಹ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada