Select Your Language

Notifications

webdunia
webdunia
webdunia
webdunia

ಹುಸಿ ಬಾಂಬ್‌ ಕರೆ: ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಯುವತಿ

ಹುಸಿ ಬಾಂಬ್‌ ಕರೆ: ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಯುವತಿ
ಲಂಡನ್‌ , ಮಂಗಳವಾರ, 3 ಜನವರಿ 2012 (11:11 IST)
ಪೊಲೀಸರಿಗೆ ಸುಮಾರು 800 ಹುಸಿ ಬಾಂಬ್‌ ಕರೆ ಮಾಡಿದ ಬ್ರಿಟನ್‌ನ ಹದಿಹರೆಯದ ಯುವತಿಯೊಬ್ಬಳು ಈಗ ಕಂಬಿ ಎಣಿಸುತ್ತಿದ್ದಾಳೆ. ಪೊಲೀಸರ ತುರ್ತು ದೂರವಾಣಿಗೆ 999 ಗೆ ಮನಸೋ ಇಚ್ಛೆ ಫೋನ್‌ ಮಾಡಿದ್ದ ಯುವತಿ ಈಗ ತಕ್ಕ ಪ್ರತಿಫಲ ಅನುಭವಿಸುತ್ತಿದ್ದಾಳೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಕೆರ್ರಿ ಅನ್‌ ಮೋಟೆ ರಜಾ ದಿನಗಳಲ್ಲಿ 756 ಬಾರಿ ಹುಸಿ ಬಾಂಬ್‌ ಕರೆ ಮಾಡಿದ್ದಳು. ಡಿಸೆಂಬರ್‌ 11ರಿಂದ 13ರ ವರೆಗೆ 44 ಬಾರಿ ಪೊಲೀಸರಿಗೆ ಕರೆ ಮಾಡಿದ್ದಳು ಎಂದು ದಿ ಸನ್‌ ಪತ್ರಿಕೆ ವರದಿ ಮಾಡಿದೆ.

ಹುಸಿ ಬಾಂಬ್‌ ಕರೆ ಆಪಾದನೆಯ ಮೇರೆಗೆ ಬಂಧಿತಳಾಗಿರುವ ಯುವತಿಯ ವಿಚಾರಣೆಯನ್ನು ಲಂಡನ್‌ನಿಂದ 106 ಕಿಲೋ ಮೀಟರ್‌ ದೂರ ಇರುವ ಹಂಟಿಂಗ್‌ಡನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ನಡೆಸಲಾಗುತ್ತಿದೆ.

Share this Story:

Follow Webdunia kannada