Select Your Language

Notifications

webdunia
webdunia
webdunia
webdunia

ಬಿಡುಗಡೆ ಮಾಡಿ; 2 ಬಿಲಿಯನ್ ಆಮಿಷವೊಡ್ಡಿದ್ದ ಗಡಾಫಿ ಪುತ್ರ!

ಬಿಡುಗಡೆ ಮಾಡಿ; 2 ಬಿಲಿಯನ್ ಆಮಿಷವೊಡ್ಡಿದ್ದ ಗಡಾಫಿ ಪುತ್ರ!
ಕೈರೋ , ಸೋಮವಾರ, 21 ನವೆಂಬರ್ 2011 (09:38 IST)
ಲಿಬಿಯಾದ ಸರ್ವಾಧಿಕಾರಿ ಮುಅಮ್ಮರ್‌ ಗಡಾಫಿ ಅವರ ಪುತ್ರ ಸೈಫ್‌ ಅಲ್‌ ಇಸ್ಲಾಂ ತನ್ನನ್ನು ಬಿಡುಗಡೆ ಮಾಡಲು ಬಂಡುಕೋರರಿಗೆ 2 ಶತಕೋಟಿ ಡಾಲರ್ ಆಮಿಷವೊಡ್ಡಿದ್ದ ಎಂದು ಅಲ್‌ ಜಿಂಟಾನ್‌ ಟಿವಿ ಚಾನಲ್‌ ವರದಿ ಮಾಡಿದೆ. ಸೈಫ್‌ ಅಲ್‌ ಇಸ್ಲಾಂ ನನ್ನು ಲಿಬಿಯಾದಲ್ಲಿ ಶನಿವಾರ ಬಂಧಿಸಲಾಗಿತ್ತು.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ದಕ್ಷಿಣ ಲಿಬಿಯಾದಲ್ಲಿ ತನ್ನನ್ನು ಬಂಧಿಸಿದ ನಂತರ ಸೈಫ್‌ ಅಲ್‌ ಇಸ್ಲಾಂ ನೀಡಿದ್ದ ಆಮಿಷವನ್ನು ನಿರಾಕರಿಸಿದ ಬಂಡುಕೋರರು ಈ ಹಣವನ್ನು ಸ್ವೀಕರಿಸಿದರೆ ಲಿಬಿಯಾ ಕ್ರಾಂತಿಗೆ ಮಾಡಿದ ಅಪಮಾನವಾಗುತ್ತದೆ ಎಂದು ಭಾವಿಸಿದ್ದರು ಎಂದು ಟಿವಿ ಚಾನಲ್‌ ವರದಿ ಮಾಡಿದೆ.

ಲಿಬಿಯಾದಲ್ಲಿ ಬಂಡುಕೋರ ಪಡೆಗಳು ನ್ಯಾಟೋ ಸಹಕಾರದಿಂದ ಕಳೆದ ಅಕ್ಟೋಬರ್‌ನಲ್ಲಿ ಸಿರ್ಟೆಯಲ್ಲಿ ಮುಅಮ್ಮರ್‌ ಗಡಾಫಿಯನ್ನು ಹತ್ಯೆ ಮಾಡುವ ಮೂಲಕ ಗಡಾಫಿಯ 42 ವರ್ಷಗಳ ನಿರಂಕುಶ ಆಡಳಿತಕ್ಕೆ ತೆರೆ ಬಿದ್ದಿತ್ತು.

Share this Story:

Follow Webdunia kannada