ಬೇಸಿಗೆ ಸಮಯದಲ್ಲಿ ಈ ಐದು ಪದಾರ್ಥಗಳನ್ನು ಸೇವಿಸಬೇಡಿ
, ಶನಿವಾರ, 19 ಏಪ್ರಿಲ್ 2014 (17:52 IST)
ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚು ಬಿಸಿಲು ಇದ್ದ ಕಾರಣ ವಾತಾವರಣದ ತಾಪಮಾನ ಹೆಚ್ಚಿಗೆ ಇರುತ್ತದೆ. ಇದರಿಂದ ಶರೀರದಲ್ಲಿ ಕೂಡ ತಾಪಮಾನ ಹೆಚ್ಚುತ್ತದೆ. ಇದರಿಂದ ಆಯಾಸವಾಗುತ್ತದೆ ಮತ್ತು ಸೆಕೆಯಿಂದಾಗಿ ಏಕಾಗ್ರತೆಗೆ ತೊಂದರೆ ಆಗುತ್ತದೆ. ಬೇಸಿಗೆಯಲ್ಲಿ ನೀರು ಕುಡಿಯುವುದು ಎಷ್ಟು ಮುಖ್ಯವೋ , ಆಹಾರ ಸೇವಿಸಬೇಕಾದಾಗ ಕೂಡ ಗಮನಹರಿಸುವುದು ಅಷ್ಟೇ ಮುಖ್ಯ. ಬೇಸಿಗೆ ಸಮಯದಲ್ಲಿ ಕೆಲವು ಆಹಾರ ಸೇವನೆ ಮಾಡಿದರೆ ಶರೀರದ ಮೇಲೆ ದುಷ್ಪರಿಣಾಮ ಕೂಡ ಬಿರುತ್ತದೆ , ಹಾಗದರೆ ಬೇಸಿಗೆಯಲ್ಲಿ ಏನನ್ನು ತಿನ್ನಬಾರದು ಎಂದು ತಿಳಿಯಲು ಮುಂದೆ ಓದಿ.
1.
ಹೆಚ್ಚಿನ ಮಸಾಲಾ ಪದಾರ್ಥ ತಿನ್ನಬೇಡಿ : ಬೇಸಿಗೆ ಕಾಲದಲ್ಲಿ ಹೆಚ್ಚಿನ ಮಸಾಲಾ ಪದಾರ್ಥ ಇರುವ ಆಹಾರ ಸೇವನೆ ಮಾಡಬೇಡಿ. ಮಸಾಲಾ ಹೆಚ್ಚು ಸೇವಿಸುವುದರಿಂದ ಶರೀರದಲ್ಲಿ ತಾಪಮಾನ ಹೆಚ್ಚುವುದರ ಮೂಲಕ ಪಚನವಾಗದೆ ಹೊಟ್ಟೆ ನೋವು ಪ್ರಾರಂಭವಾಗುತ್ತದೆ.