Webdunia - Bharat's app for daily news and videos

Install App

ಪ್ರೇಯಸಿಯೊಂದಿಗೆ ಮಾತನಾಡಿದ ಈತನ ಫೋನ್‌ ಬಿಲ್ಲ್ ಎಷ್ಟಿದೆಯೆಂದು ಗೊತ್ತಾ ?

Webdunia
ಬುಧವಾರ, 16 ಏಪ್ರಿಲ್ 2014 (17:21 IST)
PR
ಪ್ರೀತಿಯಲ್ಲಿ ಬಿದ್ದವರಿಗೆ, ತನ್ನ ಪ್ರೇಯಸಿಯನ್ನು ಬಿಟ್ಟು ಬೇರೆ ಯಾರು ಕಾಣೋದಿಲ್ಲ ಎಂದು ಹೇಳಲಾಗುತ್ತದೆ. ಇಂತಹವರು ತಮಗರಿವಿಲ್ಲದೆ ಪ್ರೇಯಸಿಯ ಜೊತೆಗೆ ಗಂಟೆ ಗಟ್ಟಲೆ ಫೊನ್‌‌ನಲ್ಲಿ ಮಾತನಾಡುತ್ತಾರೆ. ಆದರೆ ಇದಕ್ಕು ಒಂದು ಮಿತಿ ಇರಬೇಕಲ್ಲ.

12 ರ ಹರೆಯದ ವ್ಯಕ್ತಿ ತನ್ನ ಪ್ರೆಯಸಿಯೊಂದಿಗೆ ಫೋನ್‌‌ನಲ್ಲಿ ಮಾತನಾಡಿ, ಒಂದೇ ತಿಂಗಳಲ್ಲಿ ತನ್ನ ತಂದೆಯ ಫೋನ್‌ನ ಬಿಲ್ಲು ಬರೋಬರಿ 1,50,000 ರೂಪಾಯಿ ಮಾಡಿದ್ದನಂತೆ. ಒಂದು ತಿಂಗಳಿನ ನಂತರ ಇಷ್ಟೋಂದು ಫೋನ್‌ ಬಿಲ್ಲು ಬಂದ ಕಾರಣ ಈಗ ಈತ ಫೇಸ್‌‌ಬುಕ್‌ ಮೂಲಕ ಚಾಟ್‌‌ಮಾಡಲು ಪ್ರಾರಂಭಿಸಿದ್ದಾನಂತೆ.

ತನ್ನ 13ರ ಹರೆಯದ ಪ್ರೇಮಿಯೊಂದಿಗೆ ಮಾತನಾಡಲು ಈತ ತನ್ನ ತಂದೆಯ ಸೆಲ್‌‌‌ಫೋನ್‌ ಬಳಸುತ್ತಿದ್ದನು.

ನಾನು ಮೊದಲ ಬಾರಿ ಇಷ್ಟೊಂದು ದರದ ಫೋನ್‌ಬಿಲ್‌‌ ಬಂದಿರುವದು ಮೊದಲ ಬಾರಿ ನೋಡಿದ್ದೆನೆ ಎಂದು ಈತನ ತಂದೆ ಡೆನಿಸ್ ತಿಳಿಸಿದ್ದಾರೆ. ಈ ಬಿಲ್‌‌ನಲ್ಲಿ ಯಾವಾಗ ಯಾರ ಜೊತೆ ಎಷ್ಟೆಷ್ಟು ಮಾತನಾಡಿದ್ದು ಎಂದು ಗೊತ್ತಾಗಿತ್ತು. ಒಂದೊಂದು ಕಾಲ್‌ ಎರಡೆರಡು ಗಂಟೆಯವರೆಗೆ ಮಾತನಾಡಿದ ಮಾಹಿತಿ ಬಿಲ್‌‌ ಮೂಲಕ ಹೊರ ಬಂದಿದೆ.

ಇತನ ಮಗ ತನ್ನ ಪ್ರೆಯಸಿಯನ್ನು ಮಾರ್ಚ್‌ನ ಪ್ರಾರಂಬದಲ್ಲಿ ಭೇಟಿಯಾಗಿದ್ದನು. ಇಬ್ಬರ ಮನೆ ಬಹಳಷ್ಟು ದೂರದಲ್ಲಿವೆ. ಇದರಿಂದ ಸುಲಭದಲ್ಲಿ ಭೇಟಿಯಾಗಲು ಸಾಧ್ಯವಾಗುತ್ತಿರಲಿಲ್ಲ ಎನ್ನುವ ಕಾರಣಕ್ಕೆ ಇವರಿಬ್ಬರು ಫೋನ್‌‌‌ನಲ್ಲಿ ಮಾತನಾಡುತ್ತಿದ್ದರು.

ಒಂದು ತಿಂಗಳಿನ ಪ್ರೀತಿಯ ಫೋನ್‌ ಕರೆಯ ಬಿಲ್ಲು ನೋಡಿದ ನಂತರ ಈಗ ಈತನು ಫೇಸ್‌ಬುಕ್‌ ಮೂಲಕ ಚಾಟ್‌ ಮಾಡಲು ಪ್ರಾರಂಭಿಸಿದ್ದಾನಂತೆ ಮತ್ತು ತಂದೆ ಮಾತ್ರ ಟೆಲಿಫೋನ್‌ ಕಂಪೆನಿಯ ವಿರುದ್ದ ಹರಿ ಹಾಯುತ್ತಿದ್ದಾನೆ, ಆದರೆ ತನ್ನ ಮಗ ಮಾಡಿರುವ ಈ ಬಿಲ್ಲಿನ ಅರಿವು ಈತನಿಗೆ ಗೊತ್ತಿಲ್ಲ ಅಂತ ಕಾಣುತ್ತೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments