Select Your Language

Notifications

webdunia
webdunia
webdunia
webdunia

ಈತನಿಗಿದೆ ಕೂದಲಿನ ಬಾಲ, ಹನುಮನೆಂದು ಪೂಜಿಸುತ್ತಿದ್ದಾರೆ ಜನರು

ಈತನಿಗಿದೆ ಕೂದಲಿನ ಬಾಲ, ಹನುಮನೆಂದು ಪೂಜಿಸುತ್ತಿದ್ದಾರೆ ಜನರು
, ಬುಧವಾರ, 16 ಏಪ್ರಿಲ್ 2014 (17:16 IST)
PR
ಮಂಗನಿಂದ ಮಾನವ ಎಂದು ಡಾರ್ವಿನ ಸಿದ್ದಾಂತ ಹೇಳುತ್ತದೆ, ಮಂಗಗಳಿಗೆ ಬಾಲ ಇರುತ್ತದೆ ಆದರೆ ಮನುಷ್ಯನಿಗೆ ಇರುವುದಿಲ್ಲ. ಆದರೆ ಉತ್ತರ ಪ್ರದೇಶದಲ್ಲಿ ಒಬ್ಬ 6 ವರ್ಷದ ಹುಡುಗನನ್ನು ಜನರು ಹನುಮಾನ ಎಂದು ಪೂಜಿಸಲು ಪ್ರಾರಂಭಿಸಿದ್ದಾರೆ. ಈ ಹುಡುಗನ ಬೆನ್ನಿನ ಕೆಳಗಡೆ ಉದ್ದವಾದ ಕೂದಲು ಬೆಳೆದಿವೆ. ಇದನ್ನು ಜನರು ಈತನನ್ನು ಹನುಮಾನನ ಸ್ವರೂಪ ಎಂದು ನಂಬಲು ಪ್ರಾರಂಭ ಮಾಡಿದ್ದಾರೆ. ಇದನ್ನು ಹನುಮನ ಬಾಲ ಎಂದು ಜನರು ನಂಬುತ್ತಿದ್ದಾರೆ. ಮಗುವನ್ನು ಹನುಮಾನ ಎಂದು ನಂಬಿ , ಈ ಹುಡುಗನಿಗೆ ಪೂಜೆಯನ್ನು ಕೂಡ ಮಾಡುತ್ತಿದ್ದಾರೆ.

ಹುಡುಗನ ಹೆಸರು ಅಮರ್‌ ಸಿಂಗ್‌ ಇದೆ ಎಂದು ಬ್ರಿಟಿಷ ವೆಬ್‌‌‌ಸೆಟ್‌ ' ಡೆಲಿ ಮೆಲ್‌‌' ತಿಳಿಸಿದೆ. ಈ ಬಾಲಕ ಹುಟ್ಟಿದ್ದಾಗಲೇ ಇತನಿಗೆ ಹಿಂಬದಿಯಲ್ಲಿ ಬಾಲ ಇತ್ತು ಎಂದು ಇತನ ಪಾಲಕರು ಹೇಳುತ್ತಿದ್ದಾರೆ. ಈಗ ಕೂದಲು ಬೆಳೆದು ದಟ್ಟವಾಗಿವೆ. ಇದು ದೇವರು ನಿಡಿದ ಕೊಡುಗೆ ಎಂದು ಆ ಕೂದಲನ್ನು ಕತ್ತರಿಸುತ್ತಿಲ್ಲ.

ಈ ಕೂದಲನ್ನು 'ಸ್ಪಾಯಿನಾ ಬಾಯಿಫಿಡಾ' ಎಂದು ಮೆಡಿಕಲ್‌‌‌ ಶಬ್ದಕೋಶದಲ್ಲಿ ತಿಳಿಸಿಲಾಗಿದೆ. ಹುಟ್ಟಿದ ತಕ್ಷಣ ಈ ಕುದಲು ಬರುವುದು ಒಂದು ರೀತಿಯ ರೋಗ ವಾಗಿದೆ ಎಂದು ವೈದ್ಯರ ಅಭಿಪ್ರಾಯವಾಗಿದೆ.
ಸೊಂಟದ ಎಲುಬುಗಳು ಸರಿಯಾಗಿ ಬೆಳೆಯದಿದ್ದಾಗ ಈ ತರಹದ ಕೂದಲು ಬರುತ್ತವೆ ಎಂದು ವೈದ್ಯರ ಅಭಿಪ್ರಾಯವಾಗಿದೆ.

ಆದರೆ ವೈದ್ಯರು ಏನೇ ಹೆಳಲಿ , ಜನರು ಮಾತ್ರ ಇತನ್ನು ಹನುಮಾನನ ಸ್ವರೂಪ ಎಂದು ನಂಬಿ ಪೂಜೆ, ಅರ್ಚನೆ ಸಲ್ಲಿಸಲು ಪ್ರಾರಂಭ ಮಾಡಿದ್ದಾರೆ.

Share this Story:

Follow Webdunia kannada