Daily Horoscope
✕

ಪತ್ರಿಕೋದ್ಯಮದಲ್ಲಿ ಕೈಯಾಡಿಸಲಿರುವ ಪ್ರಿನ್ಸ್ ವಿಲಿಯಂ

Webdunia
ಬ್ರಿಟಿಷ್ ಸಿಂಹಾಸನದ ಭಾವೀ ವಾರಸುದಾರ ರಾಜಕುಮಾರ ವಿಲಿಯಮ್ ಈಗ ಸಂವಿಧಾನದ ನಾಲ್ಕನೇ ಆಧಾರ ಸ್ತಂಭದತ್ತ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ. ಅಂದರೆ ಪತ್ರಿಕೋದ್ಯಮದಲ್ಲಿ ತಮ್ಮ ವೃತ್ತಿಸಾಮರ್ಥ್ಯ ಪರೀಕ್ಷಿಸಲು ನಿರ್ಧರಿಸಿದ್ದಾರೆ.

ಈ ರಾಜಕುಮಾರನನ್ನು ಸಾರ್ವಜನಿಕ ಜೀವನಕ್ಕೆ ಮತ್ತು ಅಂತಿಮವಾಗಿ ಸಿಂಹಾಸನವೇರುವುದಕ್ಕೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ವಿಲಿಯಮ್‌ಗೆ ಯಾವುದೆಲ್ಲಾ ವೃತ್ತಿಯ ಅನುಭವ ಒದಗಿಸಬಹುದು ಎಂದು ಯೋಚಿಸುತ್ತಿರುವ ಕ್ಲಿಯರೆನ್ಸ್ ಹೌಸ್ ಚರ್ಚಿಸಿದ ವಿಭಾಗಗಳಲ್ಲಿ ಪತ್ರಿಕೋದ್ಯಮವೂ ಒಂದು.

ಗಾರ್ಡಿಯನ್ ವರದಿ ಪ್ರಕಾರ, ಮಾಧ್ಯಮಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಆತನಿಗೆ ಒಳ್ಳೆಯದು ಎಂದು ಕ್ಲಿಯರೆನ್ಸ್ ಹೌಸ್‌ನಲ್ಲಿ ರಾಜಕುಮಾರನ ಭವಿಷ್ಯ ನಿರ್ಣಯ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆದರೆ ವಿಲಿಯಮ್, ಡಯಾನಾ ಸಾವಿಗೆ ಕಾರಣ ಎನ್ನಲಾಗುತ್ತಿರುವ 'ಪಾಪರಾಝಿ' ತಂಡವನ್ನು ಸೇರಿಕೊಳ್ಳುವ ಸಾಧ್ಯತೆಗಳು ಕಡಿಮೆ. ಅದರ ಬದಲು ಪ್ರಮುಖ ರಾಷ್ಟ್ರೀಯ ದೈನಿಕವೊಂದರಲ್ಲಿ ಕೆಲಸ ಮಾಡಬಹುದು. ಆತನಿಗೆ ಬೈಲೈನ್ ಕೂಡ ಬಹುತೇಕ ನಿರ್ಧರಿಸಲಾಗಿದೆ. ಆತ ಬರೆಯುವ ಲೇಖನಗಳಿಗೆ 'ವಿಲಿಯಮ್ ವೇಲ್ಸ್' ಎಂಬ ಬೈಲೈನ್ ಬಳಸುವ ಯೋಚನೆ ನಡೆದಿದೆ.

ಈಗಾಗಲೇ ರಾಯಲ್ ಆರ್ಮಿಯಲ್ಲಿ ಸೇವೆ ಸಲ್ಲಿಸಿರುವ ವೇಲ್ಸ್ ರಾಜಕುಮಾರ ವಿಲಿಯಮ್, ಸದ್ಯಕ್ಕೆ ಪೈಲಟ್ ಆಗುವ ನಿಟ್ಟಿನಲ್ಲಿ ಲಿಂಕನ್‌ಶೈರ್‌ನಲ್ಲಿ ರಾಯಲ್ ಏರ್‌ಫೋರ್ಸ್‌ನಲ್ಲಿ ತರಬೇತಿ ಪಡೆಯುತ್ತಿದ್ದಾನೆ. ವರ್ಷಾಂತ್ಯದಲ್ಲಿ ಆತ ರಾಯಲ್ ನೌಕಾಪಡೆಯಲ್ಲೂ ಕೆಲಸದ ಅನುಭವ ಪಡೆಯಲಿದ್ದಾನೆ.

ಅದರ ನಂತರ ಸಲಹೆಗಾರರು ಆತನಿಗೆ ಮಾನವಾಸಕ್ತಿಯ ಜೀವನದಲ್ಲಿ ತರಬೇತಿ ನೀಡಲು ಬಯಸಿದ್ದು, ಮುಂದೊಂದು ದಿನ ಆತ ಯಾವ ರೀತಿ ದೇಶ ಆಳಬೇಕು ಎಂಬುದನ್ನು ನಿರ್ಧರಿಸುವಲ್ಲಿ ಈ ರೀತಿಯ ಶಿಕ್ಷಣ ಅತ್ಯಗತ್ಯವಾಗಿರುತ್ತದೆ.

ಆತ ಸಶಸ್ತ್ರಪಡೆಗಳ ಬಗ್ಗೆ ತಿಳಿದುಕೊಂಡಿದ್ದಾನೆ. ಈಗ ದೇಶದ ಬಗ್ಗೆ ತಿಳಿದುಕೊಳ್ಳಬೇಕಿದೆ ಎಂದು ಅಧಿಕಾರಿಗಳು ಹೇಳಿರುವುದನ್ನು ಬ್ರಿಟಿಷ್ ದೈನಿಕ ಗಾರ್ಡಿಯನ್ ವರದಿ ಮಾಡಿದೆ.

ವಿಲಿಯಮ್‌ಗೆ ತರಬೇತಿ ನೀಡಲು ಉದ್ದೇಶಿಸಲಾಗಿರುವ ಇತರ ಆಯ್ಕೆಗಳೆಂದರೆ ವಿದೇಶಾಂಗ ಕಚೇರಿ ಅಥವಾ ಪೌರಸೇವೆ ಹೇಗೆ ನಡೆಯುತ್ತದೆ ಎಂಬುದನ್ನು ತಿಳಿದುಕೊಳ್ಳಲು ಯಾವುದಾದರೂ ಸರಕಾರಿ ಕಚೇರಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಐತಿಹಾಸಿಕ ಕ್ಷಣ.. ಕೊನೆಗೂ ತಿರುಪ್ಪರಂಕುಂದ್ರಂನಲ್ಲಿ ಬೆಳಗಿದ ಕಾರ್ತಿಕ ದೀಪ: ಅಪರೂಪದ ಕ್ಷಣದ ವಿಡಿಯೋ ಇಲ್ಲಿದೆ Video

ದೇವಸ್ಥಾನಗಳನ್ನು ನಿರ್ಮಿಸುವ ಬದಲು ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಬೇಕು: ಬಿಕೆ ಹರಿಪ್ರಸಾದ್

ಕೇಂದ್ರದ ಪರಿಷ್ಕೃತ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಡಿಎಂಕೆ ಬೆಂಬಲ: ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯೇ

ಗ್ರಾಹಕರಿಗೆ ಕೊಂಚ ಸಮಾಧಾನ: ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ದರ ವಿವರ

ತಿರುಪ್ಪರಂಕುಂದ್ರಂನಲ್ಲಿ ಕಾರ್ತಿಕ ದೀಪ ಬೆಳಗಲು ಸುಪ್ರೀಂಕೋರ್ಟ್ ನಲ್ಲಿ ವಾದಿಸಿದ ವಕೀಲರು ಇವರೇ ನೋಡಿ

Show comments