ನಾಯಿಗೆ ಕೂಡಿಬಂದ ಕಂಕಣಭಾಗ್ಯ!!

Webdunia
ಬುಧವಾರ, 14 ನವೆಂಬರ್ 2007 (11:22 IST)
PTI
ಹದಿನೈದು ವರ್ಷಗಳ ಹಿಂದೆ ಜೋಡಿ ಶ್ವಾನಗಳನ್ನು ಕೊಂದ ಪಾಪ ಪರಿಹಾರಕ್ಕಾಗಿ 33 ವರ್ಷದ ಯುವಕನೊಬ್ಬ ನಾಯಿಯನ್ನೇ ಮದುವೆಯಾದ ಘಟನೆ ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ನಡೆದಿದೆ.

ಮಧುರೈನಿಂದ 50 ಕಿ.ಮೀ. ದೂರದಲ್ಲಿರುವ ಮನಮಧುರೈನ ಗಣೇಶ ದೇವಸ್ಥಾನದಲ್ಲಿ "ಸೆಲ್ವಿ" ಎಂಬ ಹೆಸರಿನ ನಾಯಿ (ಮದುಮಗಳು)ಗೆ 33 ವರ್ಷದ ಸೆಲ್ವಕುಮಾರ್ ಮಂಗಳಸೂತ್ರವನ್ನು ಕಟ್ಟಿದರು.

ಸೀರೆಯಿಂದ ಅಲಂಕೃತಗೊಂಡ ಹತ್ತು ವರ್ಷ ಪ್ರಾಯದ ಮದುವಣಗಿತ್ತಿ ಸೆಲ್ವಿಯನ್ನು ಬಹಳ ಅದ್ದೂರಿಯಿಂದ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಕರೆತರಲಾಯಿತು. ನಂತರ ಮದುಮಗಳಿಗೆ "ಬ್ರೆಡ್" ನ ಔತಣವನ್ನು ಕೂಡ ನೀಡಲಾಯಿತು.

ಹದಿನೈದು ವರ್ಷಗಳ ಹಿಂದೆ ಜೋಡಿ ಶ್ವಾನಗಳನ್ನು ಕೊಂದ ನಂತರ ತನಗೆ ಪಾರ್ಶ್ವವಾಯು ಬಡಿದಿತ್ತು. ಇದರಿಂದಾಗಿ ನನಗೆ ನಡೆಯಲು ಕೂಡ ಸಾಧ್ಯವಾಗಿರಲಿಲ್ಲ. ಜ್ಯೋತಿಷಿಯೊಬ್ಬರು ಇದು "ಶ್ವಾನಹತ್ಯಾ ದೋಷ" ಎಂದು ಹೇಳಿದ್ದು ಈ ಪಾಪದ ಪರಿಹಾರವಾಗಿ ಪ್ರಾಣಿಯನ್ನು ಮದುವೆಯಾಗುವಂತೆ ಸಲಹೆ ನೀಡಿದ್ದರು. ಈ ಕಾರಣದಿಂದಾಗಿ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಹೇಳಿದ ಮದುಮಗ ಸೆಲ್ವಕುಮಾರ್, ಸೆಲ್ವಿಯನ್ನು ಕೊನೆಯವರೆಗೂ ಕಾಪಾಡುವುದಾಗಿ ಪ್ರತಿಜ್ಞೆ ಮಾಡಿದರು.

ನಾಯಿಯನ್ನು ಮದುವೆಯಾಗುವ ಮೂಲಕ ತಾನು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಂಡ ಕಾರಣ ಇನ್ನು ಮುಂದೆ ಒಳ್ಳೆಯದಾಗಲಿದೆ ಎಂದು ಜ್ಯೋತಿಷ್ಯರು ಸಲಹೆ ಮಾಡಿದ್ದಾಗಿ ಕುಮಾರ್ ಹೇಳಿದರು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೀಸಲಾತಿ ಪರಿಗಣಿಸಿ, ಖಾಲಿ ಹುದ್ದೆ ಭರ್ತಿ ಮಾಡಿ: ರಾಜ್ಯ ಸರ್ಕಾರಕ್ಕೆ ಬಿವೈ ವಿಜಯೇಂದ್ರ ಒತ್ತಾಯ

ಓಮನ್‌ನಲ್ಲಿ ತೈಲ ಟ್ಯಾಂಕರ್‌ಗೆ ಇರಾನ್ ಕ್ಷಿಪಣಿ ಡಿಕ್ಕಿ ಬಳಿಕ ರಾಜಸ್ಥಾನದ ವ್ಯಕ್ತಿ ನಾಪತ್ತೆ

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಬೆಂಗಳೂರಿನಿಂದ ಹೊರಡಬೇಕಿದ್ದ 34 ವಿಮಾನಗಳು ರದ್ಧು

ಖಮೇನಿ ಹತ್ಯೆ ಖಂಡಿಸುವವರ ಬಗ್ಗೆ ಪರಮೇಶ್ವರ್‌ ಹೀಗಂದ್ರು

ಮನೆಯಲ್ಲಿ ತಾಯಿ ಒಬ್ಬರೆ ಇದ್ದಾಗ ದಾವಣಗೆರೆ ಜಿಲ್ಲಾಧಿಕಾರಿ ಮನೆಗೆ ಬಾಂಬ್ ಬೆದರಿಕೆ

Show comments