Webdunia - Bharat's app for daily news and videos

Install App

ಗುಜರಾತ್ ದಂಗೆಯ ಪ್ರಶ್ನೆಗೆ ಉತ್ತರಿಸಲು ತಡಬಡಾಯಿಸಿದ ಮೋದಿ

Webdunia
ಬುಧವಾರ, 16 ಏಪ್ರಿಲ್ 2014 (17:22 IST)
2002 ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಂಭವಿಸಿದ ಗೋಧ್ರೋತ್ತರ ಗಲಭೆ ಕುರಿತು ಕ್ಷಮೆಯಾಚಿಸುವುದಕ್ಕೆ ಸಂಬಂಧಿಸಿದ ವಿವಾದಾಸ್ಪದ ಪ್ರಶ್ನೆಗೆ ಉತ್ತರಿಸುವುದನ್ನು ತಪ್ಪಿಸಿಕೊಂಡ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಇತರರ ಜತೆ ಕ್ಷಮೆ ಯಾಚಿಸಲು ಹೇಳುವ ಮೊದಲು ಕಾಂಗ್ರೆಸ್ ತಾನು ಮಾಡಿರುವ ಪಾಪಕ್ಕೆ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.
PTI

" ಕಾಂಗ್ರೆಸ್ಸಿನಿಂದ ಯಾರು ಕೂಡ ನನ್ನನ್ನು ಭೇಟಿಯಾಗಲು ಬಂದಿಲ್ಲ. ಅಲ್ಲದೇ ಅವರಲ್ಲಿ ಯಾರೂ ಕ್ಷಮೆ ಬಗ್ಗೆ ನನ್ನ ಜತೆ ಮಾತನಾಡಿಲ್ಲ. ಕಾಂಗ್ರೆಸ್ ಜನರು ಇತರರಿಂದ ಕ್ಷಮೆ ಕೇಳಲು ಹೇಳುವ ಮೊದಲು ತಮ್ಮ ಪಾಪಗಳನ್ನು ಗಣನೆಗೆ ತೆಗೆದು ಕೊಳ್ಳಬೇಕು " ಎಂದು ಟಿವಿ ಸಂದರ್ಶನವೊಂದರಲ್ಲಿ ಹೇಳಿದರು.

ಮೋದಿ ದೇಶಕ್ಕೆ "ಅಪಾಯ" ಎಂಬ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಹಣಕಾಸು ಸಚಿವರ ಹೇಳಿಕೆಯನ್ನು ನೀವು ಒಪ್ಪಿಕೊಳ್ಳುತ್ತೀರಾ ಎಂದು ಕೇಳಿದಾಗ "ಮನಮೋಹನ್ ಸಿಂಗ್ ಅವರ ಹತ್ತು ವರ್ಷದ ಅವಧಿಯಲ್ಲಿ ಅವರು ಈ ರೀತಿ ಮಾತನಾಡುವುದನ್ನು ನಾನು ಕೇಳಿಲ್ಲ" ಎಂದು ಅವರು ಉತ್ತರಿಸಿದರು.

ಯಾವುದೇ ವ್ಯಕ್ತಿಯಿಂದ ಅಪಾಯವಿದೆ ಎನ್ನುವುದಾದರೆ, ಅದು ರಸ್ತೆ ಅಥವಾ ಮೊಹಲ್ಲಾದಲ್ಲಿ ವಾಸಿಸುವ ಯಾರಿಂದಾದರೂ ಆಗಬಹುದು ಎಂದು ಗುಜರಾತ್ ಮುಖ್ಯಮಂತ್ರಿ ಹೇಳಿದರು

ಮೋದಿ ಅಲೆಯ ಬಗ್ಗೆ ಕೇಳಿದಾಗ "ಇದು ಬಿಜೆಪಿ ಅಲೆ, ಮೋದಿ ಅಲೆಯಲ್ಲ" ಎಂದು ಅವರು ಉತ್ತರಿಸಿದರು.

" ಮೋದಿ ಪಕ್ಷಕ್ಕಿಂತ ದೊಡ್ಡವನಲ್ಲ" ಎಂದು ಅವರು ಹೇಳಿದರು.

2014 ರ ಲೋಕಸಭಾ ಚುನಾವಣೆ "ಮೋದಿ ಕೇಂದ್ರೀಕೃತ" ಎಂದು ಕೇಳಿದ್ದಕ್ಕೆ ಕೂಡ ಅವರು ಋಣಾತ್ಮಕ ಉತ್ತರವನ್ನು ನೀಡಿದರು.

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments