Webdunia - Bharat's app for daily news and videos

Install App

ನರೇಂದ್ರ ಮೋದಿ ಹಣಿಯಲು ವಾಜಪೇಯಿ ಅಸ್ತ್ರ ಬಳಸಿಕೊಂಡ ಕಾಂಗ್ರೆಸ್

Webdunia
ಶುಕ್ರವಾರ, 11 ಏಪ್ರಿಲ್ 2014 (19:04 IST)
ಮಾಜಿ ಪ್ರಧಾನಿ ಮತ್ತು ಬಿಜೆಪಿ ಸಂಸ್ಥಾಪಕ ಅಟಲ್ ಬಿಹಾರಿ ವಾಜಪೇಯಿಯನ್ನು, ಈಗ ಕಾಂಗ್ರೆಸ್ ನರೇಂದ್ರ ಮೋದಿಗೆ ಗುರಿಯಾಗಿ ಹೊಸ ಶಸ್ತ್ರವನ್ನಾಗಿಸಿ ಕೊಂಡಿದೆ.
PTI

ತನ್ನ ವೆಬ್‌ಸೈಟಿನ ಬ್ಲಾಗ್‌ನಲ್ಲಿ ವಾಜಪೇಯಿಯನ್ನು ಹೊಗಳಿರುವ ಕಾಂಗ್ರೆಸ್, 2002 ಗೋಧ್ರಾ ದಂಗೆಯ ನಂತರ ವಾಜಪೇಯಿ "ರಾಜಧರ್ಮವನ್ನು ಅನುಸರಿಸಿ" ಎಂದು ಮೋದಿಗೆ ಹೇಳಿದ್ದ ಹೇಳಿಕೆಯನ್ನು ಪ್ರಕಟಿಸಿದೆ.

ಗುಜರಾತ್ ದಂಗೆಯ ಕಾರಣಕ್ಕೆ 2004ರ ಲೋಕಸಭಾ ಚುನಾವಣೆಯನ್ನು ಸೋತೆವು ಎಂದು ವಾಜಪೇಯಿ ಅಭಿಪ್ರಾಯ ಪಟ್ಟಿದ್ದರು ಎಂದು ಕಾಂಗ್ರೆಸ್ ಹೇಳಿದೆ.

' ಬಿಜೆಪಿಗೆ ತನ್ನ ರಾಜಧರ್ಮವನ್ನು ನೆನಪಿಸುವವರು ಯಾರು ಇಲ್ಲ ', ಎಂಬ ಶೀರ್ಷಿಕೆಯ ಲೇಖನ ಹೀಗೆ ಹೇಳುತ್ತದೆ -"ಬಿಜೆಪಿಯ ಯಾವುದೇ ನಾಯಕ ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ನಿಲುವಿಗೆ ಸರಿಸಮರಲ್ಲ. ಪಕ್ಷದ ಸಂಸ್ಥಾಪಕ ಅಧ್ಯಕ್ಷ ವಾಜಪೇಯಿ 1998ರಲ್ಲಿ ಅಧಿಕಾರಕ್ಕೇರಿದ್ದು, 2004 ರಲ್ಲಿ ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಗತಿಪರ ಒಕ್ಕೂಟ ಅವರನ್ನು ಸೋಲಿಸುವವರೆಗೂ ಭಾರತದ ಪ್ರಧಾನ ಮಂತ್ರಿಯಾಗಿದ್ದರು. ತಮ್ಮ ಸೋಲಿಗೆ ಕಾರಣ ಏನೆಂದು ಅವರಿಗೆ ಚೆನ್ನಾಗಿ ಗೊತ್ತಿತ್ತು. 2002 ರಲ್ಲಿ ತನ್ನ ರಾಜ್ಯದಲ್ಲಿ ಕೋಮು ಗಲಭೆಯನ್ನು ನಿಯಂತ್ರಿಸಲು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ವೈಫಲ್ಯ, ಎನ್‌ಡಿಎ ಸೋಲಿಸಿ ಕಾರಣವಾಯಿತು ಎನ್ನುವುದು ವಾಜಪೇಯಿಗೆ ಸ್ಪಷ್ಟವಾಗಿ ತಿಳಿದಿತ್ತು".

ಮೋದಿ ವಿರುದ್ಧ ಕ್ರಮವನ್ನು ತೆಗೆದುಕೊಳ್ಳದಿದ್ದರೆ ಪಕ್ಷ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತದೆ ಎಂದು ಅವರು ನಂಬಿದ್ದರು.

" ಕೆಲವರು ಮೋದಿಯನ್ನು ಉಚ್ಛಾಟಿಸಲು ಬಯಸುತ್ತಾರೆ. ನಾನು ಕೂಡ ಅದೇ ಅಭಿಪ್ರಾಯವನ್ನು ಹೊಂದಿದ್ದೆ" ಎಂದು ಅಟಲ್ ಮನಾಲಿಯಲ್ಲಿ ಹೇಳಿದ್ದರು.

ಎನ್‌ಡಿಎಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ವಹಿಸಿಕೊಂಡಿದ್ದ ಜಸ್ವಂತ್ ಸಿಂಗ್ ಕೂಡ ಇದನ್ನು ದೃಢೀಕರಿಸಿದ್ದಾರೆ. "2002 ರಲ್ಲಿ ವಾಜಪೇಯಿ, ಬಿಜೆಪಿ ಹೈಕಮಾಂಡ್ ಮೋದಿ ವಿರುದ್ಧ ಕ್ರಮವನ್ನು ಕೈಗೊಳ್ಳದಿದ್ದರೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಬೆದರಿಕೆ ಒಡ್ಡಿದ್ದರು " ಎಂದು ಸಿಂಗ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments