Select Your Language

Notifications

webdunia
webdunia
webdunia
webdunia

ಹುಡುಗರು ತಪ್ಪು ಮಾಡುತ್ತಾರೆ, ಅದಕ್ಕಾಗಿ ಅವರನ್ನು ಗಲ್ಲಿಗೇರಿಸಬಾರದು: ಮುಲಾಯಂ

ಹುಡುಗರು ತಪ್ಪು ಮಾಡುತ್ತಾರೆ, ಅದಕ್ಕಾಗಿ ಅವರನ್ನು ಗಲ್ಲಿಗೇರಿಸಬಾರದು: ಮುಲಾಯಂ
ಲಖನೌ , ಶುಕ್ರವಾರ, 11 ಏಪ್ರಿಲ್ 2014 (18:50 IST)
ತಮ್ಮಪಕ್ಷ ಅಧಿಕಾರಕ್ಕೆ ಬಂದರೆ, ಅತ್ಯಾಚಾರಿಗಳಿಗೆ ಮರಣದಂಡನೆ ಕೊಡುವುದನ್ನು ನಿಷೇಧಿಸುತ್ತೇವೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಹೇಳಿದ್ದಾರೆ.
PTI

ಉತ್ತರ ಪ್ರದೇಶದ ಮೊರದಾಬಾದ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಿದ ಯಾದವ್ "ಹುಡುಗರು ತಪ್ಪುಗಳನ್ನು ಮಾಡುತ್ತಾರೆ. ಅದಕ್ಕಾಗಿ ಅವರಿಗೆ ನೇಣು ಹಾಕುವುದು ಸರಿಯಲ್ಲ. ನಾವು ಅತ್ಯಾಚಾರಿ ವಿರೋಧಿ ಕಾನೂನುಗಳನ್ನು ರದ್ದು ಮಾಡುತ್ತೇವೆ" ಎಂದು ಹೇಳಿದ್ದಾರೆ.

ತನ್ನ ಹೇಳಿಕೆಗೆ ವಿವರಣೆ ನೀಡಿರುವ ಯಾದವ್, ಹುಡುಗರು ಮತ್ತು ಹುಡುಗಿಯರು ಪರಸ್ಪರ ಸ್ನೇಹದಿಂದಿರುತ್ತಾರೆ. ಒಂದೊಮ್ಮೆ ಅವರು ಅಚಾನಕ್ ಆಗಿ ಎಡವಿದರೆ, ಅತ್ಯಾಚಾರದ ದೂರನ್ನು ದಾಖಲಿಸಲಾಗುತ್ತದೆ. ನಾವು ಈ ಕಾನೂನನ್ನು ಬದಲಾಯಿಸುತ್ತೇವೆ ಮತ್ತು ಈ ಕಾನೂನಿನ ದುರ್ಬಳಕೆಯನ್ನು ತಡೆಯುತ್ತೇವೆ " ಎಂದು ಯಾದವ್ ಹೇಳಿದ್ದಾರೆ.

ಯಾದವ್ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಲವಾದ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಆದಾಗ್ಯೂ, ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಯಾದವ್ ಪರ ವಹಿಸಿದ್ದಾರೆ. ನಾನು ಅತ್ಯಾಚಾರದಂತ ಘೋರ ಅಪರಾಧವನ್ನು ಖಂಡಿಸುತ್ತೇನೆ. ಆದರೆ, ಅತ್ಯಾಚಾರಿಗಳಿಗೆ ಮರಣದಂಡನೆ ನೀಡುವುದನ್ನು ಬೆಂಬಲಿಸುವುದಿಲ್ಲ ಎಂದು ಮೇಧಾ ಹೇಳಿದ್ದಾರೆ.

"ಅತ್ಯಾಚಾರ ಒಂದು ಸಣ್ಣ ತಪ್ಪು ಅಲ್ಲ. ಅದಕ್ಕೆ ಕ್ಷಮೆ ಇಲ್ಲ. ಆದರೆ ನಾನು ಮರಣದಂಡನೆಗೆ ವಿರುದ್ಧವಾಗಿದ್ದೇನೆ " ಎಂದು ಮೇಧಾ ಪಾಟ್ಕರ್ ಸ್ಪಷ್ಟಪಡಿಸಿದ್ದಾರೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada