ಜಾಗತಿಕ ಮಾರುಕಟ್ಟೆಗಳ ಚೇತರಿಕೆಯ ವಹಿವಾಟಿನಿಂದಾಗಿ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 18 ಪಾಯಿಂಟ್‌ಗಳ ಅಲ್ಪ ಏರಿಕೆ ಕಂಡಿದೆ.
ಬ್ಯಾಂಕಿಂಗ್, ಗೃಹೋಪಕರಣ ವಸ್ತುಗಳು, ವಾಹನೋದ್ಯಮ ಮತ್ತು ಉಕ್ಕು ಕ್ಷೇತ್ರದ ಶೇರುಗಳ ಖರೀದಿಗೆ ಹೂಡಿಕೆದಾರರು ಆಸಕ್ತಿ ತೋರಿದ್ದರಿಂದ ಸೂಚ್ಯಂಕ ಚೇತರಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಬಿಎಸ್‌ಇ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 18.49 ಪಾಯಿಂಟ್‌ಗಳ ಏರಿಕೆ ಕಂಡು 22,486.73 ಅಂಕಗಳಿಗೆ ತಲುಪಿದೆ.
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 6.45 ಪಾಯಿಂಟ್‌ಗಳ ಏರಿಕೆ ಕಂಡು 6739.55 ಅಂಕಗಳಿಗೆ ತಲುಪಿದೆ.
ಹಿಂಡಾಲ್ಕೋ, ಭಾರ್ತಿ ಏರ್‌ಟೆಲ್, ಎಸ್‌ಎಸ್‌ಎಲ್‌ಟಿ, ಎಸ್‌ಬಿಐ, ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಐಸಿಐಸಿಐ ಬ್ಯಾಂಕ್ ಮತ್ತು ಐಟಿಸಿ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.